ತಿರುವನಂತಪುರ: ಕೋವಿಡ್ ಕೊರನಾ ಹಿನ್ನೆಲೆಯಲ್ಲಿ ಪುಟಾಣಿಗಳಿಗೆ ಅಂಗನವಾಡಿಗಳಿಗೆ ತಲಪಲಾಗದಿದ್ದರೂ, ಅಂಗನವಾಡಿಗಳು ಆನ್‍ಲೈನ್ ಜಗತ್ತಿನಲ್ಲಿ ಕಥೆ, ಹಾಡುಗಳು ಮತ್ತು ನೃತ್ಯಗಳೊಂದಿಗೆ ಇನ್ನೂ ಸಕ್ರಿಯಗೊಳಿಸುವ ಹೊಸ ವ್ಯವಸ್ಥೆಯೊಂದಕ್ಕೆ ಕೇರಳ ಶೀಘ್ರ ಸಾಕ್ಷಿಯಾಗಲಿದೆ. ಅಂಗನವಾಡಿಗಳ ಶಿಕ್ಷಕಿಯರು ಪ್ರತಿ ವಿದ್ಯಾರ್ಥಿಗೆ ಪೆÇ್ರಜೆಕ್ಟರ್‍ಗಳ ಸಹಾಯದಿಂದ ವೀಡಿಯೊಗಳನ್ನು ಕಳುಹಿಸುವ ವಿನೂತನ ವ್ಯವಸ್ಥೆ ಜಾರಿಗೆ ಬರುತ್ತಿದ್ದು ಮಕ್ಕಳಿಗೆ ಕಲಿಸಲು ತಮ್ಮದೇ ಆದ ಕಥೆಗಳು ಮತ್ತು ಹಾಡುಗಳೊಂದಿಗೆ ಆನ್‍ಲೈನ್ ಚಟುವಟಿಕೆ ರಾಜ್ಯಾದ್ಯಂತ ಜಾರಿಗೊಳ್ಳಲಿದೆ.
ಲಾಕ್ ಡೌನ್ ಬಳಿಕ ಪುಟಾಣಿಗಳಿಗೆ ರಿವರ್ಸ್ ಕ್ಯಾರೆಂಟೈನ್ ವ್ಯವಸ್ಥೆಯನ್ನು ಜಾರಿಗೆ ತರುವ ನಿರ್ಧಾರವನ್ನು ಸರ್ಕಾರ ಈಗಾಗಲೇ ಪ್ರಕಟಿಸಿರುವುದರಿಂದ ಅಂಗನವಾಡಿಗಳು ಪ್ರಸ್ತುತ ವರ್ಷ ಕಾರ್ಯಾಚರಿಸುವುದು ಅಸಾಧ್ಯವಾಗಲಿದೆ. ಆದ್ದರಿಂದ ವಿದ್ಯಾರ್ಥಿಗಳು ತರಗತಿಯನ್ನು ತಪ್ಪಿಸಿಕೊಳ್ಳದಂತೆ ರಾಜ್ಯ ಮಟ್ಟದಲ್ಲಿ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಮೂರು ವರ್ಷದೊಳಗಿನ ಎಲ್ಲ ಮಕ್ಕಳನ್ನು ಅಂಗನವಾಡಿಗಳಿಗೆ ದಾಖಲಿಸಲಾಗಿದ್ದು, ಇನ್ನೂ ಶಾಲೆಗಳಿಗೆ ಸೇರ್ಪಡೆಗೊಳ್ಳದ ಆರು ವರ್ಷದ ಕೆಳಗಿನ ಮಕ್ಕಳು ಅಂಗನವಾಡಿ ಆನ್ ಲೈನ್ ವ್ಯಾಪ್ತಿಗೆ ತರುವ ಮೂಲಕ ಭವಿಷ್ಯತ್ತಿನ ಸ್ವರೂಪಗಳನ್ನು ಭದ್ರಗೊಳಿಸಲುನವೀನತೆಯನ್ನು ಅಳವಡಿಸುವ ಚಿಂತನೆ ಮೂಡಿಬಂದಿದೆ.
ರಾಜ್ಯ ಮಟ್ಟದಲ್ಲಿ, ಪ್ರತಿ ಜಿಲ್ಲೆಗೆ ಕಲಿಸಬೇಕಾದ ವಿಷಯಗಳನ್ನು ನಿರ್ಧರಿಸಲಾಗಿದೆ. ಎರಡು ವಾರಗಳ ಸುದೀರ್ಘ ವಿಷಯಗಳಿಗಾಗಿ ಮಕ್ಕಳ ಪಾಠಗಳನ್ನು ಪೆÇೀಷಕರ ವಾಟ್ಸಾಪ್ಗೆ ಕಳುಹಿಸಲಾಗುತ್ತದೆ. ಸ್ಮಾರ್ಟ್‍ಫೆÇೀನ್ ಇಲ್ಲದ ಮನೆಗಳನ್ನು ಗುರುತಿಸಿ ಅಂಗನವಾಡಿ ಶಿಕ್ಷಕಿಯರು ಪೋಷಕರನ್ನು ಭೇಟಿಯಾಗಿ ಪುಟಾಣಿಘಲಿಗೆ ಕಲಿಸಬೇಕಾದ ವಿಷಯಗಳ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡುವರು. ಶಿಕ್ಷಕರು ಅಗತ್ಯ ಸೂಚನೆಗಳನ್ನು ಫೆÇೀನ್ ಮೂಲಕ ಅಥವಾ ವೈಯಕ್ತಿಕವಾಗಿ ನೀಡಲು ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಅಧ್ಯಯನದ ಜೊತೆಗೆ, ಅಂಗನವಾಡಿ ಕಾರ್ಯಕರ್ತರು ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ಒದಗಿಸುವ ಉದ್ದೇಶವನ್ನು ಹೊಂದಿದ್ದಾರೆ, ಹಾಲುಣಿಸುವ ಮಹಿಳೆಯರು, ಗರ್ಭಿಣಿಯರು ಮತ್ತು ಹದಿಹರೆಯದ ಹುಡುಗಿಯರಿಗೆ ಅಗತ್ಯದ ವಸ್ತು-ಮಾರ್ಗದರ್ಶನವನ್ನು ಒದಗಿಸಲು ವ್ಯವಸ್ಥೆ ಕಲ್ಪಿಸಲಾಗುವುದು. ಲಾಕ್ ಡೌನ್ ಸಂದರ್ಭದಲ್ಲೂ ಪ್ರತಿಯೊಬ್ಬರಿಗೂ ಪೋಷಕಾಹಾರ ವಿತರಣೆ ನಡೆಯಲಿದೆ. ಅಂಗನವಾಡಿ ಕಾರ್ಮಿಕರು ಪೋಷಕಾಹಾರ ಕಿಟ್ ಗಳನ್ನು ನೇರವಾಗಿ ಮನೆಗಳಿಗೆ ಹಸ್ತಾಂತರಿಸುವರು.
ಮನೆಯಲ್ಲಿ ಟಿವಿ ಅಥವಾ ಸ್ಮಾರ್ಟ್‍ಫೆÇೀನ್ ಇಲ್ಲದ ಶಾಲಾ ಮಕ್ಕಳು ಪ್ರಸ್ತುತ ಆಯಾ ಪರಿಸರದ ಅಂಗನವಾಡಿ ಕೇಂದ್ರಗಳಲ್ಲಿ ಆನ್‍ಲೈನ್ ತರಗತಿಗಳನ್ನು ನಡೆಸಲು ಸ್ಥಳೀಯಾಡಳಿತ ಮುಂದಾಗುವಂತೆ ಸರ್ಕಾರ ಸೂಚಿಸಿದೆ. ಮಕ್ಕಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದೂ ಕಡ್ಡಾಯವಾಗಲಿದೆ.
ಉತ್ತಮ ಮೂಲಸೌಕರ್ಯಗಳನ್ನು ಹೊಂದಿರುವ ಅಂಗನವಾಡಿಗಳಿದ್ದರೆ ಅಂತವನ್ನು ವಿದೇಶ ಮತ್ತು ಅನ್ಯರಾಜ್ಯಗಳಿಂದ ಬರುವ ಜನರಿಗೆ ಅನುಕೂಲವಾಗುವಂತೆ ಕ್ವಾರಂಟೈನ್ ಗಳಿಗಾಗಿ ಬಳಸಲೂ ಸರ್ಕಾರ ಚಿಂತನೆ ನಡೆಸುತ್ತಿದೆ.


