ತಿರುವನಂತಪುರ: ಕೋವಿಡ್ ಸೋಂಕು ಭೀತಿಯ ಹಿನ್ನೆಲೆಯಲ್ಲಿ ಸಾರ್ವಜನಿಕ ಸಂಪರ್ಕದ ಸುಗಮತೆಗಾಗಿ ಆರಂಭಿಸಲಾದ ಮಿತಿಗೊಳಪಟ್ಟ ಬಸ್ ಸೌಕರ್ಯಗಳ ಮಧ್ಯೆ ಖಾಸಗೀ ಬಸ್ ಮಾಲಿಕರು ಮತ್ತು ಉದ್ಯೋಗಿಗಳ ಬೇಡಿಕೆಯಂತೆ ಖಾಸಗೀ ಬಸ್ ದರವನ್ನು ಕನಿಷ್ಠ 10 ರೂ. ಗಳಷ್ಟಾದರೂ ಹೆಚ್ಚಿಸಲು ನ್ಯಾಯಮೂರ್ತಿ ರಾಮಚಂದ್ರನ್ ಆಯೋಗ ಶಿಫಾರಸು ಮಾಡಿದೆ. ಆಯೋಗ ತನ್ನ ಪ್ರಾಥಮಿಕ ವರದಿಯನ್ನು ಗುರುವಾರ ಸರ್ಕಾರಕ್ಕೆ ಹಸ್ತಾಂತರಿಸಿದೆ.
ವರದಿಯ ಪ್ರಕಾರ, ಕನಿಷ್ಠ ವೇತನವನ್ನು 10 ಅಥವಾ 12 ರೂಗಳಿಗೆ ಏರಿಸಲಾಗುವುದು. ಏತನ್ಮಧ್ಯೆ, ಈಗಿರುವ ಕನಿಷ್ಠ 8 ರೂ ದರವನ್ನು ಮುಂದುವರಿಸಿದರೆ ಹೊರೆಯನ್ನು ಕಡಿಮೆ ಮಾಡಲು ಆಯೋಗವು ಸೂಚಿಸಿದೆ. ಆಯೋಗ ತನ್ನ ಮಧ್ಯಂತರ ವರದಿಯನ್ನು ಬಿಡುಗಡೆ ಮಾಡಿದ್ದು ಸಾರಿಗೆ ಸಚಿವರು ಶುಕ್ರವಾರ ಈ ಬಗ್ಗೆ ಸಭೆ ನಡೆಸಿರುವರೆಂದು ತಿಳಿದುಬಂದಿದೆ.
ವಿವಿಧ ಹಂತಗಳಲ್ಲಿ ಶುಲ್ಕವನ್ನು ಹೆಚ್ಚಿಸಲು ಮತ್ತು ಕನಿಷ್ಠ ಶುಲ್ಕದಿಂದ ಪ್ರಯಾಣಿಸುವ ದೂರವನ್ನು ಕಡಿಮೆ ಮಾಡಲು ಸೂಚಿಸಲಾಗಿದೆ. ಪ್ರಸ್ತುತ ಕನಿಷ್ಠ ಶುಲ್ಕ ಐದು ಕಿಲೋಮೀಟರ್ ಗೆ 8 ರೂ.ಗಳಾಗಿದೆ. 2.5 ಕಿ.ಮೀ ಗೆ ಕನಿಷ್ಠ ದರವನ್ನು ನಿಗದಿಪಡಿಸಲು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ಕೋವಿಡ್ ನಿಯಂತ್ರಣಗಳು ಇರುವಷ್ಟು ಕಾಲ ಮಾತ್ರ ಹೆಚ್ಚಿಸಬೇಕಾದ ಕನಿಷ್ಠ ಪ್ರಯಾಣ ದರ ಜಾರಿಯಲ್ಲಿರುತ್ತದೆ ಎಂದು ಸೂಚಿಸಲಾಗಿದೆ.


