ತಿರುವನಂತಪುರ: ಮುಂಬರುವ ಆಗಸ್ಟ್ ನಲ್ಲಿ ರಾಜ್ಯದಲ್ಲಿ ಕೋವಿಡ್ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕೋವಿಡ್ ಪರಿಶೀಲನೆಯ ನಂತರ ಗುರುವಾರ ಸಂಜೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಇಂತಹ ತುರ್ತು ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಮುಖ್ಯಮಂತ್ರಿ ಸೂಚನೆ ನೀಡಿದರು. ಆಗಸ್ಟ್‍ನಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಅತೀ ಹೆಚ್ಚಿದೆ. ರಾಜ್ಯದ ಪ್ರತಿ 10 ಲಕ್ಷ ಜನರಲ್ಲಿ 109 ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಸಾವಿನ ಪ್ರಮಾಣ ಶೇಕಡಾ 0.6 ಆಗಿದೆ. ದೇಶದ ಒಟ್ಟು ಶೇ. 3 ಕ್ಕಿಂತ ಹೆಚ್ಚಿದೆ. ಈಗಾಗಿರುವ 22 ಸಾವುಗಳಲ್ಲಿ 20 ಇತರ ಗಂಭೀರ ಕಾಯಿಲೆಗಳಿಂದ ಬಂದವು ಎಂದು ಅವರು ಹೇಳಿದರು.
ಜನರು ಬೃಹತ್ ಸಂಖ್ಯೆಯಲ್ಲಿ ಜೊತೆಯಾಗುವುದನ್ನು ಸರ್ಕಾರ ನಿರ್ಬಂಧಿಸಿದೆ. ಸಾರ್ವಜನಿಕ ಸಂಸ್ಥೆಗಳನ್ನು ಸೋಂಕುರಹಿತಗೊಳಿಸಬೇಕು. ಸೂಚನೆಗಳನ್ನು ಪಾಲಿಸದವರ ಚಿತ್ರಗಳನ್ನು ಮತ್ತು ಮಾಹಿತಿಯನ್ನು ಪೆÇಲೀಸ್ ನಿಯಂತ್ರಣ ಕೊಠಡಿಗೆ ಕಳುಹಿಸಲು ಸಾರ್ವಜನಿಕರು ಆಸಕ್ತಿವಹಿಸಬೇಕು. ಪೆÇಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ತಪಾಸಣೆ ಬಿಗಿಯಾದಂತೆ, ವಲಸಿಗರು ಸೇರಿದಂತೆ ಅವರ ಸಂಬಂಧಿಗಳೂ ವಿಮಾನ ನಿಲ್ದಾಣದಲ್ಲಿ ಹೆಚ್ಚು ಸಮಯ ಕಾಯಬೇಕಾಗಬಹುದು. ಈ ಹಿನ್ನೆಲೆಯಲ್ಲಿ ಮತ್ತಷ್ಟು ಜಾಗರೂಕತೆ ಅಗತ್ಯವಾಗಿ ಪಾಲಿಸಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು.
ರಾತ್ರಿ 9 ರ ಬಳಿಕ ಸಾರ್ವಜನಿಕ ಪ್ರಯಾಣದ ಮೇಲೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ತುರ್ತು ಪ್ರಯಾಣದ ಅಗತ್ಯವಿದ್ದವರಿಗೆ ಅನುಮತಿ ನೀಡಲಾಗುವುದು. ದ್ವಿಚಕ್ರ ವಾಹನಗಳ ಸಂಚಾರ ವೇಳೆ ಮಾಸ್ಕ್ ಧರಿಸದಿರುವುದು ಗಮನಕ್ಕೆ ಬಂದಿದೆ. ಹೆಲ್ಮೆಟ್ ಮತ್ತು ಮಾಸ್ಕ್ ಧರಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎಚ್ಚರಿಕೆ ನೀಡಿರುವರು.


