ಕುಂಬಳೆ: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕøತಿಕ ಪ್ರತಿಷ್ಠಾನ ಉಡುಪಿ, ಗಡಿನಾಡು ಕಾಸರಗೋಡಿನ ವೃತ್ತಿ ಕಲಾವಿದರು, ಇವರ ಸಹಕಾರದೊಂದಿಗೆ ಕೊರೊನಾ ದಿಗ್ಬಂಧದ ನಡುವೆ ಯಕ್ಷಗಾನ ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಜೂನ್ 11ರಿಂದ 13ರರವರೆಗೆ ಗಡಿನಾಡ ವೃತ್ತಿಕಲಾವಿದರ ಆನ್‍ಲೈನ್ ಯಕ್ಷಗಾನ ನಡೆಯಲಿದೆ.
ಧಾತ್ರಿ ಮೀಡಿಯಾ ಬೆಂಗಳೂರು ಮೀಡಿಯಾ ಪಾಲುದಾರರಾಗಿದ್ದು ವರ್ಣ ಸ್ಟುಡಿಯೊ ನೀರ್ಚಾಲು ಚಿತ್ರೀಕರಣ ಗೈಯಲಿದ್ದಾರೆ. ಣಣಠಿ://ತಿತಿತಿ.ಥಿouಣube.ಛಿom/ಛಿ/ShಡಿeemuಞhಚಿSಖಒ ಲ್ಲಿ ನೇರಪ್ರಸಾರ ಜರಗಲಿದೆ.
ಪ್ರತೀದಿನ ಸಂಜೆ 5.30ರಿಂದ ರಾತ್ರಿ 7ರ ವರೆಗೆ ನೇರ ಪ್ರಸಾರ ನಡೆಯಲಿದ್ದು, ಜೂನ್ 11ರಂದು ಕಂಸವಧೆ, 12ರಂದು ಸೀತಾಕಲ್ಯಾಣ ಹಾಗೂ 13ರರಂದು ಇಂದ್ರಜಿತು ಕಾಳಗ ಪ್ರಸಂಗ ಪ್ರಸ್ತುತಿಗೊಳ್ಳಲಿದೆ.
ಹಿಮ್ಮೇಳದಲ್ಲಿ ಭಾಗವತರು ರಾಮಕೃಷ್ಣ ಮಯ್ಯ ಸಿರಿಬಾಗಿಲು, ಸತ್ಯನಾರಾಯಣ ಪುಣಿಂಚಿತ್ತಾಯ ಪೆರ್ಲ, ಗೋಪಾಲಕೃಷ್ಣ ಮಯ್ಯ ಪೆಲತ್ತಡ್ಕ, ಹಾಗೂ ಚೆಂಡೆ ಮದ್ದಳೆಯಲ್ಲಿ ಅಡೂರು ಲಕ್ಷ್ಮೀನಾರಾಯಣ ರಾವ್, ಶ್ರೀಧರ ಪಡ್ರೆ, ನೇರೊಳು ಗಣಪತಿ ನಾಯಕ್, ಲವಕುಮಾರ ಐಲ, ಲಕ್ಷ್ಮೀಶ ಬೇಂಗ್ರೋಡಿ, ಉದಯ ಕಂಬಾರು. ಚಕ್ರತಾಳ ಸುರೇಶ ಆಚಾರ್ಯ, ಹಾಸ್ಯ ಬಾಲಕೃಷ್ಣ ಮಣಿಯಾಣಿ ಮವ್ವಾರು. ಸ್ತ್ರೀ ವೇಶ ಬಾಲಕೃಷ್ಣ ಸೀತಾಂಗೋಳಿ, ರಕ್ಷಿತ್ ದೇಲಂಪಾಡಿ. ಪುರುಷ ಪಾತ್ರಗಳಲ್ಲಿ ಹಿರಿಯ ಖ್ಯಾತ ಕಲಾವಿದರುಗಳಾದ ರಾಧಾಕೃಷ್ಣ ನಾವಡ ಮಧೂರು, ದಿವಾಣ ಶಿವಶಂಕರ ಭಟ್, ಸರವು ರಮೇಶ ಭಟ್, ಪೆರ್ಮುದೆ ಜಯಪ್ರಕಾಶ ಶೆಟ್ಟಿ, ಹರಿನಾರಾಯಣ ಭಟ್ ಎಡನೀರು, ಸಂತೋಷ್ ಕುಮಾರ್ ಮಾನ್ಯ, ಹರೀಶ ಶೆಟ್ಟಿ ಮಣ್ಣಾಪು, ನಾರಾಯಣ ಮೂಲಡ್ಕ, ಮಾಧವ ಪಾಟಾಳಿ ನೀರ್ಚಾಲು, ಶಬರೀಶ ಮಾನ್ಯ, ಪ್ರಕಾಶ ನಾಯಕ್ ನೀರ್ಚಾಲು, ಶಿವಾನಂದ ಪೆರ್ಲ, ಶೇಖರ ಜಯನಗರ, ಸುಕೇಶ, ಮಾ.ಕಿಶನ್ ಮತ್ತಿತರರು ಭಾಗವಹಿಸುವರು. ಕೊಲ್ಲಂಗಾನ ಶ್ರೀದುರ್ಗಾಪರಮೇಶ್ವರಿ ಕೃಪಾ ಪೋಶಿತ ಯಕ್ಷಗಾನ ಮಂಡಳಿ ವೇಷಭೂಷಣ ಒದಗಿಸಲಿದ್ದಾರೆ ಎಂದು ಸಿರಿಬಾಗಿಲು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.
ಈ ಹಿಂದೆ ಕೊರೊನಾಸುರ ಕಾಳಗ ಯಕ್ಷ ಜಾಗೃತಿ, ಕೊರೊನಾ ಜಾಗೃತಿ ಬಗ್ಗೆ ಯಕ್ಷಗಾನ ಕಲಾವಿದರಿಗೆ ಪ್ರಬಂಧ ಸ್ಪರ್ದೆ ಪ್ರತಿಷ್ಠಾನ ಏರ್ಪಡಿಸಿರುವುದನ್ನು ಸ್ಮರಿಸಬಹುದು.


