ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 6 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ವೇಳೆ ಇಬ್ಬರು ಗುಣಮುಖರಾಗಿದ್ದಾರೆ. ಸೋಂಕಿತರಲ್ಲಿ ಮೂವರು ವಿದೇಶದಿಂದ ಹಾಗು ಮೂವರು ಮಹಾರಾಷ್ಟ್ರದಿಂದ ಬಂದವರೆಂದು ಜಿಲ್ಲಾ ವೈದ್ಯಾಧಿಕಾರಿ ಡಾ|ಎ.ವಿ.ರಾಮದಾಸ್ ತಿಳಿಸಿದ್ದಾರೆ.
ಮಹಾರಾಷ್ಟ್ರದಿಂದ ಬಂದ 7 ವರ್ಷದ ಮಂಗಲ್ಪಾಡಿ ನಿವಾಸಿ ಮತ್ತು 52 ವರ್ಷದ ಮಂಗಲ್ಪಾಡಿ ನಿವಾಸಿ ಹಾಗು ಇವರ 30 ವರ್ಷದ ಪುತ್ರಿಗೆ ಸೋಂಕು ತಗುಲಿದೆ.
ವಿದೇಶದಿಂದ ಬಂದ 38 ವರ್ಷದ ಪಳ್ಳಿಕೆರೆ ನಿವಾಸಿ, 44 ವರ್ಷದ ಚೆಂಗಳ ಪಂಚಾಯತ್ ನಿವಾಸಿ, 34 ವರ್ಷದ ಮಂಗಲ್ಪಾಡಿ ಪಂಚಾಯತ್ ನಿವಾಸಿಗೆ ರೋಗ ಬಾಧಿಸಿದೆ.
ಉದಯಗಿರಿ ಸಿಎಫ್‍ಎಲ್‍ಟಿಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 29 ವರ್ಷದ ಚೆಮ್ನಾಡ್ ಪಂಚಾಯತ್ ನಿವಾಸಿ, 62 ವರ್ಷದ ಪುತ್ತಿಗೆ ಪಂಚಾಯತ್ ನಿವಾಸಿ ಗುಣಮುಖರಾಗಿದ್ದಾರೆ. ಇವರು ಮಹಾರಾಷ್ಟ್ರದಿಂದ ಬಂದಿದ್ದರು.
ಕೇರಳದಲ್ಲಿ 133 ಮಂದಿಗೆ ಸೋಂಕು :
ಕೇರಳ ರಾಜ್ಯದಲ್ಲಿ ಭಾನುವಾರ 133 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ತೃಶ್ಶೂರು-16, ಪಾಲ್ಘಾಟ್-15, ಕೊಲ್ಲಂ-13, ಇಡುಕ್ಕಿ-11, ಆಲಪ್ಪುಳ-10, ಕೋಟ್ಟಯಂ-10, ಮಲಪ್ಪುರಂ-10, ಕಲ್ಲಿಕೋಟೆ-10, ಕಣ್ಣೂರು-10, ತಿರುವನಂತಪುರ-9, ಪತ್ತನಂತಿಟ್ಟ-8, ಕಾಸರಗೋಡು-6, ಎರ್ನಾಕುಳಂ-5 ಮಂದಿಗೆ ಎಂಬಂತೆ ರೋಗ ಬಾಧಿಸಿದೆ.
ರೋಗ ಬಾಧಿಸಿದವರಲ್ಲಿ 80 ಮಂದಿ ವಿದೇಶದಿಂದ ಬಂದವರು. 43 ಮಂದಿ ಇತರ ರಾಜ್ಯಗಳಿಂದ ಬಂದವರು. 9 ಮಂದಿಗೆ ಸಂಪರ್ಕದಿಂದ ರೋಗ ಬಾ„ಸಿದೆ. ಇಡುಕ್ಕಿ ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ರೋಗ ಬಾಧಿಸಿದೆ.
ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 93 ಮಂದಿ ಗುಣಮುಖರಾಗಿದ್ದಾರೆ. ತೃಶ್ಶೂರು-37, ಮಲಪ್ಪುರಂ-30(ತಲಾ ಒಬ್ಬರು ತೃಶ್ಶೂರು ಮತ್ತು ಪತ್ತನಂತಿಟ್ಟ ನಿವಾಸಿ), ಆಲಪ್ಪುಳ-9, ಕಲ್ಲಿಕೋಟೆ-5(ಒಬ್ಬರು ಕಣ್ಣೂರು ನಿವಾಸಿ), ಪತ್ತನಂತಿಟ್ಟ-4, ಕೋಟ್ಟಯಂ-3, ಕಣ್ಣೂರು-2, ಕಾಸರಗೋಡು-2, ಪಾಲ್ಘಾಟ್-1 ಎಂಬಂತೆ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 1490 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1659 ಮಂದಿ ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ 143969 ಮಂದಿ ನಿಗಾವಣೆಯಲ್ಲಿದ್ದಾರೆ. ಇವರಲ್ಲಿ 141919 ಮಂದಿ ಮನೆಗಳಲ್ಲೂ, 2050 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಭಾನುವಾರ ಶಂಕಿತ 325 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


