ಮುಳ್ಳೇರಿಯ: ಮುಳ್ಳೇರಿಯ ನಿವಾಸಿ ಮಿಮಿಕ್ರಿ ಕಲಾವಿದ ಸುರೇಶ್ ಯಾದವ್ ಅವರ ಹೆಸರು ಗಿನ್ನೆಸ್ ದಾಖಲೆಯಲ್ಲಿ ಸೇರ್ಪಡೆಗೊಂಡಿದೆ.
2018 ಡಿಸೆಂಬರ್‍ನಲ್ಲಿ ಮಲೆಯಾಳದ ಫ್ಲವರ್ಸ್ ಚಾನೆಲ್ ನಿರಂತರ 12 ಗಂಟೆ ಕಾಲ ನಡೆಸಿದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ
ಅವರ ಹೆಸರು ಗಿನ್ನೆಸ್ ದಾಖಲೆಯಲ್ಲಿ ಸೇರ್ಪಡೆಯಾಗಿದೆ. ಹಾಗೂ ಇದಕ್ಕೆ ಸಂಬಂಧಿಸಿದ ಪ್ರಮಾಣಪತ್ರ ಅವರ ಕೈಸೇರಿದೆ. ಸುರೇಶ್ ಜೊತೆಗೆ 1527 ಮಂದಿ ಕಲಾವಿದರು ಈ
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮುಳ್ಳೇರಿಯ ಜಯನಗರ ಕೊರಕ್ಕೋಡ್ ನಿವಾಸಿಯಾದ ಸುರೇಶ್ ಕಳೆದ 25 ವರ್ಷಗಳಿಂದ ಮಿಮಿಕ್ರಿ ಕಲಾವಿದರಾಗಿ ಪ್ರಸಿದ್ಧಿ ಪಡೆದಿದ್ದಾರೆ. ಕುಂಬಳೆ- ಮುಳ್ಳೇರಿಯ ಸಂಚರಿಸುವ ಗುರುವಾಯೂರಪ್ಪನ್ ಬಸ್‍ನ ಚಾಲಕ ಗ್ರಾಮೀಣ ಪ್ರತಿಭೆ ಸುರೇಶ್ ಅವರ ಹೆಸರು ಗಿನ್ನೆಸ್ ದಾಖಲೆಯಲ್ಲಿ ಸೇರ್ಪಡೆಗೊಂಡಿರುವುದು ನಾಡಿನಲ್ಲಿ ಸಂತಸ ಮೂಡಿಸಿದೆ.



