ಮಧೂರು: ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ಆಶ್ರಯದಲ್ಲಿ ಸಮಾಜ ಸುಧಾರಕ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಅವರ 69 ನೇ ಪುಣ್ಯ ತಿಥಿಯಂಗವಾಗಿ ಶನಿವಾರ ಸಂಸ್ಮರಣೆ ಕಾರ್ಯಕ್ರಮ ಶ್ರೀ ರಾಮನಾಥ ಸಾಂಸ್ಕøತಿಕ ಭವನದಲ್ಲಿ ಜರಗಿತು.
ಸಂಘಟಕ ಜಗದೀಶ್ ಕೂಡ್ಲು ಅವರು ಸ್ವಾಮೀಜಿಯವರ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಹರೀಶ್ಚಂದ್ರ ಸೂರ್ಲು ಅವರು ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಅರ್ಚಕ ರಾಮದಾಸ್, ಭಾಸ್ಕರ, ಸತೀಶ್ ಕೂಡ್ಲು, ಸಂದೇಶ್ ಕೋಟೆಕಣಿ, ಪ್ರದೀಪ್ ಕುಮಾರ್ ಬೇಕಲ್ ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿಯ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹರೀಶ್ಚಂದ್ರ ಸೂರ್ಲು ವಂದಿಸಿದರು.


