ತಿರುವನಂತಪುರ: ಮಹತ್ವಾಕಾಂಕ್ಷೆಯ ತಿರುವನಂತಪುರ-ಕಾಸರಗೋಡು ಸೆಮಿ ಹೈಸ್ಪೀಡ್ ಸಿಲ್ವರ್ ಲೈನ್ ರೈಲು ಹಳಿ ಕಾಮಗಾರಿ 2022 ರಲ್ಲಿ ಆರಂಭಗೊಳ್ಳಲಿದೆ. ಸುಮಾರು ನಾಲ್ಕು ಗಂಟೆಗಳೊಳಗೆ ಕಾಸರಗೋಡು ತಲುಪುವ ಈ ಯೋಜನೆಯಿಂದ 9 ಗಂಟೆಗಳಷ್ಟು ಉಳಿತಾಯವಾಗಲಿದೆ.
ಈ ಯೋಜನೆಗೆ ಕೇರಳ ಸಚಿವ ಸಂಪುಟ ಅನುಮತಿ ನೀಡಿದ್ದು, ಸುಮಾರು 63,941 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಈ ಹಿಂದೆ ಸುಮಾರು 1.25 ಲಕ್ಷ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಯೋಜಿಸಿದ್ದ ಹೈಸ್ಪೀಡ್ ರೈಲು ಹಳಿ ಯೋಜನೆ ಹಲವು ಕಾರಣಗಳಿಂದ ಕೈಬಿಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸೆಮಿ ಹೈಸ್ಪೀಡ್ ರೈಲು ಯೋಜನೆಯನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿತ್ತು. ಕೊಚ್ಚವೇಳಿಯಿಂದ ಕಾಸರಗೋಡು ವರೆಗೆ 529.45 ಕಿ.ಮೀ. ದೂರವಿದ್ದು, ಒಂದು ಕಿಲೋ ಮೀಟರ್ ದೂರಕ್ಕೆ ಸಾಗಲು 2.75 ರೂ. ದರದಂತೆ ಪ್ರಯಾಣಿಕರಿಗೆ 1,450 ರೂ. ಟಿಕೆಟ್ ದರ ವಸೂಲಿ ಮಾಡಬೇಕಾಗಿ ಬರಲಿದೆ. ಈ ಯೋಜನೆಯಲ್ಲಿ ರೈಲು ಗಾಡಿಗಳಲ್ಲಿ ಸರಕು ಲಾರಿಗಳನ್ನು ಸಾಗಿಸುವ ಬಗ್ಗೆ ಪರಿಗಣನೆಯಲ್ಲಿದೆ.
ಗಂಟೆಗೆ 200 ಕಿ.ಮೀ. ವೇಗದಲ್ಲಿ ಸಂಚರಿಸುವ ಈ ರೈಲುಗಾಡಿಗೆ ಆರಂಭದಲ್ಲಿ ಆರು ಬೋಗಿಗಳನ್ನು ಅಳವಡಿಸಲಾಗುವುದು. ಆ ಬಳಿಕ 12 ಬೋಗಿಗಳನ್ನು ಅಳವಡಿಸಲಾಗುವುದು. ಈ ರೈಲು ಗಾಡಿ ಹಾದು ಹೋಗುವ ರೈಲು ನಿಲ್ದಾಣಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಸೌರ ವಿದ್ಯುತ್ ಬಳಸಲಾಗುವುದು. ರೈಲು ನಿಲ್ದಾಣಗಳಲ್ಲಿ ವಿದ್ಯುತ್ ವಾಹನಗಳಿಗೆ ಚಾರ್ಜ್ ಮಾಡಲು ವ್ಯವಸ್ಥೆಗೊಳಿಸಲಾಗುವುದು. ಪ್ರತಿ ದಿನ 67,740 ಮಂದಿ ಪ್ರಯಾಣಿಕರು ಪ್ರಯಾಣಿಸುವ ಬಗ್ಗೆ ನಿರೀಕ್ಷಿಸಲಾಗಿದೆ.
ಈ ಯೋಜನೆಗೆ ಅಗತ್ಯವಾದ ವೆಚ್ಚದ 33,700 ಕೋಟಿ ರೂ.ಯನ್ನು ಸಾಲ ಪಡೆಯಲಾಗುವುದು. ಅದಕ್ಕಾಗಿ ವಿದೇಶಿ ಏಜೆನ್ಸಿಗಳನ್ನು ಸಂಪರ್ಕಿಸಲಾಗುವುದು. ಈಗಾಗಲೇ ವಿದೇಶಿ ಏಜೆನ್ಸಿಗಳೊಂದಿಗೆ ಚರ್ಚೆ ನಡೆಯುತ್ತಿದೆ. ಅಫೀಶಿಯಲ್ ಡೆವಲಪ್‍ಮೆಂಟ್ ಅಸಿಸ್ಟೆನ್ಸ್ ರೋಲಿಂಗ್ ಪ್ಲಾನ್ ಪ್ರಕಾರ ವಿದೇಶಿ ಏಜೆನ್ಸಿಯಾಗಿರುವ ಜೆಯ್ಕ್ ಹಣ ಹೂಡಲು ಮುಂದಾಗಿದೆ. ಸಾಲದ ಬಳಿಕ ಅಗತ್ಯವಾಗಿರುವ ಹಣವನ್ನು ಕೇಂದ್ರ ಹಾಗು ರಾಜ್ಯ ಸರಕಾರ ವಹಿಸಲಿದೆ.
ರೈಲು ಹಳಿ ನಿರ್ಮಾಣಕ್ಕೆ ಅಗತ್ಯವಾದ ಭೂಸ್ವಾ„ೀನ ಮತ್ತು ನಷ್ಟ
ಪರಿಹಾರ ನೀಡಲು ಸುಮಾರು 13000 ಕೋಟಿ ರೂ. ಅಂದಾಜಿಸಲಾಗಿದೆ.
ಅಭಿಮತ:
- ತಿರುವನಂತಪುರ-ಕಾಸರಗೋಡು ಪ್ರಯಾಣವನ್ನು ನಾಲ್ಕು ಗಂಟೆಗಳೊಳಗೆ ಪೂರ್ತಿಗೊಳಿಸಲು ಸಾಧ್ಯವಾಗುವ ಸೆಮಿ ಹೈಸ್ಪೀಡ್ ಸಿಲ್ವರ್ ಲೈನ್ ರೈಲು ಹಳಿ ಕಾಮಗಾರಿ 2022 ರಲ್ಲಿ ಆರಂಭಿಸಲು ಸಾಧ್ಯವಾಗಬಹುದೆಂದು ನಿರೀಕ್ಷಿಸಲಾಗಿದೆ.
- ವಿ.ಅಜಿತ್ ಕುಮಾರ್, ಎಂ.ಡಿ.,
ಕೇರಳ ರೈಲ್ವೇ ಡೆವಲಪ್‍ಮೆಂಟ್ ಕಾರ್ಪರೇಶನ್