HEALTH TIPS

ಶೇಷವನದಲ್ಲಿ ಸೂರ್ಯಗ್ರಹಣಶಾಂತಿ ಹವನ ಜೂನ್ 21 ಭಾನುವಾರ

         ಕಾಸರಗೋಡು: ಜೂ. 21 ರಂದು ಭಾನುವಾರ ಜೇಷ್ಠಮಾಸದ ಅಮವಾಸ್ಯೆಯಂದು ಮೃಗಶಿರ ಹಾಗು ಅರಿದ್ರ ನಕ್ಷತ್ರ ಮಿಥುನ ರಾಶಿಯಲ್ಲಿ  ರಾಹುಗ್ರಸ್ತ ಸೂರ್ಯಗ್ರಹಣ ಸಂಭವಿಸಲಿದೆ. ಗ್ರಹಣದ ನಿಮಿತ್ತ ಮಿಥುನ ರಾಶಿಯ ಮೃಗಶಿರ ಆದ್ರೆ, ಪುನರ್ವಸ್ಸು  ಕರ್ಕಟಕ ರಾಶಿಯ ಪುನರ್ವಸ್ಸು ಅಂತ್ಯ 1 ಪಾದ, ಪುಷ್ಯಾ, ಅಶ್ಲೇಷ, ವೃಶ್ಚಿಕ ರಾಶಿಯ ವಿಶಾಕ, ಅನುರಾಧ, ಜೇಷ್ಠೆ ಮಕರ ರಾಶಿಯ ಉತ್ತರಾಷಾಡ, ಶ್ರವಣ, ಧನಿಷ್ಟೆ, ಇತ್ಯಾದಿ ಕೆಲವು ರಾಶಿ ಹಾಗು ನಕ್ಷತ್ರಗಳ ಮೇಲೆ ಕೆಟ್ಟ ಪರಿಣಾಮ ಬೀಳಲಿದೆ.
      ಈ ನಕ್ಷತ್ರ ರಾಶಿಯಲ್ಲಿ ಜನಿಸಿದವರ ಶ್ರೇಯಸ್ಸಿಗೊಸ್ಕರ ಮತ್ತು ಲೋಕ ಕಲ್ಯಾಣಾರ್ಥ ಕೂಡ್ಲಿನ ಬಾದಾರದ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಜೂನ್ 21 ಆದಿತ್ಯವಾರದಂದು ಶ್ರೀಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿಗಳ ಆಶೀರ್ವಾದದೊಂದಿಗೆ ಕುಂಬಳೆ ವಾಸುದೇವ ಅಡಿಗರ ನೇತೃತ್ವದಲ್ಲಿ ಕ್ಷೇತ್ರದ ಅರ್ಚಕ ಸುಬ್ರಾಯ ಕಾರಂತರ ಸಹಾಯದೊಂದಿಗೆ ಸಾಮೂಹಿಕ ಸೂರ್ಯಗ್ರಹಣಶಾಂತಿ ಹವನ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಕೊರೋನಾ ನಿಮಿತ್ತ ಸರಕಾರದ ಇಲ್ಲಾ ನಿಯಮಗಳನ್ನು ಪೂರ್ತಿಯಾಗಿ ಪಾಲಿಸಬೇಕಾಗಿ ವಿನಂತಿ. ಹೊಮದಲ್ಲಿ ಕುಳಿತುಕೊಳ್ಳಲು ಬಯಸುವವರು ಅಗತ್ಯವಿರುವ ಚಾಪೆ ಅಥವಾ ಬಟ್ಟೆಯನ್ನು ಅವರೇ ತರಬೇಕು. ಅಂದು ಬೆಳಗ್ಗೆ 10.13 ಗಂಟೆಗೆ ಆರಂಭಗೊಳ್ಳವ ಹವನ ಮಧ್ಯಾಹ್ನ 1.32 ಗಂಟೆಗೆ ಪೂರ್ಣಾಹುತಿಯಾಗಲಿದೆ. ಈ ಹವನದಲ್ಲಿ ಪಾಲ್ಗೊಳ್ಳಲಿಚ್ಚಿಸುವ ಭಕ್ತರು 50ಗ್ರಾಂ ಎಳ್ಳು ಮತ್ತು ಭಕ್ತಿಯಾನುಸಾರ ಎಳ್ಳೆಣ್ಣೆ ಹಾಗು 200 ರೂ ಸೇವಾಕಾಣಿಕೆ ಯೊಂದಿಗೆ ಅಂದು ಬೆಳಗ್ಗೆ 10 ಗಂಟೆಗೆ ಶ್ರೀಕ್ಷೇತ್ರ ತಲುಪತಕ್ಕದ್ದು. ಸೇವಾರ್ಥಿಗಳು ಅಂದು ಅಕ್ಕಿಯಿಂದ ಮಾಡಿದ ಆಹಾರ ಸೇವಿಸಬಾರದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries