ಬದಿಯಡ್ಕ: ಬದಿಯಡ್ಕ ಗ್ರಾ.ಪಂ. ಹಾಗೂ ಕುಟುಂಬಶ್ರೀ ಸಿಡಿಎಸ್ ಸಮಿತಿ ವತಿಯಿಂದ ಜನಸಾಮಾನ್ಯರ ಅನುಕೂಲತೆಗಳಿಗಾಗಿ ರೂ.20 ದರದಲ್ಲಿ ಊಟ ಲಭ್ಯವಾಗಲು ಜನಪರ ಹೋಟೆಲ್ ಗೆ ಗುರುವಾರ ಅಧಿಕೃತ ಚಾಲನೆ ನೀಡಲಾಯಿತು.
ಸಮಾರಂಭದಲ್ಲಿ ಕಡಿಮೆ ವೆಚ್ಚದ ಹೋಟೆಲ್ ನ್ನು ಉದ್ಘಾಟಿಸಿದ ಬದಿಯಡ್ಕ ಗ್ರಾ.ಪಂ.ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅವರು ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಸಾಮಾಜಿಕ ವ್ಯವಸ್ಥೆಗಳು ಹಳಿತಪ್ಪಿದೆ. ಉದ್ಯೋಗ ಸಹಿತ ಎಲ್ಲಾ ರಂಗಗಳಲ್ಲೂ ವ್ಯಾಪಕ ಹಿನ್ನಡೆ ಉಂಟಾಗಿದ್ದು ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರ ಅನುಕೂಲತೆಗೆ ಕಡಿಮೆ ದರದ ಊಟ ಲಭ್ಯವಾಗುವ ಹೋಟೆಲ್ ಆರಂಭಿಸಲಾಗಿದೆ ಎಂದು ತಿಳಿಸಿದರು.
ಗ್ರಾ.ಪಂ.ಉಪಾಧ್ಯಕ್ಷೆ ಝೈಬುನ್ನೀಸಾ ಅಧ್ಯಕ್ಷತೆ ವಹಿಸಿದ್ದರು.ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ ಅನ್ವರ್ ಓಝೋನ್, ಶಾಮಪ್ರಸಾದ ಮಾನ್ಯ, ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ, ವಿಶ್ವನಾಥ ಪ್ರಭು, ಐ.ಎನ್.ಪೈ, ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಸುರೇಂದ್ರ, ಗ್ರಾ.ಪಂ.ಕಾರ್ಯದರ್ಶಿ ಪ್ರದೀಪನ್ ಮೊದಲಾದವರು ಉಪಸ್ಥಿತರಿದ್ದರು. ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಸುಧಾ ಜಯರಾಂ ಸ್ವಾಗತಿಸಿ, ಗ್ರಾಮ ವಿಸ್ತರಣಾಧಿಕಾರಿ ಗೋಪಿಕಾ ವಂದಿಸಿದರು.