ಕುಂಬಳೆ: ಕುಂಬಳೆ ಗ್ರಾಮ ಪಂಚಾಯತಿಯ ಮಳೆ ಬೆಳೆ- 2020 ಕಾಯ9ಕ್ರಮ ಕಳತ್ತೂರಿನ ಕಿದೂರು ಅರಂತೋಡು ಗದ್ದೆಯಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಟು0ಬಶ್ರೀ ಸಿಡಿಎಸ್ ಅಧ್ಯಕ್ಷೆ ಸಬೂರ ವಹಿಸಿದ್ದರು.ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ಪುಂಡರೀಕಾಕ್ಷ.ಕೆ.ಎಲ್. ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಕುಟು0ಬಶ್ರೀ ಜಿಲ್ಲಾ ಮಿಷನ್ ಅಧಿಕಾರಿ ಸುರೇ0ದ್ರನ್, ಗ್ರಾ.ಪಂ.ಸದಸ್ಯ ಸುಕೇಶ್ ಭಂಡಾರಿ, ಸಿಡಿಎಸ್ ಸದಸ್ಯೆ ಪವಿತ್ರ ಉಪಸ್ಥಿರಿದ್ದರು. ಕುಟುಂಬಶ್ರೀ ಸದಸ್ಯರು, ಸ್ಥಳೀಯರು ಕಾರ್ಯಕ್ರಮದಲ್ಲಿ ಪಾಲ್ಗೊ0ಡಿದ್ದರು. ಕಸ್ತೂರಿ ಸ್ವಾಗತಿಸಿ, ಅಮೀರ್ ವಂದಿಸಿದರು.


