ತಿರುವನಂತಪುರ: ರಾಜ್ಯದಲ್ಲಿ 231 ಗ್ರಾಮ ಪಂಚಾಯತಿಗಳ ಕಾರ್ಯದರ್ಶಿಗಳನ್ನು ಸರ್ಕಾರ ವರ್ಗಾಯಿಸಿದೆ. ಅಕ್ಟೋಬರ್ ತಿಂಗಳ ಅಂತ್ಯದಲ್ಲಿ ಸ್ಥಳೀಯಾಡಳಿತ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕಾರ್ಯದರ್ಶಿಗಳ ವರ್ಗಾವಣೆಗೆ ಕ್ರಮಕೈಗೊಳ್ಳಲಾಗಿದೆ. ವರ್ಗಾವಣೆ ಆದೇಶ ಲಭಿಸಿದವರು ಪ್ರಸಕ್ತ ಕರ್ತವ್ಯ ನಿರ್ವಹಿಸುವ ಕಚೇರಿಗಳ ಮತದಾರರ ಪಟ್ಟಿ ತಯಾರಿಸುವ ಕೆಲಸಗಳಿಗೆ ಅಗತ್ಯದ ಸಹಾಯ ಒದಗಿಸುವಂತೆ ತಿಳಿಸಲಾಗಿದೆ.
ಅಸಿಸ್ಟೆಂಟ್ ಕಾರ್ಯದರ್ಶಿ, ಜ್ಯೂನಿಯರ್ ಸುಪರಿಂಟೆಂಡೆಂಟ್ ಹುದ್ದೆಗಳಲ್ಲಿರುವ 29 ಮಂದಿಗೆ ಭಡ್ತಿ ನೀಡಿ ಕಾರ್ಯದರ್ಶಿ, ಸೀನಿಯರ್ ಸುಪರಿಂಟೆಂಡೆಂಟ್ ಹುದ್ದೆಗಳಿಗೆ ನೇಮಿಸಲಾಗಿದೆ.


