ಕಾಸರಗೋಡು: ಕೋವಿಡ್ ನಿಯಂತ್ರಣದ ಹಿನ್ನೆಲೆಯಲ್ಲಿ ಮೊಟಕುಗೊಂಡಿದ್ದ ಪೆÇಲೀಸ್ ಅಕ್ಷಯ ಪಾತ್ರೆ ಕೇಂದ್ರೀಕರಿಸಿ ಅನಾಥರು ಹಾಗು ಅಶಕ್ತರಿಗೆ ನೀಡುತ್ತಿದ್ದ ಉಚಿತ ಆಹಾರ ವಿತರಣೆ ಪುನರಾರಂಭಗೊಂಡಿದೆ.
ಜನಮೈತ್ರಿ ಪೆÇಲೀಸ್ ಬೀದಿ ಬದಿ ಮಕ್ಕಳ ಚಾರಿಟಿ ಆಫ್ ಇಂಡಿಯಾ ಇದರ ಸಹಕಾರದೊಂದಿಗೆ ಆಹಾರ ವಿತರಣೆ ಆರಂಭಿಸಿತ್ತು. ಕಾಸರಗೋಡು ಪೆÇಲೀಸ್ ವತಿಯಿಂದ ನಗರ ಪೆÇಲೀಸ್ ಠಾಣೆ ಸನಿಹದಲ್ಲಿ ಅಕ್ಷಯ ಪಾತ್ರೆ ಯೋಜನೆ ಆರಂಭಿಸಲಾಗಿದೆ.
ಲಯನ್ಸ್ ಕ್ಲಬ್ ಆಫ್ ಚಂದ್ರಗಿರಿಯ ಸಹಕಾರದೊಂದಿಗೆ
ಯೋಜನೆ ಆರಂಭಿಸಲಾಗಿತ್ತು.
'ಹಸಿವು ರಹಿತ ಕಾಸರಗೋಡು' ಎಂಬ ಧ್ಯೇಯದೊಂದಿಗೆ ಅಕ್ಷಯ ಪಾತ್ರೆ ಆರಂಭಿಸಲಾಗಿದೆ. ಅರಂಭದಲ್ಲಿ ನೂರಕ್ಕೂ ಹೆಚ್ಚು ಮಂದಿ ಸೇವಿಸುತ್ತಿದ್ದರು. ನಂತರ ಕೋವಿಡ್ ಹಿನ್ನೆಲೆಯಲ್ಲಿ ಜಾರಿಗೆ ಬಂದ ಲಾಕ್‍ಡೌನ್‍ನಿಂದಾಗಿ ಆಹಾರ ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಪ್ರಸಕ್ತ ಮೈತ್ರಿ ಪೆÇಲೀಸ್ ಹಾಗು ಬೀದಿ ಬದಿ ಮಕ್ಕಳ ಚಾರಿಟಿ ಆಫ್ ಇಂಡಿಯ ಜತೆಗೂಡಿ ಬಡ ಜನತೆಯನ್ನು ಪತ್ತೆ ಹಚ್ಚಿ ಆಹಾರ ವಸ್ತು ಅವರಿಗೆ ತಲುಪಿಸಿಕೊಡುವ ಯೋಜನೆ ಆರಂಭಿಸಲಾಗಿದೆ.


