ಬದಿಯಡ್ಕ: ಮಾನ್ಯ ಜ್ಞಾನೋದಯ ಹಿರಿಯ ಪ್ರಾಥಮಿಕ ಶಾಲೆಗೆ ಕೊಡಕ್ಕಾಡ್ ನ ನಿವೃತ್ತ ಜವಾನ ಶ್ರೀಜಿತ್ ಬಾಲಕೃಷ್ಣನ್ ಅವರ ಪ್ರಾಯೋಜಕ ಕೊಡುಗೆಯಾಗಿ ಟಿ.ವಿ. ವಿತರಣೆ ಶುಕ್ರವಾರ ನಡೆಯಿತು.
ಬದಿಯಡ್ಕ ಗ್ರಾ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ್ ಮಾನ್ಯ ಅವರು ಮುಖ್ಯೋಪಾಧ್ಯಾಯ ಟಿ.ಗೋವಿಂದನ್ ನಂಬೂದಿರಿ ಅವರಿಗೆ ಟಿ.ವಿ. ಹಸ್ತಾಂತರಿಸಿ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುಬೈರ್ ಬಾಪಾಲಿಪೊನ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಟಿ ಗೋವಿಂದನ್ ನಂಬೂದಿರಿ ಸ್ವಾಗತಿಸಿ, ಶಾಲಾ ನೌಕರ ಸಂಘದ ಕಾರ್ಯದರ್ಶಿ ರೆಜು ಮಾಸ್ತರ್ ವಂದಿಸಿದರು.


