ತಿರುವನಂತಪುರ: ಈ ಹಿಂದಿನ ವರದಿಗಳನ್ನು ಹೋಲಿಸಿದರೆ ರಾಜ್ಯದಲ್ಲಿ ನಿನ್ನೆ(ಭಾನುವಾರ) ಕೋವಿಡ್ ರೋಗಿಗಳ ಸಂಖ್ಯೆಯಲ್ಲಿ ಗಮನಾರ್ಹ ಕುಸಿತ ಕಂಡುಬಂದಿರುವುದು ಆಶಾದಾಯಕ ಬೆಳವಣಿಗೆಯೆಂದು ಸಮೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಇದಲ್ಲದೆ 56 ಜನರನ್ನು ಗುಣಪಡಿಸಲಾಗಿದೆ. ಸಕಾರಾತ್ಮಕ ಪ್ರಕರಣಗಳಿಗಿಂತ ನಿನ್ನೆಯ ದಿನ ಗುಣಮುಖರಾದವರ ಸಂಖ್ಯೆ ಭರವಸೆಗೂ ಕಾರಣವಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಸುದ್ದಿ ಪ್ರಕಟಣೆಯಲ್ಲಿ ತಿಳಿಸಿದೆ. ರಾಜ್ಯದ ವಿವಿಧ ಆಸ್ಪತ್ರೆಗಳು ಮತ್ತು ಮನೆಗಳಲ್ಲಿ ಕ್ವಾರಂಟೈನ್ ಗೊಳಗಾದ ಜನರ ಸಂಖ್ಯೆ ಕುಸಿದಿದೆ. ನಿನ್ನೆ ಕೋವಿಡ್ ದೃಢಪಟ್ಟ 54 ರಲ್ಲಿ 23 ಮಂದಿ ವಿದೇಶದಿಂದ ಬಂದವರು.
ರಾಜ್ಯದಲ್ಲಿ ಕ್ವಾರಂಟೈನ್ ಗೊಳಗಾಗಿರುವವರಲ್ಲಿ ವಿವಿಧ ಜಿಲ್ಲೆಗಳಲ್ಲಾಗಿ 2,42,767 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 2,40,744 ಮನೆಗಳಲ್ಲೂ, 2023 ಮಂದಿ ಆಸ್ಪತ್ರೆಗಳಲ್ಲೂ ವೀಕ್ಷಣೆಯಲ್ಲಿದ್ದಾರೆ. ಒಟ್ಟು 224 ಬಾಧಿತರನ್ನು ನಿನ್ನೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 4848 ಮಂದಿಗಳ ಮಾದರಿಗಳನ್ನು ಪರಿಶೀಲಿಸಲಾಗಿದೆ. ಇಲ್ಲಿಯವರೆಗೆ, 1,12,962 ವ್ಯಕ್ತಿಗಳ (ಖಾಸಗಿ ಲ್ಯಾಬ್‍ನಲ್ಲಿನ ಮಾದರಿಯನ್ನು ಒಳಗೊಂಡಂತೆ) ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ 2851 ಮಾದರಿಗಳನ್ನು ಪರಿಶೀಲಿಸಬೇಕಾಗಿದೆ. ಇದಲ್ಲದೆ, ಸೆಂಟಿನೆಲ್ ಕ್ವಾರಂಟೈನ್ ಭಾಗವಾಗಿ ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು ಮತ್ತು ಸಾಮಾಜಿಕ ಸಂಪರ್ಕಗಳಂತಹ ಆದ್ಯತೆಯ ಗುಂಪುಗಳಿಂದ 30,985 ಮಾದರಿಗಳನ್ನು ಸಂಗ್ರಹಿಸಲಾಗಿದೆ ಮತ್ತು 28,935 ಮಾದರಿಗಳು ನಕಾರಾತ್ಮಕವಾಗಿವೆ. ಸಾಮಾನ್ಯ ಮಾದರಿ, ವರ್ಧಿತ ಮಾದರಿ, ಸೆಂಟಿನೆಲ್ ಮಾದರಿ, ಪೂಲ್ಡ್ ಸೆಂಟಿನೆಲ್, ಸಿಬಿ ನ್ಯಾಟ್ ಮತ್ತು ಟ್ರೂ ನ್ಯಾಟ್ ಸೇರಿದಂತೆ ಒಟ್ಟು 1,49,1164 ಮಾದರಿಗಳನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ.
6 ಹೊಸ ಹಾಟ್‍ಸ್ಪಾಟ್‍ಗಳು:
ರಾಜ್ಯದಲ್ಲಿ ಹಾಟ್‍ಸ್ಪಾಟ್‍ಗಳ ಸಂಖ್ಯೆ ಬದಲಾಗಿದೆ. ನಿನ್ನೆ 6 ಹಾಟ್ ಸ್ಪಾಟ್‍ಗಳನ್ನು ಗುರುತಿಸಲಾಗಿದೆ. ಹೊಸ ಹಾಟ್ ಸ್ಪಾಟ್‍ಗಳು ಇಡುಕ್ಕಿ ಜಿಲ್ಲೆಯ ಕುಮಾಲಿ, ಕಾಸರಗೋಡು ಜಿಲ್ಲೆಯ ಕಾಞಂಗಾಡ್,ಕಾರಡ್ಕ, ಪಳ್ಳಿಕ್ಕೆರೆ ಮತ್ತು ಕಣ್ಣೂರು ಜಿಲ್ಲೆಯ ಮುಳಕ್ಕೂರು, ಪೇರಾವೂರು ಆಗಿರಲಿದೆ. ಜೊತೆಗೆ ಕಾಸರಗೋಡು ಜಿಲ್ಲೆಯ ವರ್ಕಾಡಿಯನ್ನು ಹಾಟ್ ಸ್ಪಾಟ್‍ನಿಂದ ಮುಕ್ತಗೊಳಿಸಲಾಗಿದೆ. ಪ್ರಸ್ತುತ 122 ಹಾಟ್ ಸ್ಪಾಟ್‍ಗಳಿವೆ.
56 ಮಂದಿ ಗುಣಮುಖರಾದರು:
ಚಿಕಿತ್ಸೆ ಪಡೆದ 56 ರೋಗಿಗಳಲ್ಲಿ, ಪರೀಕ್ಷೆಯ ಫಲಿತಾಂಶಗಳು ಋಣಾತ್ಮಕವಾಗಿವೆ. ತ್ರಿಶೂರ್ ಜಿಲ್ಲೆಯಿಂದ 7, ಮಲಪ್ಪುರಂ ಜಿಲ್ಲೆಯಿಂದ 5, ತಿರುವನಂತಪುರಂನಿಂದ 3, ಆಲಪ್ಪುಳ (ತಿರುವನಂತಪುರಂ ನಿವಾಸಿ), ಎರ್ನಾಕುಳಂ (ಒಬ್ಬರು ತ್ರಿಶೂರ್ ಮತ್ತು ಒಬ್ಬರು ಕೋಝಿಕ್ಕೋಡ್ ಜಿಲ್ಲೆಯವರು), ಇಬ್ಬರು ಕೊಟ್ಟಾಯಂ, ಇಡುಕ್ಕಿ ಮತ್ತು ಕಣ್ಣೂರು ಜಿಲ್ಲೆಗಳಿಂದ ತಲಾ ಇಬ್ಬರು ಮತ್ತು ವಯನಾಡ್ ಜಿಲ್ಲೆಯಿಂದ ಒಬ್ಬರು ಗುಣಮುಖರಾದರು. ಕೋವಿಡ್‍ನಿಂದ ಈವರೆಗೆ 1,101 ಜನರನ್ನು ಬಿಡುಗಡೆ ಮಾಡಲಾಗಿದೆ.


