ಕಾಸರಗೋಡು: ಮುಂಬಯಿಯ ಪುಣೆಯಲ್ಲಿ ಶನಿವಾರ 87 ಕೋಟಿ ರೂ.ಗಳ ಕಳ್ಳನೋಟಿನೊಂದಿಗೆ ಬಂಧಿತರಾದವರಲ್ಲಿ ಕಾಸರಗೋಡು ಉದುಮ ನಿವಾಸಿಯೂ ಒಳಗೊಂಡಿರುವನೆಂದು ಸಂಶಯಿಸಲಾಗಿದೆ.
ಕುಟುಂಬ ಮತ್ತು ಸ್ನೇಹಿತರು ಮಾಹಿತಿಗಾಗಿ ಬೇಕಲ ಠಾಣೆ ಸಂಪರ್ಕಿಸಿದ್ದರೂ ಪೆÇಲೀಸರಿಗೆ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ. ಉದುಮಾ ಮಲಂಕುನ್ ಮೂಲದ ರಿತೇಶ್ ರತ್ನಾಕರನ್ ಸೇರಿದಂತೆ ಆರು ಮಂದಿಯನ್ನು ಗುಪ್ತಚರ ಮತ್ತು ಪುಣೆ ಪೆÇಲೀಸರು ಶನಿವಾರ ಬಂಧಿಸಿದ್ದರು. ರಿತೇಶ್ ಕಳೆದ ಎರಡು ವರ್ಷಗಳಿಂದ ಮುಂಬೈನಲ್ಲಿ ವಾಸಿಸುತ್ತಿರುವವನಾಗಿದ್ದಾನೆ.
ಮುಂಬೈಯಲ್ಲಿ ವಾಸಿಸುವ ಪಾಲಕ್ಕಾಡ್ ನಿವಾಸಿಗಳು ರಿತೇಶ್ ನ ಕುಟುಂಬಕ್ಕೆ ಮೊದಲು ಮಾಹಿತಿ ನೀಡಿರುವವರು. ಶೇಖ್ ಅಲೀಮ್ ಗುಲಾಬ್ ಖಾನ್ ಸಹಾಬ್ (36), ಪುಣೆಯ ಸುನಿಲ್ ಬದ್ರಿನಾರಾಯಣ ಸರ್ದಾ (45), ನವೀ ಮುಂಬಯಿಯ ರಿತೇಶ್ ರತ್ನಾಕರನ್ (35), ಅಬ್ದುಲ್ ರೆಹಮಾನ್ ಅಬ್ದುಲ್ ಗಣಿಕ್ ಖಾನ್ (18), ಅಬ್ದುಲ್ ಘನಿ (45). ) ಮತ್ತು ಮುಂಬೈಯ ಮೀರಾ ರೋಡ್ ನಿವಾಸಿ ಅಹ್ಮದ್ ಮೊಹಮ್ಮದ್ ಇಶಾಕ್ ಖಾನ್ ಬಂಧಿತರಾದವರೆಂದು ತಿಳಿದುಬಂದಿದೆ.
ಮಿಲಿಟರಿ ಇಂಟೆಲಿಜೆನ್ಸ್ (ಎಂಐ) ನಡೆಸಿದ ಕಾರ್ಯಾಚರಣೆಯಲ್ಲಿ ಪುಣೆ ಅಪರಾಧ ವಿಭಾಗವು 55 ಕೋಟಿ ರೂ.ಗಳ ಮೌಲ್ಯದ ನಕಲಿ ಭಾರತೀಯ ಮತ್ತು ಯುಎಸ್ ಕರೆನ್ಸಿ ನೋಟುಗಳನ್ನು ವಿಮ ನಗರದ ಸಂಜಯ್ ಪಾರ್ಕ್‍ನ ಬಂಗಲೆಯೊಂದರಿಂದ ಶನಿವಾರ ವಶಪಡಿಸಿಕೊಂಡಿತ್ತು. ಬಾಂಬೆ ಎಂಜಿನಿಯರಿಂಗ್ ಸಮೂಹದ ಮಿಲಿಟರಿ ಬ್ಯಾಂಡ್ ಘಟಕದ ಲ್ಯಾನ್ಸ್ ನಾಯಕ್ ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ. ಕರೆನ್ಸಿಯ ಮೌಲ್ಯ 55 ಕೋಟಿ ರೂ.ಗಳು. ಜಮ್ಮು ಮತ್ತು ಕಾಶ್ಮೀರದ ಎಂಐ ಅಧಿಕಾರಿಗಳು ಮತ್ತು ಸದರ್ನ್ ಕಮಾಂಡ್ ನೀಡಿದ ಸಲಹೆಯ ಮೇರೆಗೆ ಈ ದಾಳಿ ನಡೆಸಲಾಗಿತ್ತು.


