ಬದಿಯಡ್ಕ: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕøತಿಕ ಪ್ರತಿಷ್ಠಾನ ಉಡುಪಿ, ಗಡಿನಾಡು ಕಾಸರಗೋಡಿನ ವೃತ್ತಿ ಕಲಾವಿದರು, ಇವರ ಸಹಕಾರದೊಂದಿಗೆ ಕೊರೊನಾ ದಿಗ್ಬಂಧದ ನಡುವೆ ಯಕ್ಷಗಾನ ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಜೂನ್ 11ರಿಂದ 13ರರವರೆಗೆ ಗಡಿನಾಡ ವೃತ್ತಿಕಲಾವಿದರ ಆನ್ ಲೈನ್ ಯಕ್ಷಗಾನ ಯಶಸ್ವಿಯಾಗಿ ನಡೆಯಿತು.
ಯೂಟ್ಯೂಬ್ ನಲ್ಲಿ ಪ್ರಸಾರಗೊಂಡ ಕಾರ್ಯಕ್ರಮವನ್ನು ದೇಶ ವಿದೇಶಗಳ ನೂರಾರು ಪ್ರೇಕ್ಷಕರು ಕಣ್ತುಂಬಿಕೊಂಡರು. ಕೊರೋನಾ ದಿಗ್ಬಂಧದ ನಡುವೆ ಗಡಿನಾಡ ವೃತ್ತಿ ಕಲಾವಿದರಿಗೆ ಪ್ರೋತ್ಸಾಹ ನೀಡುವಲ್ಲಿ ಪ್ರದರ್ಶನ ಪ್ರಸಾರ ಪ್ರಚಾರ ನೀಡುವಲ್ಲಿ ಯಶಸ್ವಿಯಾಯಿತು. ಸರಕಾರದ ಕೋವಿದ್ 19 ಕಾನೂನು ನಿಬಂಧನೆಗೊಳಪಟ್ಟು ಕಲಾವಿದರಿಗೆ ಮಾತ್ರ ಅವಕಾಶವನ್ನು ನೀಡಿ ಯಕ್ಷಗಾನ ಪ್ರದರ್ಶಿಸಿ ದಾಖಲಿಸಿ ನೇರಪ್ರಸಾರ ಗೊಳಿಸಲಾಗಿತ್ತು. ಪೆರಡಾಲ ಉದನೇಶ್ವರ ದೇವಸ್ಥಾನದ ಉದನೇಶ್ವರ ಸಭಾಮಂಟಪದಲ್ಲಿ ಯಕ್ಷಗಾನ ದಾಖಲೀಕರಣ ನಡೆದಿತ್ತು.
ಪ್ರತೀದಿನ ಸಂಜೆ 5.30ರಿಂದ ರಾತ್ರಿ ಗಂಟೆ 7ರ ವರೆಗೆ ನೇರ ಪ್ರಸಾರಗೊಂಡಿತ್ತು. ಜೂನ್ 11ರಂದು *ಕಂಸವಧೆ* ಪ್ರಸಂಗ ಪ್ರಸಾರ ಗೊಂಡಿದ್ದು ಹಿಮ್ಮೇಳದಲ್ಲಿ ಭಾಗವತರು ರಾಮಕೃಷ್ಣ ಮಯ್ಯ ಸಿರಿಬಾಗಿಲು, ಸತ್ಯನಾರಾಯಣ ಪುಣಿಂಚಿತ್ತಾಯ ಪೆರ್ಲ, ಹಾಗೂ ಚೆಂಡೆ ಮದ್ದಳೆಯಲ್ಲಿ ಶ್ರೀಧರ ಪಡ್ರೆ, ನೇರೊಳು ಗಣಪತಿ ನಾಯಕ್, ಉದಯ ಕಂಬಾರು. ಚಕ್ರತಾಳ ಸುರೇಶ ಆಚಾರ್ಯ ಪಾಲ್ಗೊಂಡಿದ್ದು ಪಾತ್ರವರ್ಗದಲ್ಲಿ ಕಂಸ ರಾಧಾಕೃಷ್ಣ ನವಡ ಮಧೂರು, ಅಕ್ರೂರ ದಿವಾಣ ಶಿವಶಂಕರ ಭಟ್, ಅಗಸ ಬಾಲಕೃಷ್ಣ ಮಣಿಯಾಣಿ ಮವ್ವಾರು. ಚಾಣೂರ ಹರೀಶ ಶೆಟ್ಟಿ ಮಣ್ಣಾಪು, ಮುಷ್ಟಿಕ ಶೇಖರ ಜಯನಗರ ಕೃಷ್ಣ ಶಿವಾನಂದ ಪೆರ್ಲ, ಬಲರಾಮ ಶಿವರಾಜ್ ಪೆರ್ಲ ಭಾಗವಹಿಸಿದ್ದರು.
12ರಂದು ಎರಡನೇ ದಿನದಯಕ್ಷಗಾನ *ಸೀತಾಕಲ್ಯಾಣ* ಜರಗಿತು. ಹಿಮ್ಮೇಳದಲ್ಲಿ ಭಾಗವತರು ರಾಮಕೃಷ್ಣ ಮಯ್ಯ ಸಿರಿಬಾಗಿಲು, ಸತ್ಯನಾರಾಯಣ ಪುಣಿಂಚಿತ್ತಾಯ ಪೆರ್ಲ, ಹಾಗೂ ಚೆಂಡೆ ಮದ್ದಳೆಯಲ್ಲಿ ಶ್ರೀಧರ ಪಡ್ರೆ, ಲವಕುಮಾರ್ ಐಲ. ಉದಯ ಕಂಬಾರು. ಚಕ್ರತಾಳ ಸುರೇಶ ಆಚಾರ್ಯ ಪಾಲ್ಗೊಂಡಿದ್ದು ಪಾತ್ರವರ್ಗದಲ್ಲಿ ವಿಶ್ವಾಮಿತ್ರ ಜಯಪ್ರಕಾಶ ಶೆಟ್ಟಿ ಪೆರ್ಮುದೆ, ರಾಮ ಪ್ರಕಾಶನಾಯಕ್ ನೀರ್ಚಾಲು, ಲಕ್ಷ್ಮಣ ಶಿವರಾಜ್ ಪೆರ್ಲ, ತಾಟಕಿ ಹರಿನಾರಾಯಣ ಎಡನೀರು, ಸುಬಾಹು ಮಾಧವ ಪಾಟಾಳಿ ನಿರ್ಚಾಲು, ಮಾರೀಚ ಹರೀಶ ಶೆಟ್ಟಿ ಮಣ್ಣಾಪು, ಜನಕ ನಾರಾಯಣ ಮೂಲಡ್ಕ, ದೂತ ಬಾಲಕೃಷ್ಣ ಮಣಿಯಾಣಿ ಮವ್ವಾರು. ರಾವಣ ರಾಧಾಕೃಷ್ಣ ನಾವಡ ಮಧೂರು, ಅರಸರು ಸುಕೇತ್, ಕಿಶನ್, ಸೀತೆ ರಕ್ಷಿತ್ ದೇಲಂಪಾಡಿ ಭಾಗವಹಿಸಿದ್ದರು.
13ರರಂದು ಇಂದ್ರಜಿತುಕಾಳಗ ಪ್ರಸಂಗ ಪ್ರಸ್ತುತಿಗೊಂಡಿದ್ದು ಹಿಮ್ಮೇಳದಲ್ಲಿ ಭಾಗವತರು ರಾಮಕೃಷ್ಣ ಮಯ್ಯ ಸಿರಿಬಾಗಿಲು, ಗೋಪಾಲಕೃಷ್ಣ ಮಯ್ಯ ಪೆಲತ್ತಡ್ಕ, ಹಾಗೂ ಚೆಂಡೆ ಮದ್ದಳೆಯಲ್ಲಿ ಅಡೂರು ಲಕ್ಷ್ಮೀನಾರಾಯಣ ರಾವ್, ಲಕ್ಷ್ಮೀಶ ಬೇಂಗ್ರೋಡಿ, ಉದಯ ಕಂಬಾರು. ಚಕ್ರತಾಳ ಸುರೇಶ ಆಚಾರ್ಯ, ಭಾಗವಹಿಸಿದ್ದು ಪಾತ್ರವರ್ಗದಲ್ಲಿ ಇಂದ್ರಜಿತು ರಾಧಾಕೃಷ್ಣ ನಾವಡ ಮಧೂರು, ಸಂತೋಷ ಮಾನ್ಯ, ಶ್ರೀರಾಮ ಸರವು ರಮೇಶ ಭಟ್, ಹನುಮಂತ ಪೆರ್ಮುದೆ ಜಯಪ್ರಕಾಶ ಶೆಟ್ಟಿ, ಮಾಯಾಸೀತೆ ಬಾಲಕೃಷ್ಣ ಸೀತಾಂಗೋಳಿ, ಜಾಂಭವ ಹಾಗೂ ಶುಕ್ರಾಚಾರ್ಯ ಬಾಲಕೃಷ್ಣ ಮಣಿಯಾಣಿ ಮವ್ವಾರು. ವಿಭೀಷಣ ಪ್ರಕಾಶ ನಾಯಕ್ ನೀರ್ಚಾಲು, ಲಕ್ಷ್ಮಣ ಶಿವಾನಂದ ಪೆರ್ಲ, ಮಂಗಗಳು ಶಿವರಾಜ್ ಹಾಗೂ ಕಿಶನ್ ಭಾಗವಹಿಸಿದ್ದರು. ಕೊಲ್ಲಂಗಾನ ಮೇಳ ವೇಶಭೂಷಣ ಒದಗಿಸಿದ್ದರು. ಹಾಗೂ ವರ್ಣ ನೀರ್ಚಾಲು ವಿಡಿಯೋ ದಾಖಲಾತಿ ನಡೆಸಿದ್ದು ಧಾತ್ರಿ ಮೀಡಿಯಾ ಬೆಂಗಳೂರು ಪ್ರಸಾರದ ಜವಾಬ್ದಾರಿ ವಹಿಸಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ ನೆರವೇರಿಸಿದ್ದು , ವೆಂಕಟೇಶ್ವರ ಭಟ್ ಹಾಗೂ ವೆಂಕಟ್ರಮಣ ಭಟ್ ಚಂಬಲ್ತಿಮಾರ್ ಉಪಸ್ಥಿತರಿದ್ದರು. ಎರಡನೇ ದಿನದ ಉದ್ಘಾಟನೆಯನ್ನು ಪೆರಡಾಲ ಉದನೇಶ್ವರ ದೇವಸ್ಥಾನದ ಅರ್ಚಕರು ನೆರವೇರಿಸಿದ್ದರು ಹಾಗೂ ಮೂರನೇ ದಿನದ ಕಾರ್ಯಕ್ರಮ ಉದ್ಘಾಟನೆಯನ್ನು ಕೇರಳ ಪಾರ್ತಿಸುಬ್ಬ ಕಲಾಕ್ಷೇತ್ರದ ಮಾಜಿ ಅಧ್ಯಕ್ಷ ಜಯರಾಮ ಮಂಜತ್ತಾಯ ಎಡನೀರು ನೆರವೇರಿಸಿದ್ದರು ಹಾಗೂ ಅವಿನಾಶ ಕಾರಂತ ಪಾಡಿ ಅವರು ಪಣಂಬೂರು ವೆಂಕಟ್ರಾಯ ಐತಾಳರ ಬಗ್ಗೆ ಮಾತನಾಡಿದರು. ಮಂಜುನಾಥ ಡಿ ಮಾನ್ಯ ಕಾರ್ಯಕ್ರಮ ನಿರೂಪಿಸಿದ್ದರು.
ಕಾರ್ಯಕ್ರಮಕ್ಕೆ ಪೆರಡಾಲ ಉದನೇಶ್ವರ ದೇವಸ್ಥಾನದ ಆಡಳಿತಮಂಡಳಿ ಸರ್ವ ಸಹಕಾರ ನೀಡಿತ್ತು. ಈ ಹಿಂದೆ ಕೊರೊನಾಸುರ ಕಾಳಗ ಯಕ್ಷ ಜಾಗೃತಿ , ಕೊರೊನಾ ಜಾಗೃತಿ ಬಗ್ಗೆ ಯಕ್ಷಗಾನ ಕಲಾವಿದರಿಗೆ ಪ್ರಬಂಧ ಸ್ಪರ್ದೆ ಪ್ರತಿಷ್ಠಾನ ಏರ್ಪಡಿಸಿರುವುದನ್ನು ಸ್ಮರಿಸಬಹುದು.



