ತಿರುವನಂತಪುರ: ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಉದ್ಯೋಗಕ್ಕೆ ಸೇರ್ಪಡೆಗೊಂಡು ಒಂದು ತಿಂಗಳೊಳಗೆ ಲೋಕಸೇವಾ ಆಯೋಗದಲ್ಲಿ ಸಲ್ಲಿಸಿದ ಆಧಾರ್ ಕಾರ್ಡ್ ವಿವರಗಳೊಂದಿಗೆ ಸಮರ್ಪಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಈಗಾಗಲೇ ಸೇವಾ ತಪಾಸಣೆ ಪೂರ್ಣವಾಗದವರು ಕೂಡಲೇ ಆಧಾರ್ ಪ್ರತಿಯನ್ನು ಸಮರ್ಪಿಸಬೇಕು. ಈ ಬಗ್ಗೆ ಲೋಕಸೇವಾ ಆಯೋಗ ಆಧಾರ್ ನಿಯಂತ್ರಣ ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದು ಈ ಮೂಲಕ ಉದ್ಯೋಗ ವಂಚನೆಯನ್ನು ತಡೆಗಟ್ಟಲು ಸಾಧ್ಯವಾಗಲಿದೆ ಎಂದು ಅಧಿಕೃತರು ತಿಳಿಸಿದ್ದಾರೆ.
ಲೋಕಸೇವಾ ಆಯೋಗ ಈವರೆಗೆ ನಡೆಸಿದ ಒಂದು ಬಾರಿಯ ನೋಂದಾವಣಿಯಲ್ಲಿ 32 ಲಕ್ಷಕ್ಕೂ ಹೆಚ್ಚು ಉದ್ಯೋಗಸ್ಥರು ದಾಖಲೆ ಸಮರ್ಪಿಸಿದ್ದಾರೆ. ನೇಮಕಾತಿ ಶಿಫಾರಸು ಪಡೆದವರು ಆಧಾರ್ ನೋಂದಾವಣಿಗೆ ಶೀಘ್ರ ಕ್ರಮಕೈಗೊಳ್ಳಬೇಕು. ಪರೀಕ್ಷೆ ಮತ್ತು ಸಂದರ್ಶನಕ್ಕೆ ಹಾಜರಾಗುವ ಉದ್ಯೋಗಾರ್ಥಿಗಳು ನೇಮಕಾತಿ ಮತ್ತು ಆಧಾರ್ ಪರೀಕ್ಷೆಗಳ ಬಳಿಕ ಆಧಾರ್ ದಾಖಲೆಗಳನ್ನು ಖಚಿತಪಡಿಸಿಕೊಳ್ಳಬೇಕು.
ಅಲ್ಲದೆ ಹಾಜರಾಗಿ ತೇರ್ಗಡೆಗೊಂಡವರೇ ಉದ್ಯೋಗಕ್ಕೆ ಸೇರ್ಪಡೆಗೊಳ್ಳುವರೆಂಬುದನ್ನು ಆಧಾರ್ ನೋಂದಣಿಯ ಕಾರಣ ಖಚಿತಗೊಂಡು ವಂಚನೆಗಳನ್ನು ತಡೆಯಬಹುದಾಗಿದೆ ಎಂದು ನಿರೀಕ್ಷಿಸಲಾಗಿದೆ.


