ಕುಂಬಳೆ: ಕಾಸರಗೋಡು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ(ಎನ್.ಎಚ್.66) ಕುಂಬಳೆಯ ಕುಂಭಿನಿ ಹೊಳೆಯ ಪಕ್ಕದಲ್ಲಿ ಹಲವಾರು ವರ್ಷಗಳಿಂದ ಖರ್ಜೂರದ ಮರವೊಂದಿದ್ದು, ಕೆಲವು ವರ್ಷಗಳಿಂದ ಗೊನೆಗಳಲ್ಲಿ ಹೂ ಮಾತ್ರ ಬಿಡುತಿತ್ತು. ಆದರೆ ಈ ವರ್ಷ ಮರದಲ್ಲಿ ಹೂವರಳಿ ಖರ್ಜೂರದ ಹಣ್ಣುಗಳು ತೊನೆದಾಡುತ್ತಿದ್ದು ಹೆದ್ದಾರಿ ಸಂಚಾರದ ವೇಳೆ ಖರ್ಜೂರದ ಗೊನೆ ನೋಡುಗರ ಕಣ್ಮನ ಸೆಳೆಯುತ್ತಿದೆ.
ಮರಳು ಭೂಮಿಯಲ್ಲಿ ಮಾತ್ರ ಬೆಳೆಯುವ ಖರ್ಜೂರ ಕರಾವಳಿ ಭಾಗದಲ್ಲಿ ಫಲ ನೀಡುವುದು ವಿಶೇಷವಾಗಿದ್ದು, ತೆಂಗು, ಕಂಗು, ಬಾಳೆ ಬೆಳೆಗಳ ನಮ್ಮ ನೆಲ ಮರಳು ಭೂಮಿಯಾಗುವ ಸೂಚನೆ ಈ ಖರ್ಜೂರ ಫಲ ಬಿಟ್ಟಿದೆಯೇ ಎಂಬ ಆತಂಕದ ಮಾತುಗಳೂ ಸ್ಥಳೀಯರಿಂದ ಕೇಳಿಬಂದಿದೆ.


