ಮಂಜೇಶ್ವರ: ಜಿಲ್ಲೆಯ ವಿವಿಧೆಡೆ ಬುಧವಾರ ಅಬಕಾರಿ ಇಲಾಖೆ 14 ದಾಳಿಗಳನ್ನು ನಡೆಸಿದ್ದು, 35.58 ಲೀ.ಕರ್ನಾಟಕ ನಿರ್ಮಿತ ಮದ್ಯ ಪತ್ತೆ ಮಾಡಿ ವಶಪಡಿಸಿದೆ.
ಹೊಸಂಗಡಿ-ಆನೆಕಲ್ಲು ರಸ್ತೆಯಲ್ಲಿ ಸ್ಕೂಟರ್ ನಲ್ಲಿ ಅಕ್ರಮ ಸಾಗಾಟ ನಡೆಸುತ್ತಿದ್ದ 17.28 ಲೀ. ಮದ್ಯ ಪತ್ತೆಯಾಗಿದೆ. ಅರಿಬೈಲು ನಿವಾಸಿ ಪ್ರಶಾಂತ್ ಶೆಟ್ಟಿ ಎಂಬಾತನ ವಿರುದ್ಧ ಅಬಕಾರಿ ಕೇಸು ದಾಖಲಿಸಲಾಗಿದೆ.ಚೆರ್ಕಳದಲ್ಲಿ 15.3 ಲೀ. ಮದ್ಯ ಪತ್ತೆಯಾಗಿದ್ದು, ಕೇಸು ದಾಖಲಿಸಲಾಗಿದೆ.


