ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 8 ಮಂದಿಗೆ ಕೊರೊನಾ ಪಾಸಿಟಿವ್ ಆಗಿದೆ. 7 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಜಿಲ್ಲೆಯಲ್ಲಿ ರೋಗಿಗಳ ಸಂಖ್ಯೆ 109 ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಕೊರೊನಾ ಪಾಸಿಟಿವ್ ಆದವರಲ್ಲಿ ಮೂವರು ಕುವೈತ್‍ನಿಂದ, ಮೂವರು ಮಹಾರಾಷ್ಟ್ರದಿಂದ, ಇಬ್ಬರು ದುಬಾಯಿಯಿಂದ ಆಗಮಿಸಿದವರು. ಕುವೈತ್‍ನಿಂದ ಆಗಮಿಸಿದ್ದ ನೀಲೇಶ್ವರ ನಗರಸಭೆ ವ್ಯಾಪ್ತಿಯ ನಿವಾಸಿಗಳಾದ 49, 45, 41 ವರ್ಷದ ವ್ಯಕ್ತಿಗಳು, ದುಬಾಯಿಯಿಂದ ಆಗಮಿಸಿದ್ದ 42 ವರ್ಷದ ವ್ಯಕ್ತಿ, ಚೆರುವತ್ತೂರು ಪಂಚಾಯತ್ ನಿವಾಸಿ 30 ವರ್ಷದ ವ್ಯಕ್ತಿ, ಮಹಾರಾಷ್ಟ್ರದಿಂದ ಆಗಮಿಸಿದ್ದ ಮಂಗಲ್ಪಾಡಿ ನಿವಾಸಿ 60 ವರ್ಷದ ವ್ಯಕ್ತಿ, ಉದುಮ ಪಂಚಾಯತ್ ನಿವಾಸಿ 44 ವರ್ಷದ ವ್ಯಕ್ತಿ, ವಲಿಯಪರಂಬ ನಿವಾಸಿ 58 ವರ್ಷದ ವ್ಯಕ್ತಿ ಸೋಂಕು ಬಾಧಿತರು. ಇವರಲ್ಲಿ ಚೆರುವತ್ತೂರು, ವಲಿಯಪರಂಬ ನಿವಾಸಿಗಳು ರೂಂ ಕ್ವಾರೆಂಟೈನ್‍ನಲ್ಲಿ, ಉಳಿದವರು ಸರಕಾರಿ ನಿಗಾದಲ್ಲಿದ್ದರು.
ಕೋವಿಡ್ ಸೋಂಕು ಖಚಿತಗೊಂಡು ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ 5 ಮಂದಿ, ಪರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ ಇಬ್ಬರು ಕೋವಿಡ್ ರೋಗದಿಂದ ಗುಣಮುಖರಾಗಿದ್ದಾರೆ. ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ, ಮಹಾರಾಷ್ಟ್ರದಿಂದ ಬಂದಿದ್ದ ಕಾಸರಗೋಡು ನಗರಸಭೆ ವ್ಯಾಪ್ತಿಯ ನಿವಾಸಿಗಳಾದ 39, 48 ವರ್ಷದ ವ್ಯಕ್ತಿಗಳು, ಪೈವಳಿಕೆ ಪಂಚಾಯತ್ ನಿವಾಸಿ 45 ವರ್ಷದ ವ್ಯಕ್ತಿ, ಕುತ್ತಿಕೋಲ್ ನಿವಾಸಿ 31 ವರ್ಷದ ವ್ಯಕ್ತಿ, ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದ, ಸಂಪರ್ಕ ಮೂಲಕ ಸೋಂಕು ತಗುಲಿದ್ದ ಈಸ್ಟ್ ಏಳೇರಿ ನಿವಾಸಿ 28 ವರ್ಷದ ನಿವಾಸಿ, ಕುವೈತ್‍ನಿಂದ ಆಗಮಿಸಿದ್ದ ಪಿಲಿಕೋಡ್ ನಿವಾಸಿ 33 ವರ್ಷದ ಮಹಿಳೆ ರೋಗದಿಂದ ಗುಣಮುಖರಾದವರು.
ಜಿಲ್ಲೆಯಲ್ಲಿ ಒಟ್ಟು 3820 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 3324 ಮಂದಿ, ಆಸ್ಪತ್ರೆಗಳಲ್ಲಿ 496 ಮಂದಿ ನಿಗಾದಲ್ಲಿದ್ದಾರೆ. 224 ಮಂದಿ ತಮ್ಮ ನಿಗಾ ಅವ„ ಪೂರ್ಣಗೊಳಿಸಿದ್ದಾರೆ. 11 ಮಂದಿ ಸೋಮವಾರ ನೂತನವಾಗಿ ಐಸೊಲೇಷನ್ ವಾರ್ಡ್‍ಗಳಿಗೆ ದಾಖಲಾಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 8567 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 293 ಮಂದಿಯ ತಪಾಸಣೆ ಫಲಿತಾಂಶ ಲಭಿಸಿಲ್ಲ.
ಕೇರಳದಲ್ಲಿ 91 ಮಂದಿಗೆ ಸೋಂಕು : ಕೇರಳದಲ್ಲಿ ಸೋಮವಾರ 91 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದರಲ್ಲಿ 73 ಮಂದಿ ವಿದೇಶದಿಂದ ಬಂದವರು. 15 ಮಂದಿ ಇತರ ರಾಜ್ಯಗಳಿಂದ ಬಂದವರು. ತೃಶ್ಶೂರು ಜಿಲ್ಲೆಯಲ್ಲಿ ಒಬ್ಬರಿಗೆ ಸಂಪರ್ಕದಿಂದ ರೋಗ ಬಾ„ಸಿದೆ. ತೃಶ್ಶೂರು ಜಿಲ್ಲೆಯಲ್ಲಿ ಇಬ್ಬರು ಆರೋಗ್ಯ ಕಾರ್ಯಕರ್ತರಿಗೆ ರೋಗ ಬಾಧಿಸಿದೆ.
ತೃಶ್ಶೂರು-27, ಮಲಪ್ಪುರ-14, ಕಲ್ಲಿಕೋಟೆ-13, ಕಾಸರಗೋಡು-8, ಕೊಲ್ಲಂ-5, ಆಲಪ್ಪುಳ-5, ಕಣ್ಣೂರು-4, ತಿರುವನಂತಪುರ-3, ಪತ್ತನಂತಿಟ್ಟ-3, ಕೋಟ್ಟಯಂ-3, ಎರ್ನಾಕುಳಂ-3, ವಯನಾಡು-2, ಪಾಲ್ಘಾಟ್-1 ಎಂಬಂತೆ ರೋಗ ಬಾಧಿಸಿದೆ.
ರೋಗ ದೃಢೀಕರಿಸಿದ್ದ ತೃಶ್ಶೂರು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಿನಿ ಚಾಕೋ(41) ಸಾವಿಗೀಡಾದರು. ಇದರೊಂದಿಗೆ ಕೇರಳದಲ್ಲಿ ಒಟ್ಟು ಸತ್ತವರ ಸಂಖ್ಯೆ 16ಕ್ಕೇರಿತು.
ರಾಜ್ಯದಲ್ಲಿ ಸೋಮವಾರ 11 ಮಂದಿ ಗುಣಮುಖರಾಗಿದ್ದಾರೆ. ಕಾಸರಗೋಡು-5, ಪಾಲ್ಘಾಟ್-2, ವಯನಾಡು-2, ಕಣ್ಣೂರು-2(ಕಾಸರಗೋಡು ನಿವಾಸಿಗಳು). ಪ್ರಸ್ತುತ ರಾಜ್ಯದಲ್ಲಿ ವಿವಿಧ ಆಸ್ಪತ್ರೆಗಳಲ್ಲಾಗಿ 1174 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 814 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 1,97,078 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 195307 ಮಂದಿ ಮನೆಗಳಲ್ಲೂ, ಇನ್‍ಸ್ಟಿಟ್ಯೂಶನಲ್ ಕ್ವಾರೆಂಟೈನ್‍ನಲ್ಲಿದ್ದಾರೆ. 1771 ಮಂದಿ ಆಸ್ಪತ್ರೆಯಲ್ಲಿದ್ದಾರೆ. ಶಂಕಿತ 211 ಮಂದಿಯನ್ನು ಸೋಮವಾರ ಆಸ್ಪತ್ರೆಗೆ ಸೇರಿಸಲಾಗಿದೆ.
85676 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದು, ಲಭ್ಯ 82,362 ಸ್ಯಾಂಪಲ್ ನೆಗೆಟಿವ್ ಆಗಿದೆ. ರಾಜ್ಯದಲ್ಲಿ ಒಟ್ಟು 150 ಹಾಟ್‍ಸ್ಪಾಟ್‍ಗಳಿವೆ.
ಮಾಸ್ಕ್ ಧರಿಸದ 64 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 64 ಮಂದಿ ವಿರುದ್ಧ ಕೇಸು ದಾಖಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 5169 ಮಂದಿ ವಿರುದ್ಧ ಕೇಸು ದಾಖಲಿಸಿ, ದಂಡ ವಸೂಲಿ ಮಾಡಲಾಗಿದೆ.
ನಿಷೇಧಾಜ್ಞೆ ಉಲ್ಲಂಘನೆ : 14 ಕೇಸು ದಾಖಲು : ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 14 ಕೇಸುಗಳನ್ನು ದಾಖಲಿಸಲಾಗಿದೆ. 20 ಮಂದಿಯನ್ನು ಬಂಧಿಸಲಾಗಿದ್ದು, 11 ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 1 ಕೇಸು, ಕಾಸರಗೋಡು 2, ಬದಿಯಡ್ಕ 1, ಬೇಡಗಂ 1, ಬೇಕಲ 1, ಹೊಸದುರ್ಗ 1, ನೀಲೇಶ್ವರ 1, ಚಂದೇರ 2, ವೆಳ್ಳರಿಕುಂಡ್ 3, ಚಿತ್ತಾರಿಕಲ್ 1 ಕೇಸು ದಾಖಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 2597 ಕೇಸು ದಾಖಲಾಗಿದೆ. 3266 ಮಂದಿಯನ್ನು ಬಂ„ಸಲಾಗಿದ್ದು, 1117 ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.


