ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ ಇಬ್ಬರಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರು ಮಹಾರಾಷ್ಟ್ರ ದಿಂದ ಆಗಮಿಸಿದವರು. ಕುಂಬಳೆ ಗ್ರಾಮ ಪಂಚಾಯತ್ ನಿವಾಸಿ 49 ವರ್ಷದ ವ್ಯಕ್ತಿ, ಪಳ್ಳಿಕ್ಕರೆ ಗ್ರಾಮ ಪಂಚಾಯತ್ ನಿವಾಸಿ 65 ವರ್ಷದ ವ್ಯಕ್ತಿ ಸೋಂಕು ಬಾಧಿತರು. ಕುಂಬಳೆ ನಿವಾಸಿ ಸರಕಾರಿ ಕ್ವಾರೆಂಟೈನ್‍ನಲ್ಲಿ, ಪಳ್ಳಿಕ್ಕರೆ ನಿವಾಸಿ ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದಾರೆ. ಈ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಖಚಿತಗೊಂಡವರ ಸಂಖ್ಯೆ 111 ಆಗಿದೆ.
ಜಿಲ್ಲೆಯಲ್ಲಿ 3751 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 3340 ಮಂದಿ, ಆಸ್ಪತ್ರೆಗಳಲ್ಲಿ 411 ಮಂದಿ ನಿಗಾದಲ್ಲಿದ್ದಾರೆ. 533 ಮಂದಿಯ ಸ್ಯಾಂಪಲ್ ತಪಾಸಣೆ ಫಲಿತಾಂಶ ಲಭಿಸಿಲ್ಲ. ನೂತನವಾಗಿ 165 ಮಂದಿ ಮಂಗಳವಾರ ನಿಗಾದಲ್ಲಿ ದಾಖಲಾಗಿದ್ದಾರೆ.
ಕೇರಳದಲ್ಲಿ 91 ಮಂದಿಗೆ ಸೋಂಕು :
ಕೇರಳ ರಾಜ್ಯದಲ್ಲಿ ಮಂಗಳವಾರ 91 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ತಿಳಿಸಿದ್ದಾರೆ.
ಪಾಲ್ಘಾಟ್-14, ಆಲಪ್ಪುಳ-11, ತಿರುವನಂತಪುರ-10, ಕೋಟ್ಟಯಂ-8, ಪತ್ತನಂತಿಟ್ಟ-7, ಕಲ್ಲಿಕೋಟೆ-7, ತೃಶ್ಶೂರು-6, ಮಲಪ್ಪುರಂ-6, ವಯನಾಡು-6, ಕೊಲ್ಲಂ-5, ಕಣ್ಣೂರು-5, ಎರ್ನಾಕುಳಂ-4, ಕಾಸರಗೋಡು-2 ಎಂಬಂತೆ ರೋಗ ಬಾ„ಸಿದೆ. ಈ ಪೈಕಿ 53 ಮಂದಿ ವಿದೇಶದಿಂದ ಬಂದವರು. 27 ಮಂದಿ ಇತರ ರಾಜ್ಯಗಳಿಂದ ಬಂದವರು. 10 ಮಂದಿಗೆ ಸಂಪರ್ಕದಿಂದ ರೋಗ ಬಾ„ಸಿದೆ. ತಿರುವನಂತಪುರದಲ್ಲಿ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ರೋಗ ಬಾಧಿಸಿದೆ.
ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ 34 ಮಂದಿ ಗುಣಮುಖರಾಗಿದ್ದಾರೆ. ತಿರುವನಂತಪುರ-12(ಒಬ್ಬರು ಕೊಲ್ಲಂ ಜಿಲ್ಲೆ ನಿವಾಸಿ), ಪತ್ತನಂತಿಟ್ಟ-6, ತೃಶ್ಶೂರು -4, ಕಲ್ಲಿಕೋಟೆ-4(ಒಬ್ಬರು ವಯನಾಡು ನಿವಾಸಿ), ಕೊಲ್ಲಂ-2, ಆಲಪ್ಪುಳ-2, ಕೋಟ್ಟಯಂ-2, ಇಡುಕ್ಕಿ-1, ಎರ್ನಾಕುಳಂ-1 ಎಂಬಂತೆ ಗುಣಮುಖರಾಗಿದ್ದಾರೆ. ಕೇರಳ ರಾಜ್ಯದಲ್ಲಿ ಒಟ್ಟು 1231 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ತನಕ 848 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 204153 ಮಂದಿ ನಿಗಾವಣೆಯಲ್ಲಿದ್ದಾರೆ. 202240 ಮಂದಿ ಮನೆ ಹಾಗು ಇನ್‍ಸ್ಟಿಟ್ಯೂಶನಲ್ ಕ್ವಾರೆಂಟೈನ್‍ನಲ್ಲಿದ್ದಾರೆ. 1913 ಮಂದಿ ಆಸ್ಪತ್ರೆಗಳಲ್ಲಿ ನಿಗಾವಣೆಯಲ್ಲಿದ್ದಾರೆ. ಮಂಗಳವಾರ ಶಂಕಿತ 269 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು 95397 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಲಭ್ಯ 90662 ಸ್ಯಾಂಪಲ್ ನೆಗೆಟಿವ್ ಆಗಿದೆ. ಕಾಸರಗೋಡಿನ ಚೆಮ್ನಾಡ್, ಚೆಂಗಳವನ್ನು ಹೊಸದಾಗಿ ಹಾಟ್‍ಸ್ಪಾಟ್ ಯಾದಿಯಲ್ಲಿ ಸೇರ್ಪಡೆಗೊಳಿಸಲಾಗಿದ್ದು, ಒಟ್ಟು ಹಾಟ್‍ಸ್ಪಾಟ್‍ಗಳು 158.
ಮಾಸ್ಕ್ ಧರಿಸದ 165 ಮಂದಿ ವಿರುದ್ಧ ಕೇಸು : ಕಾಸರಗೋಡು ಜಿಲ್ಲೆಯಲ್ಲಿ ಮಾಸ್ಕ ಧರಿಸದೇ ಇರುವ ಆರೋಪದಲ್ಲಿ 165 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂ„ಸಿ ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 5334 ಮಂದಿ ವಿರುದ್ಧ ಕೇಸು ದಾಖಲಿಸಿ, ದಂಡ ಹೇರಲಾಗಿದೆ.
ಲಾಕ್‍ಡೌನ್ ಉಲ್ಲಂಘನೆ : 5 ಕೇಸು ದಾಖಲು :
ಲಾಕ್‍ಡೌನ್ ಉಲ್ಲಂಘಿಸಿದ ಆರೋಪಕ್ಕೆ ಸಂಬಂ„ಸಿ ಕಾಸರಗೋಡು ಜಿಲ್ಲೆಯಲ್ಲಿ 5 ಕೇಸುಗಳನ್ನು ದಾಖಲಿಸಲಾಗಿದೆ. 6 ಮಂದಿಯನ್ನು ಬಂ„ಸಲಾಗಿದ್ದು, 4 ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 1 ಕೇಸು, ಕಾಸರಗೋಡು 2, ಬೇಡಗಂ 1, ಚಂದೇರ 1 ಕೇಸು ದಾಖಲಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 2602 ಕೇಸು ದಾಖಲಾಗಿದೆ. 3272 ಮಂದಿಯನ್ನು ಬಂ„ಸಲಾಗಿದ್ದು, 1121 ವಾಹನಗಳನ್ನು ವಶಪಡಿಸಲಾಗಿದೆ.
ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಇತರ ಪ್ರದೇಶಗಳಲ್ಲಿ ಇನ್ನು ಮುಂದೆ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ಅಂಗಡಿಗಳು ಕಾರ್ಯಾಚರಿಸಬಹುದೆಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.


