ಕಾಸರಗೋಡು: ತಂಬೂರ್ ಮುಳಿ ಮಾದರಿಯ ಎರೋಬಿಕ್ ಕಂಪೆÇೀಸ್ಟ್ ಸೌಲಭ್ಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆರಂಭಗೊಂಡಿದೆ.
"ಆರೋಗ್ಯ ಸುರಕ್ಷೆ ಖಚಿತ ಪಡಿಸಲು ಪರಿಸರ ಶುಚೀಕರಣ" ಎಂಬ ಉದ್ದೇಶದೊಂದಿಗೆ ಚೆಂಗಳ ಗ್ರಾಮಪಂಚಾಯತ್ ನ ವಾರ್ಷಿಕ ಯೋಜನೆಯಲ್ಲಿ ಜಿಲ್ಲಾ ಶುಚಿತ್ವ ಮಿಷನ್ ಈ ಸೌಲಭ್ಯವನ್ನು ನಿರ್ಮಿಸಿದೆ.
ಮಂಗಳವಾರ ಈ ಸಂಬಂಧ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಕಂಪೆÇೀಸ್ಟ್ ಸೌಲಭ್ಯವನ್ನು ಉದ್ಘಾಟಿಸಿದರು. ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ಶುಚಿತ್ವ ಮಿಷನ್ ಸಂಚಾಲಕಿ ಎ.ಲಕ್ಷ್ಮಿ, ಸಹಾಯಕ ಸಂಚಾಲಕ ಪ್ರೇಮರಾಜನ್, ಕಾರ್ಯಕ್ರಮ ಅಧಿಕಾರಿ ಕೆ.ವಿ.ರಂಜಿತ್, ಎಸ್.ಇ.ಸಿ.ಎಫ್. ಜತೆ ನಿರ್ದೇಶಕ ಷಾಲಿಮಾರ್, ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಚಾಲಕ ಟಿ.ಟಿ.ಸುರೇಂದ್ರನ್ ಮೊದಲಾದವರು ಉಪಸ್ಥಿತರಿದ್ದರು.
ಸಿವಿಲ್ ಸ್ಟೇಷನ್ ಸಿಬ್ಬಂದಿ ನಡೆಸುವ ಶುಚೀಕರಣ ಪ್ರಕ್ರಿಯೆಗೆ ಜಿಲ್ಲಾಧಿಕಾರಿ ಚಾಲನೆ ನೀಡಿದರು. ಜೈವಿಕ ತ್ಯಾಜ್ಯ ಸಂಗ್ರಹ ತೊಟ್ಟಿ ಗಳ ವಿತರಣೆಯ ಉದ್ಘಾಟನೆಯನ್ನು ಜಿಲ್ಲಾ ಶುಚಿತ್ವ ಮಿಷನ್ ಸಂಚಾಲಕಿ ಎ.ಲಕ್ಷ್ಮಿ ಅವರು ಅವರು ಹೆಚ್ಚುವರಿ ದಂಡನಾಧಿಕಾರಿಗೆ ಹಸ್ತಾಂತರಿಸುವ ಮೂಲಕ ನಡೆಸಿದರು.



