ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ ಮೂವರಿಗೆ ಕೋವಿಡ್ ಪಾಸಿಟಿವ್ ಆಗಿದೆ. 11 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ಸೋಂಕು ಖಚಿತರಾದವರಲ್ಲಿ ಮೂವರು ವಿದೇಶಗಳಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಶಾರ್ಜಾದಿಂದ ಆಗಮಿಸಿದ್ದ ಉದುಮ ಗ್ರಾಮ ಪಂಚಾಯತ್ ನಿವಾಸಿ 27 ವರ್ಷದ ವ್ಯಕ್ತಿ, ಕುವೈತ್‍ನಿಂದ ಬಂದಿದ್ದ ಚೆಂಗಳ ಪಂಚಾಯತ್ ನಿವಾಸಿ 43 ವರ್ಷದ ವ್ಯಕ್ತಿ, ಪಡನ್ನ ಪಂಚಾಯತ್ ನಿವಾಸಿ 36 ವರ್ಷದ ವ್ಯಕ್ತಿಗೆ ಸೋಂಕು ಖಚಿತವಾಗಿದೆ.
ಉದಯಗಿರಿ ಸಿ.ಎಫ್.ಎಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ, ಮಹಾರಾಷ್ಟ್ರದಿಂದ ಆಗಮಿಸಿದ್ದ, ಕಾಸರಗೋಡು ನಗರಸಭೆ ವ್ಯಾಪ್ತಿಯ ನಿವಾಸಿ 30, 38 ವರ್ಷದ ವ್ಯಕ್ತಿಗಳು, ಮಧೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 23 ವರ್ಷದ ವ್ಯಕ್ತಿ, ಮಂಗಲ್ಪಾಡಿ ಪಂಚಾಯತ್ ನಿವಾಸಿ 54 ವರ್ಷದ ವ್ಯಕ್ತಿ, ಕುಂಬಳೆ ಗ್ರಾಮ ಪಂಚಾಯತ್ ನಿವಾಸಿ 45 ವರ್ಷದ ವ್ಯಕ್ತಿ, ಪೈವಳಿಕೆ ಪಂಚಾಯತ್ ವ್ಯಾಪ್ತಿಯ 39 ವರ್ಷದ ನಿವಾಸಿ, ಪಡನ್ನಕ್ಕಾಡ್ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದ, ಶಾರ್ಜಾದಿಂದ ಬಂದಿದ್ದ ಉದುಮ ಪಂಚಾಯತ್ ನಿವಾಸಿ 48 ವರ್ಷದ ವ್ಯಕ್ತಿ, ಕುವೈತ್‍ನಿಂದ ಆಗಮಿಸಿದ್ದ ಪುಲ್ಲೂರು-ಪೆರಿಯ ನಿವಾಸಿ 24 ವರ್ಷದ ವ್ಯಕ್ತಿ, ಮಹಾರಾಷ್ಟ್ರದಿಂದ ಬಂದಿದ್ದ ಕುಂಬ್ಡಾಜೆ ಪಂಚಾಯತ್ ನಿವಾಸಿ 41, 34 ವರ್ಷದ ವ್ಯಕ್ತಿಗಳು, ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ, ಖತ್ತರ್‍ನಿಂದ ಆಗಮಿಸಿದ್ದ
ಮಡಿಕೈ ಗ್ರಾಮ ಪಂಚಾಯತ್ ನಿವಾಸಿ 38 ವರ್ಷದ ವ್ಯಕ್ತಿಗೆ ಕೋವಿಡ್ ನೆಗೆಟಿವ್ ಆಗಿದೆ.
ಜಿಲ್ಲೆಯಲ್ಲಿ 3682 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 3351 ಮಂದಿ ಮನೆಗಳಲ್ಲಿ, 331 ಮಂದಿ ಸಾಂಸ್ಥಿಕ ನಿಗಾದಲ್ಲಿದ್ದಾರೆ. ನೂತನವಾಗಿ 228 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 362 ಮಂದಿಯ ಫಲಿತಾಂಶ ಲಭಿಸಿಲ್ಲ. 228 ಮಂದಿ ತಮ್ಮ ನಿಗಾ ಅವ„ ಪೂರ್ಣಗೊಳಿಸಿದ್ದಾರೆ.
ಕೇರಳದಲ್ಲಿ 97 ಮಂದಿಗೆ ಸೋಂಕು :
ಕೇರಳ ರಾಜ್ಯದಲ್ಲಿ ಗುರುವಾರ 97 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ 89 ಮಂದಿ ಗುಣಮುಖರಾಗಿದ್ದಾರೆ. ರೋಗ ಬಾ„ತರಲ್ಲಿ 65 ಮಂದಿ ವಿದೇಶದಿಂದ ಬಂದವರು. 29 ಮಂದಿ ಇತರ ರಾಜ್ಯಗಳಿಂದ ಬಂದವರು. ಮೂವರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ.
ತಿರುವನಂತಪುರ -5, ಕೊಲ್ಲಂ-13, ಪತ್ತನಂತಿಟ್ಟ-11, ಆಲಪ್ಪುಳ-9, ಕೋಟ್ಟಯಂ-11, ಇಡುಕ್ಕಿ-6, ಎರ್ನಾಕುಳಂ-6, ತೃಶ್ಶೂರು-6, ಪಾಲ್ಘಾಟ್-14, ಮಲಪ್ಪುರಂ-4, ಕಲ್ಲಿಕೋಟೆ-5, ಕಣ್ಣೂರು-4, ಕಾಸರಗೋಡು-3 ಎಂಬಂತೆ ರೋಗ ಬಾಧಿಸಿದೆ.
ತಿರುವನಂತಪುರ-9, ಕೊಲ್ಲಂ-8, ಪತ್ತನಂತಿಟ್ಟ-3, ಆಲಪ್ಪುಳ-10, ಕೋಟ್ಟಯಂ-2, ಎರ್ನಾಕುಳಂ-4, ತೃಶ್ಶೂರು-22, ಪಾಲ್ಘಾಟ್- 11, ಮಲಪ್ಪುರಂ-2, ಕಲ್ಲಿಕೋಟೆ-1, ವಯನಾಡು-2, ಕಣ್ಣೂರು-4, ಕಾಸರಗೋಡು-11 ಎಂಬಂತೆ ಗುಣಮುಖರಾಗಿದ್ದಾರೆ.
ಕಣ್ಣೂರಿನಲ್ಲಿ ಅಬಕಾರಿ ಇಲಾಖೆಯ ಚಾಲಕ ಕೆ.ಪಿ.ಸುನಿಲ್ (28) ಅವರು ಸಾವಿಗೀಡಾಗುವುದರೊಂದಿಗೆ ರಾಜ್ಯದಲ್ಲಿ ಕೋವಿಡ್‍ನಿಂದ ಸತ್ತವರ ಸಂಖ್ಯೆ 21 ಕ್ಕೇರಿತು.
ಮಾಸ್ಕ್ ಧರಿಸದ 215 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 215 ಕೇಸುಗಳನ್ನು ದಾಖಲಿಸಲಾಗಿದೆ. ಈ ವರೆಗೆ ಜಿಲ್ಲೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ 7091 ಕೇಸುಗಳನ್ನು ದಾಖಲಿಸಲಾಗಿದೆ.
ಲಾಕ್ ಡೌನ್ ಉಲ್ಲಂಘನೆ : 11 ಕೇಸುಗಳು : ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 11 ಕೇಸುಗಳನ್ನು ದಾಖಲಿಸಲಾಗಿದೆ. 12 ಮಂದಿಯನ್ನು ಬಂ„ಸಲಾಗಿದ್ದು, 8 ವಾಹನಗಳನ್ನು ವಶಪಡಿಸಲಾಗಿದೆ. ಕುಂಬಳೆ ಪೆÇಲೀಸ್ ಠಾಣೆಯಲ್ಲಿ 5 ಕೇಸುಗಳು, ಕಾಸರಗೋಡು 1, ಮೇಲ್ಪರಂಬ 1, ಹೊಸದುರ್ಗ 1, ನೀಲೇಶ್ವರ 1, ವೆಳ್ಳರಿಕುಂಡ್ 1, ಚಂದೇರ 1 ಕೇಸುಗಳನ್ನು ದಾಖಲಿಸಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಈ ಪ್ರಕರಣಕ್ಕೆ ಸಂಬಂ„ಸಿ 2650 ಕೇಸುಗಳು ದಾಖಲಾಗಿವೆ. 3342 ಮಂದಿಯನ್ನು ಬಂಧಿಸಲಾಗಿದೆ. 1149 ವಾಹನಗಳನ್ನು ವಶಪಡಿಸಲಾಗಿದೆ.


