ಕಾಸರಗೋಡು: ಉದ್ದಿಮೆ ಇಲಾಖೆಯ ಟಿ.ವಿ.ಚಾಲೆಂಜ್ ಕಾರ್ಯಕ್ರಮದ ಅಂಗವಾಗಿ 50 ಟಿ.ವಿ.ಸೆಟ್ ಗಳನ್ನು ಹಸ್ತಾಂತರಿಸಲಾಗಿದೆ. ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ರಾಜ್ಯದಲ್ಲಿ ಆರಂಭಗೊಂಡಿರುವ ಆನ್ ಲೈನ್ ತರಗತಿಗಳ ಅಂಗವಾಗಿ ಮಕ್ಕಳೀಗೆ ಕಲಿಕಾ ಸಾಮಾಗ್ರಿಗಳನ್ನು ಪೂರೈಸುವ ನಿಟ್ಟಿನಲ್ಲಿ ಉದ್ದಿಮೆ ಇಲಾಖೆಯ ಟಿ.ವಿ.ಚಾಲೆಂಜ್ ಕಾರ್ಯಕ್ರಮದ ಅಂಗವಾಗಿ ಇದು ಜರುಗಿತು. ಜಿಲ್ಲೆಯ ಅನಂತಪುರ ಇಂಡಸ್ಟ್ರಿಯಲ್ ಡೆವೆಲಪ್ ಮೆಂಟ್ ಅಸೋಸಿಯೇಶನ್, ಕೆ.ಎಸ್.ಎಸ್.ಐ.ಎ., ಇತರ ಕಿರು ಉದ್ದಮೆ ಘಟಕಗಳು ಕೊಡುಗೆಯಾಗಿ ನೀಡಿರುವ ಟಿ.ವಿ.ಸೆಟ್ ಗಳನ್ನು ಹಸ್ತಾಂತರಿಸಲಾಗಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಸಮಕ್ಷದಲ್ಲಿ ಶಿಕ್ಷಣ ಇಲಾಖೆ ಡೆಪ್ಯೂಟಿ ಡೈರೆಕ್ಟರ್ ಪುಷ್ಪಾ ಕೆ.ವಿ. ಅವರಿಗೆ ಜಿಲ್ಲ ಉದ್ದಿಮೆ ಕೇಂದ್ರ ಪ್ರಧಾನ ಪ್ರಬಂಧಕ ಜರ್ಸಿ ಒ.ರಂಜಿತ್ ಅವರು ಹಸ್ತಾಂತರಿಸಿದರು. ಪ್ರಬಂಧಕಿ ರೇಖಾ ಆರ್., ಸಹಾಯಕ ಜಿಲ್ಲಾ ಉದ್ದಿಮೆ ಅಧಿಕಾರಿ ಶ್ರೀಜಿತ್ ಕೆ.ಕೆ., ಹಿರಿಯ ಸಹಕಾರಿ ಇನ್ಸ್ ಪೆಕ್ಟರ್ ಬಿಜೇಶ್ ಕೆ., ಅನಂತಪುರ ಇಂಡಸ್ಟ್ರಿಯಲ್ ಡೆವೆಲಪ್ ಮೆಂಟ್ ಅಸೋಸಿಯೇಶನ್ ಅಧ್ಯಕ್ಷ ಫಿರೋಝ್ ಖಾನ್, ಪ್ರಧಾನ ಕಾರ್ಯದರ್ಶಿ ವಿಕ್ರಂ ಪೈ, ಸಜಿ ಕುಮಾರ್, ಸಾಲಿ, ಕಲ್ಯಾಣ್ ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.


