ತಿರುವನಂತಪುರ: ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಜೂನ್ ತಿಂಗಳಲ್ಲಿ ರಾಜ್ಯ ವಿದ್ಯುತ್ ಪ್ರಸರಣ ಬೋರ್ಡ್ ಗ್ರಾಹಕರಿಗೆ ನೀಡಿರುವ ಬೃಹತ್ ಮೊತ್ತದ ಬಿಲ್ ನ್ಯಾಯಾಲಯ ದಾವೆ ಮತ್ತು ಜನಾಕ್ರೋಶಕ್ಕೊಳಗಾಗುತ್ತಿರುವಂತೆ ಪ್ರತಿಕ್ರಿಯಿಸಿರುವ ಇಲಾಖೆಯು ಅಧಿಕ ವಿದ್ಯುತ್ ಬಿಲ್ ಪಾವತಿಸಲಾಗದ ಗ್ರಾಹಕರ ವಿದ್ಯುತ್ ವಿಚ್ಚೇದನ ಮಾಡಲು ಇಲಾಖೆ ಉತ್ಸುಕ ಆಗಿಲ್ಲ ಎಂದು ಭರವಸೆ ನೀಡಿದೆ. ಜೊತೆಗೆ ಗೃಹ ಬಳಕೆಯ ಗ್ರಾಹಕರು ತಮ್ಮ ಒಟ್ಟು ಬಿಲ್ ಮೊತ್ತದ ಶೇ. 70 ರಷ್ಟು ಬಿಲ್ ಪಾವತಿಸಬೇಕು. ಮತ್ತು ಕಡಿಮೆ ಬಳಕೆಯ ಗ್ರಾಹಕರಿಗೆ ಬಿಲ್ ಕಡಿತಗೊಳಿಸಲಾಗುವುದೆಂದೂ ಕೆಎಸ್‍ಇಬಿ(ಕೇರಳ ಸ್ಟೇಟ್ ಇಲೆಕ್ಟ್ರಿಸಿಟಿ ಬೋರ್ಡ್) ಹೇಳಿದೆ.
ಅಲ್ಲದೆ ಕೆಎಸ್‍ಇಬಿಯು ಗ್ರಾಹಕರಿಗೆ ಮೂರು ಕಂತುಗಳಲ್ಲಿ ಬಿಲ್ ಪಾವತಿಸುವ ಸೌಲಭ್ಯ ಕಲ್ಪಿಸಿದೆ. ಪ್ರತಿಬಾರಿ ಶೇ.50, 25 ರಂತೆ ಎರಡು ಕಂತುಗಳಲ್ಲಿ ಬಿಲ್ ಮೊತ್ತ ಪಾವತಿಸಲು ಕ್ರಮ ಕೈಗೊಂಡಿದೆ. ಗೃಹ ಬಳಕೆಯೇತರ ಗ್ರಾಹಕರು ಶೇ. 70 ರಷ್ಟು ಬಿಲ್ ಪಾವತಿಸಬೇಕಾಗುತ್ತದೆ. ಕೆಎಸ್‍ಇಬಿ ಬಡ್ಡಿ ರಿಯಾಯತಿಯನ್ನು ಸಹ ಪರಿಗಣಿಸುತ್ತಿದೆ ಎಂದು ಘೋಷಿಸಿದೆ. ವಿದ್ಯುತ್ ಬಿಲ್ ಕಡಿಮೆ ಇದ್ದರೆ ವಿದ್ಯುತ್ ಬಿಲ್ ಕಡಿಮೆಯಾಗುತ್ತದೆ ಎಂದು ಕೆಎಸ್‍ಇಬಿ ಅಧಿಕಾರಿಗಳು ತಿಳಿಸಿದ್ದಾರೆ.
ಲಾಕ್ ಡೌನ್ ಕಾಲಾವಧಿಯ ಎರಡು ತಿಂಗಳ ಬಿಲ್ ಮೊತ್ತದಲ್ಲಿ ಶೇ.70 ನ್ನು ಗ್ರಾಹಕರು ಜೂನ್ ತಿಂಗಳಲ್ಲಿ ಪಾವತಿಸಬೇಕು ಎಂದು ಕೆಎಸ್‍ಇಬಿ ತಿಳಿಸಿದೆ.ಗ್ರಾಹಕರಿಂದ ಯಾವ ಕಾರಣಕ್ಕೂ ಅಧಿಕ ಮೊತ್ತ ಸ್ವೀಕರಿಸಲಾರೆವು. ಗ್ರಾಹಕರು ಬಳಸಿದ ವಿದ್ಯುತ್ ಬಿಲ್ ನ್ನು ಇಲಾಖೆ ಪಾವತಿಸಲು ಕೇಳಿದೆ ಎಂದು ಕೆಎಸ್‍ಇಬಿ ನ್ಯಾಯಾಲಯಕ್ಕೆ ಸಮರ್ಪಿಸಿದ ವರದಿಯಲ್ಲಿ ತಿಳಿಸಿದೆ. ನ್ಯಾಯಾಲಯ ಗ್ರಾಹಕರ ದೂರಿಗೆ ತೀರ್ಪು ನೀಡದೆ ಮುಂದೂಡಿದೆ.
ಲಾಕ್‍ಡೌನ್ ಕಾರಣ ಕೆಎಸ್‍ಇಬಿಗೆ ಮೀಟರ್ ರೀಡಿಂಗ್ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ವಿದ್ಯುತ್ ಬೋರ್ಡ್ ನೀಡಿರುವ ಸಲಹೆಯಂತೆ ಬಹುತೇಕ ಗ್ರಾಹಕರು ಆನ್ ಲೈನ್ ಮೂಲಕ ಹಿಂದಿನ ಬಿಲ್ ಗಳ ಸರಾಸರಿಗೆ ಅನುಸರಿಸಿ ಬಿಲ್ ಮೊತ್ತ ಪಾವತಿಸಿದ್ದರು. ಆದರೆ ಜೂನ್ ತಿಂಗಳಲ್ಲಿ ಮೀಟರ್ ರೀಡಿಂಗ್ ನಡೆಸಿದ ಇಲಾಖೆ ಬಿಲ್ ರೀಡಿಂಗ್ ನಲ್ಲಿ ಕಂಡುಬಂದಂತೆ ತಾರೀಫ್ ಹೆಚ್ಚಳಗೊಳಿಸಿ ಬಿಲ್ ಪಾವತಿಸಿರುವುದು ವಿವಾದವಾಗಿತ್ತು.


