ಕಾಸರಗೊಡು: ವೆಲ್ಡಿಂಗ್ ಕಾರ್ಯ ನಡೆಸುತ್ತಿರುವ ಮಧ್ಯೆ ವಿದ್ಯುತ್ ಶಾಕ್ ತಗುಲಿ ಚೆರ್ಕಳ ಇಂದಿರಾನಗರ ಹೌಸಿಂಗ್ ಕಾಲನಿ ನಿವಾಸಿ ಎಸ್. ಮಂಜುನಾಥ(31)ಮೃತಪಟ್ಟಿದ್ದಾರೆ.
ಕರ್ಮಂತೋಡಿಯ ಅಂಗಡಿಯೊಂದರ ನೌಕರನಾಗಿರುವ ಇವರಿಗೆ ಪಾಡಿಯ ಮನೆಯೊಂದರಲ್ಲಿ ವೆಲ್ಡಿಂಗ್ ಕೆಲಸ ನಡೆಸುವ ಮಧ್ಯೆ ಶಾಕ್ ತಗುಲಿತ್ತು. ಶಾಕ್‍ತಗುಲಿ ಬಿದ್ದ ಇವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ.


