ಉಪ್ಪಳ: ಕೋವಿಡ್ ಹಿನ್ನೆಲೆಯಲ್ಲಿ ಮಂಗಲ್ಪಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವ್ಯವಸ್ಥೆಗೊಳಿಸಲಾದ ಅನ್ಯರಾಜ್ಯ ಕಾರ್ಮಿಕರಿಗಿರುವ ಕ್ಯಾಂಪ್ ನಿಂದ 12ರ ಹರೆಯದ ಅಪ್ರಾಪ್ತೆಯನ್ನು ಅಪರಾಧಿಯೆಂದು ಸಂಶಯಿಸುವ ವ್ಯಕ್ತಿಯೊಬ್ಬ ಅಪಹರಿಸಿರುವುದಾಗಿ ತಿಳಿದುಬಂದಿದೆ.
ಚೆರುಗೋಳಿ ಶಾಲಾ ವಠಾರದಲ್ಲಿ ವ್ಯವಸ್ಥೆಗೊಳಿಸಲಾದ ಕ್ಯಾಂಪ್ ನಿಂದ ಗುರುವಾರ ಬೆಳಿಗ್ಗೆ ಆಂಧ್ರಪ್ರದೇಶ ನಿವಾಸಿ ಕುಟುಂಬದ 12ರ ಹರೆಯದ ಬಾಲಕಿಯನ್ನು ಏರ್ವಾಡಿ ರಾಮನಾಥಪುರ ನಿವಾಸಿ ಶಿನ್ ಮೊಹಮ್ಮದ್ ಎಂಬಾತ ಅಪಹರಿಸಿರುವುದಾಗಿ ಪೋಲೀಸರಿಗೆ ದೂರು ನೀಡಲಾಗಿದೆ. ಮಂಜೇಶ್ವರ ಪೋಲೀಸರು ದೂರು ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.


