ಕಾಸರಗೋಡು: ಕೋವಿಡ್ ಎಂಬ ಮಹಾಮಾರಿ ಸೃಷ್ಟಿಸಿರುವ ವಿಶೇಷ ಹಿನ್ನೆಲೆಯಲ್ಲಿ ಎಲ್ಲ ಮುಗ್ಗಟ್ಟುಗಳನ್ನೂ ಪರಿಹರಿಸಿಕೊಂಡು ಅಂಗನವಾಡಿಗಳು ಸಕ್ರಿಯವಾಗಿ ರಂಗದಲ್ಲಿವೆ. ವಿವಿಧ ವಲಯಗಳಲ್ಲಿ ಫಲಾನುಭವಿಗಳಿಗೆ ಸೇವೆ ಒದಗಿಸುವಲ್ಲಿ ಅಂಗನವಾಡಿಗಳು ಹಿಂದೆಬಿದ್ದಿಲ್ಲ. ಜನಜಾಗೃತಿ ಮೂಡಿಸುವ, ಸೇವೆ ಒದಗಿಸುವ ಯೋಜನೆಯೊಂದಿಗೆ "ಜತೆಗಿವೆ ಅಂಗನವಾಡಿಗಳು" ಎಂಬ ಕ್ಯಾಂಪೇನ್ ಕಾಸರಗೋಡು ಜಿಲ್ಲೆಯಲ್ಲಿ ಈಗ ಎರಡನೇ ಹಂತದಲ್ಲಿದೆ. ಗರ್ಭಿಣಿಯರು, ಹಾಳುಣಿಸುವ ತಾಯಂದಿರು, ಮಕ್ಕಲು, ವಯೋವೃಧ್ಧರು ಮೊದಲಾದವರ ಕಲ್ಯಾಣ ಮತ್ತು ಕ್ಷೇಮ ಮಾಹಿತಿ ವಿಚಾರಿಸುವ ಮತ್ತು ತತ್ಸಂಬಂಧಿ ಸೌಲಭ್ಯ ಒದಗಿಸುವ ಚಟುವಟಿಕೆ ಮೊಟಕಿಲ್ಲದೆ ನಡೆದುಬರುತ್ತಿವೆ.
ಇದೇ ವೇಳೆ "ಕೊರೋನಾ ಮತ್ತು ಗರ್ಭಧಾರಣೆಯ ಕಾಲ" ಮತ್ತು "ತಾಯಿಯ ಎದೆ ಹಾಲಿನ ಮಹತ್ವ" ಎಂಬ ವಿಷಯದಲ್ಲಿ ಜನಜಾಗೃತಿ ತರಗತಿ ಜಿಲ್ಲೆಯಾದ್ಯಂತ ನಡೆಸಲಾಗಿದೆ. ಮೊಬೈಲ್ ಫೆÇೀನ್ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವ ಕಾಯಕ ನಡೆಸಲಾಗುತ್ತಿದೆ. ಸಂಪುಷ್ಟ ಕೇರಳ ಯೋಜನೆಯ ಪ್ರಕಾರ ಜಿಲ್ಲಾ-ಬ್ಲೋಕ್ ಮಟ್ಟದಲ್ಲಿ ನೇಮಿಸಿರುವ ಸಿಬ್ಬಂದಿಯ ತಾಂತ್ರಿಕ ಪರಿಣತಿ ಮತ್ತು ಸೇವೆ ಈ ವೇಳೆ ಪ್ರಯೋಜನಕಾರಿಯಾಗಲಿದೆ. ವಾಟ್ಸ್ ಆಪ್ ವೀಡಿಯೋ ಕಾಲ್ ಮೂಲಕ ಯಾ ಫೆÇೀನ್ ಕಾನ್ ಫ್ರಾನ್ಸ್ ಮೂಲಕ ಅಂಗನವಾಡಿ ಕಾರ್ಯಕರ್ತರು ಫಲಾನುಭವಿಗಳನ್ನು ಸಂಪರ್ಕಿಸುತ್ತಾರೆ.
ಯೋಜನೆಯ ಅಂಗವಾಗಿ ಜಿಲ್ಲೆಯ ಅಂಗನವಾಡಿ ಕಾರ್ಯರ್ತರು ಈಗಾಗಲೇ 5284 ಫಲಾನುಭವಿಗಳಿಗೆ ಕರೆಮಾಡಿ ಅಗತ್ಯವಿರುವ ಸಹಾಯ ಒದಗಿಸಿದ್ದಾರೆ ಎಂದು ಐ.ಸಿ.ಡಿ.ಎಸ್. ಜಿಲ್ಲಾ ಪೆÇ್ರೀಗ್ರಾಂ ಅಧಿಕಾರಿ ಕವಿತಾರಾಣಿ ರಂಜಿತ್ ತಿಳಿಸಿದರು. ಸಿ.ಡಿ.ಪಿ.ಒ.ಗಳು, ಸೂಪರ್ ವೈಸರ್ ಗಳು, ಎನ್.ಎನ್.ಎಂ. ಸಿಬ್ಬಂದಿ, ಐ.ಸಿ.ಡಿ.ಎಸ್. ಮಿನಿಸ್ಟಿರಿಯಲ್ ಸಿಬ್ಬಂದಿ, ಸೈಕೋ ಸೋಷ್ಯಲ್ ಶಾಲಾ ಕೌನ್ಸಿಲರ್ ಗಳು, ವೈದ್ಯರು, ಜೆ.ಪಿ.ಎಚ್.ಎನ್.ಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಮೊದಲಾದವರ ಸಹಕಾರ ಈ ಚಟುವಟಿಕೆಗಳಿಗೆ ಹೆಚ್ಚುವರಿ ಬಲ ನೀಡುತ್ತಿದೆ ಎಂದವರು ನುಡಿದರು.

