ಎರ್ನಾಕುಳಂ: ಎರ್ನಾಕುಳಂ ನಲ್ಲಿರುವ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಇತ್ತೀಚೆಗೆ ವರದಿಯೊಂದನ್ನು ಸಲ್ಲಿಸಲು ಬಂದಿದ್ದ ಪೋಲೀಸ್ ಅಧಿಕಾರಿಗೆ ಕೋವಿಡ್ ಸೋಂಕು ದೃಢಪಟ್ಟಿರುವುದರಿಂದ ಉಚ್ಚ ನ್ಯಾಯಾಲಯದ ಅಧಿಕಾರಿಗಳಿಗೆ ಇದೀಗ ಕಳವಳ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಸುನಿಲ್ ಥಾಮಸ್ ಸ್ವಯಂ ಪರೀಕ್ಷೆ ನಡೆಸಿದರು. ಪರೀಕ್ಷಾ ವರದಿ ಇನ್ನಷ್ಟೇ ಲಭ್ಯವಾಗಬೇಕಿದೆ. ದೂರೊಂದರ ವಿಚಾರಣೆಗೆ ಸಂಬಂಧಿಸಿ ವರದಿಯನ್ನು ಸಲ್ಲಿಸಲು ಕಳಮಶ್ಚೇರಿ ಪೆÇಲೀಸ್ ಠಾಣೆಯ ಅಧಿಕಾರಿಯೊಬ್ಬರು ಕೆಕಲವು ದಿನಗಳ ಹಿಂದೆ ನ್ಯಾಯಾಲಯಕ್ಕೆ ಭೇಟಿ ನೀಡಿದ್ದರು. ಶುಕ್ರವಾರದ ಕೋವಿಡ್ ವರದಿಯಲ್ಲಿ ಆ ಪೋಲೀಸ್ ಅಧಿಕಾರಿಗೆ ಕೋವಿಡ್ ದೃಢಪಟ್ಟಿರುವುದರಿಂದ ನ್ಯಾಯಾಲಯದಲ್ಲಿದ್ದವರಿಗೆ ಇದೀಗ ರೋಗಭೀತಿ ಕಾಡಿದೆ. ಪೆÇಲೀಸ್ ಅಧಿಕಾರಿ ನ್ಯಾಯಾಧೀಶರನ್ನೂ ಭೇಟಿಯಾಗಿದ್ದು ಇದರಂತೆ ಹೈಕೋರ್ಟ್ ನ್ಯಾಯಾಧೀಶರು ಕ್ವಾರಂಟೈನ್ ಗೆ ಒಳಗಾಗಲು ನಿರ್ಧರಿಸಿದ್ದಾರೆ.
ಪ್ರಸ್ತುತ ನ್ಯಾಯಾಲಯ ಸಂಕಿರಣವನ್ನು ಅಗ್ನಿಶಾಮಕ ದಳದ ಸಹಾಯದಲ್ಲಿ ಸೋಂಕುನಿವಾರಕ ಔಷಧಿ ಸಿಂಪಡಿಸಲು ನಿರ್ಧರಿಸಲಾದೆ. ವಕೀಲರ ಸಂಘದ ಕಚೇರಿಯನ್ನೂ ಹೈಕೋರ್ಟ್ ಮುಚ್ಚಿದೆ. ನ್ಯಾಯಮೂರ್ತಿ ಸುನಿಲ್ ಥಾಮಸ್ ಅವರ ಪೀಠದ ಪಕ್ಕದ ಕಚೇರಿಯನ್ನು ಮುಚ್ಚಲಾಗಿದೆ.
ಜೂ.17 ರಂದು ಬೆಳಿಗ್ಗೆ ಪ್ರಕರಣವೊಂದರ ವರದಿಯೊಂದಿಗೆ ಪೆÇಲೀಸ್ ಹೈಕೋರ್ಟ್‍ಗೆ ಬಂದಿದ್ದರು. ಹೈಕೋರ್ಟ್‍ನಲ್ಲಿರುವ ಸಿಸಿಟಿವಿ ಕ್ಯಾಮೆರಾ ಮೂಲಕ ಪೋಲೀಸ್ ಅಧಿಕಾರಿ ಯಾರ್ಯಾರನ್ನೆಲ್ಲ ಭೇಟಿಯಾಗಿರುವರೆಂದು ಆರೋಗ್ಯ ಇಲಾಖೆ ಪರೀಕ್ಷಿಸಿದೆ. ಆರೋಗ್ಯ ಇಲಾಖೆ ಸುಮಾರು 60 ಜನರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.


