ಪೆರ್ಲ: ಪಡ್ರೆ ಗ್ರೂಪ್ ವಿಲೇಜಿನ ಪಡ್ರೆ-ಕಾಟುಕುಕ್ಕೆ ಎಂಬ ಗ್ರಾಮಗಳನ್ನು ಸ್ವತಂತ್ರ ಗ್ರಾಮಗಳಾಗಿ ವಿಂಗಡಿಸಿ ಪಡ್ರೆ ವಿಲೇಜ್ ಗ್ರಾಮ ಕಚೇರಿಯ ಉದ್ಘಾಟನೆ ಶನಿವಾರ ನಡೆಯಿತು.
ಬೆಳಗ್ಗೆ ಸ್ವರ್ಗದಲ್ಲಿ ಕಂದಾಯ ಸಚಿವ ಇ. ಚಂದ್ರಶೇಖರನ್ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಮಂಜೇಶ್ವರ ಶಾಸಕ ಎಂ.ಸಿ ಕಮರುದ್ದೀನ್ ವಹಿಸಿದ್ದರು.ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ.ಸಜಿತ್ ಬಾಬು, ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾರದಾ ವೈ, ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಖಂಡಿಗೆ, ಜಿಲ್ಲಾ ಪಂಚಾಯತಿ ಸದಸ್ಯೆ ಪುಷ್ಪಾ ಅಮೆಕ್ಕಳ, ಎಣ್ಮಕಜೆ ಗ್ರಾಮ ಪಂಚಾಯತಿ ಕ್ಷೇಮ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಚಂದ್ರಾವತಿ ಎಂ, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯೆ ಸವಿತಾ ಬಾಳಿಕೆ,ಗ್ರಾಮ ಪಂಚಾಯತಿ ಸದಸ್ಯರಾದ ಹನೀಫ್ ನಡುಬೈಲು, ಶಶಿಕಲಾ ವೈ, ರೂಪವಾಣಿ ಆರ್ ಭಟ್, ಪುಟ್ಟಪ್ಪ ಕೆ, ಸ್ವರ್ಗ ಶಾಲಾ ಪ್ರಬಂಧಕ ಹೃಷಿಕೇಶ್ ವಿ.ಯಸ್, ಕಟ್ಟಡದ ಮಾಲೀಕ ಶೇಷಪ್ಪ ಪೂಜಾರಿ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು,ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


