ಮುಳ್ಳೇರಿಯ: ಮುಳ್ಳೇರಿಯದಲ್ಲಿ ಕಾರ್ಯವೆಸಗುತ್ತಿರುವ ಕಯ್ಯಾರ ಕಿಞ್ಞಣ್ಣ ರೈ ಗ್ರಂಥಾಲಯದ ಆಶ್ರಯದಲ್ಲಿ ಶುಕ್ರವಾರ ಕೇರಳ ಗ್ರಂಥಾಲಯ ಪಿತಾಮಹ ಪಿ.ಎನ್. ಪಣಿಕ್ಕರ್ ಜನ್ಮ ದಿನಾಚರಣೆಯ ಅಂಗವಾಗಿ ಗ್ರಂಥಾಲಯ ದಿನಾಚರಣೆ ನಡೆಯಿತು.
ಮುಳ್ಳೇರಿಯ ಯು.ಪಿ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಇ.ಜನಾರ್ಧನನ್ ಉದ್ಘಾಟಿಸಿದರು. ಹೈಸ್ಕೂಲು ಮುಖ್ಯೋಪಾಧ್ಯಾಯಿನಿ ಪದ್ಮ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ತಂಬಾನ್ ನಂಬ್ಯಾರ್, ಸದಾನಂದ ಮಿಂಚಿಪದವು ಉಪಸ್ಥಿತರಿದ್ದು ಶುಭಹಾರೈಸಿದರು. ಲಾಕ್ ಡೌನ್ ಸಂದರ್ಭ ಆಯೋಜಿಸಲಾಗಿದ್ದ ಕ್ವಿಜ್ ಸ್ಪರ್ಧೆ, ಮೂರು ದಿನಗಳ ಆನ್ ಲೈನ್ ಭಾಷಣ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಗ್ರಂಥಾಲಯದ ನಿರ್ವಾಹಕ ಕೆ.ಕೆ.ಮೋಹನನ್ ಸ್ವಾಗತಿಸಿ, ರಂಜಿತ್ ಕಾನಕ್ಕೋಡು ವಂದಿಸಿದರು.


