ಪೆರ್ಲ: ವಿಚಾರಗಳ ಚಿಂತನ ಮಂಥನಗಳೊಂದಿಗೆ ನೈಜತೆಯ ಸಾಕಾರಗೊಳ್ಳಬೇಕಾದರೆ ಗ್ರಂಥಾಲಯದ ಪುಸ್ತಕಗಳ ಜ್ಞಾನವನ್ನು ತನ್ನದಾಗಿಸಿಕೊಳ್ಳಬೇಕು. ಪುಸ್ತಕ ಚಿಂತೆಯನ್ನು ದೂರಮಾಡಿ ಚಿಂತಿಸುವಂತೆ ಮಾಡುತ್ತದೆ. ಕೇರಳ ಪ್ರಗತಿಯ ಮೆಟ್ಟಿಲೇರುವಲ್ಲಿ ಪ್ರತೀ ಗ್ರಾಮಗಳಲ್ಲೂ ಇರುವ ಗ್ರಂಥಾಲಯಗಳ ಪಾಲು ಹಿರಿದಾಗಿದೆ ಎಂದು ಜಿಲ್ಲಾ ಲೈಬ್ರೇರಿ ಕೌನ್ಸಿಲ್ ಸದಸ್ಯ, ರಂಗಕರ್ಮಿ ಉದಯ ಸಾರಂಗ್ ತಿಳಿಸಿದರು.
ಪೆರ್ಲ ನೇತಾಜಿ ಸಾರ್ವಜನಿಕ ಗ್ರಂಥಾಲಯದಲ್ಲಿ ಶುಕ್ರವಾರ ಜರಗಿದ ವಾಚನಾ ಪಾಕ್ಷಿಕವನ್ನು ಉದ್ಘಾಟಿಸಿ ಅವರು ಮಾತಾನಾಡಿದರು.
ಗ್ರಂಥಾಲಯ ಅಧ್ಯಕ್ಷ ರಾಮಕೃಷ್ಣ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಡಿನ ಜನರು ಪುಸ್ತಕಗಳ ಜ್ಞಾನವನ್ನು ಪಡೆಯಲು ಗ್ರಂಥಾಲಯವನ್ನು ಸದುಪಯೋಗ ಮಾಡಬೇಕೆಂದು ಕರೆ ನೀಡಿದರು. ಗ್ರಂಥಾಲಯ ಸದಸ್ಯೆ ಮಮತ ಅವರು ಪಿ ಎನ್ ಪಣಿಕ್ಕರ್ ಸಂಸ್ಮರಣೆಯನ್ನು ಮಾಡಿದರು. ಗ್ರಾಮ ಪಂಚಾಯತಿಯ ನಿಕಟಪೂವ9 ಕಾಯ9ದಶಿ9 ವೈ ನಾರಾಯಣ, ಮಣಿಕಂಠ, ವಿಶ್ವರಾಜ್, ಗ್ರಂಥಪಾಲಕಿ ಸುಕನ್ಯಾ, ದಿವ್ಯ ಉಪಸ್ಥಿತರಿದ್ದರು.
ಕಾಯ9ದರ್ಶಿ, ಶಿಕ್ಷಕ ಸಂಜೀವ ಸಿ.ಯಚ್. ಸ್ವಾಗತಿಸಿ, ಉಪಾಧ್ಯಕ್ಷ ರಾಜೇಶ್ ಬಜಕೂಡ್ಲು ವಂದಿಸಿದರು.


