HEALTH TIPS

ರೂಪಶ್ರೀ ಕೊಲೆ ಪ್ರಕರಣ : ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು


         ಮಂಜೇಶ್ವರ: ಮೀಯಪದವು ಹೈಯರ್ ಸೆಕೆಂಡರಿ ಶಾಲಾ ಶಿಕ್ಷಕಿ ರೂಪಶ್ರೀ (40) ಕೊಲೆ ಪ್ರಕರಣದ ಆರೋಪಿಗಳಾದ ಮೀಂಜ ಗ್ರಾಮದ ಮೀಯಪದವು ನಿವಾಸಿ ವೆಂಕಟ್ರಮಣ ಕಾರಂತ(43) ಹಾಗು ಮೀಯಪದವಿನ ಬಾಡಿಗೆ ಕೊಠಡಿಯಲ್ಲಿ ವಾಸಿಸುವ ಸೋಂಕಾಲು ಕೊಡಂಗೆ ನಿವಾಸಿ ನಿರಂಜನ ಕುಮಾರ್ ಕೆ(23)ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
           ತಲಾ ಇಬ್ಬರನ್ನೊಳಗೊಂಡ ವೈಯಕ್ತಿಕ ಬಾಂಡ್‍ನೊಂದಿಗೆ ತಲಾ ಒಂದು ಲಕ್ಷ ರೂ. ಮೊತ್ತದೊಂದಿಗೆ ಜಾಮೀನು ಮಂಜೂರುಮಾಡಿದೆ.
ಕೇಸಿನ ವಿಚಾರಣೆ ಮುಗಿಯುವ ವರೆಗೆ ಆರೋಪಿಗಳು ಕಾಸರಗೋಡು ಜಿಲ್ಲೆ ಪ್ರವೇಶಿಸಬಾರದು, ತುರ್ತು ಸಂದರ್ಭದಲ್ಲಿ ನ್ಯಾಯಾಲಯದ ಅನುಮತಿಯೊಂದಿಗೆ ಮಾತ್ರ ಆರೋಪಿಗಳಿಬ್ಬರಿಗೂ ಜಿಲ್ಲೆಗೆ ಪ್ರವೇಶಿಸಬಹುದಾಗಿದೆ. ಕೇಸಿಗೆ ಸಂಬಂಧಪಟ್ಟ ವ್ಯಕ್ತಿಗಳನ್ನು ಭೇಟಿಯಾಗುವುದು, ಅವರಿಗೆ ಒತ್ತಡ ಅಥವಾ ಬೆದರಿಕೆಯೊಡ್ಡುವುದು ಮಾಡಬಾರದು. ಜಾಮೀನಿನಲ್ಲಿ ಹೊರ ಬಂದ ನಂತರ ಯಾವುದೇ ಅಪರಾಧ ಕೃತ್ಯಗಳಲ್ಲಿ ಶಾಮೀಲಾಗ ಬಾರದು, ನ್ಯಾಯಾಲಯದ ಅನುಮತಿಯಿಲ್ಲದೆ ಕೇರಳದಿಂದ ಹೊರಗೆ ತೆರಳಬಾರದು, ಆರೋಪಿಗಳಿಬ್ಬರೂ ತಮ್ಮ ಪಾಸ್‍ಪೆÇೀರ್ಟ್ ನ್ಯಾಯಾಲಯಕ್ಕೆ ಒಪ್ಪಿಸುವಂತೆಯೂ ನ್ಯಾಯಾಲಯ ಸೂಚಿಸಿದೆ. ನ್ಯಾಯಾಲಯದ ಆದೇಶಗಳಿಗೆ ವಿರುದ್ಧವಾಗಿ ನಡೆದು ಕೊಂಡಲ್ಲಿ ಆರೋಪಿಗಳ ಜಾಮೀನನ್ನು ರದ್ದುಗೊಳಿಸುವ ಅಧಿಕಾರ ನ್ಯಾಯಾಲಯಕ್ಕಿರುವುದಾಗಿ ತಿಳಿಸಿದೆ.
       2020 ಜನವರಿ 16 ರಂದು ನಾಪತ್ತೆಯಾಗಿದ್ದ ರೂಪಶ್ರೀ ಅವರ ಮೃತ ದೇಹ 18 ರಂದು ಕುಂಬಳೆ ಪೆರುವಾಡ್ ಕಡಪ್ಪುರದಲ್ಲಿ ಪತ್ತೆಯಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries