ತಿರುವನಂತಪುರ: ಸ್ಥಳೀಯ ಸಂಸ್ಥೆಗಳ ಚುನಾವಣೆಯ ಅಂತಿಮ ಮತದಾನ ಪಟ್ಟಿಗಳನ್ನು ಬಿಡುಗಡೆ ಮಾಡಲಾಗಿದೆ. ಮತದಾರರ ಪಟ್ಟಿಯಲಲಿ ರಾಜ್ಯದ 941 ಗ್ರಾಮ ಪಂಚಾಯಿತಿಗಳು, 86 ಪುರಸಭೆಗಳು ಮತ್ತು 6 ಮಹಾನಗರ ಪಾಲಿಕೆಗಳಲ್ಲಿ ಪ್ರಕಟಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ವಿ.ಭಾಸ್ಕರನ್ ತಿಳಿಸಿದ್ದಾರೆ.
ಪಟ್ಟಿಯನ್ನು ಆಯಾ ಚುನಾವಣಾ ನೋಂದಣಿ ಅಧಿಕಾರಿಗಳು ಪ್ರಕಟಿಸಿದ್ದಾರೆ. ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 2,62,24,501 ಮತದಾರರು ಇದ್ದಾರೆ. ಈ ಪಟ್ಟಿಯಲ್ಲಿ 1,25,40,302 ಪುರುಷರು, 1,36,84,019 ಮಹಿಳೆಯರು ಮತ್ತು 180 ವಿಶೇಷ ಆದ್ಯತೆಯ ಮತದಾರರಿದ್ದಾರೆ.
14 ಲಕ್ಷಕ್ಕೂ ಹೆಚ್ಚು ಹೊಸ ಮತದಾರರು ಪಟ್ಟಿಯಲ್ಲಿದ್ದಾರೆ. 6,78,147 ಪುರುಷರು, 8,01,328 ಮಹಿಳೆಯರು ಮತ್ತು 66 ವಿಶೇಷ ಲಿಂಗಿಗಳು ಸೇರಿದಂತೆ ಒಟ್ಟು 14,79,541 ಮತದಾರರು ಅಂತಿಮ ಮತದಾರರ ಪಟ್ಟಿಯಲ್ಲಿದ್ದಾರೆ. ಮರಣ ಹೊಂದಿದ ಅಥವಾ ಗಮನಿಸದೆ ಉಳಿದಿರುವವರು ಸೇರಿದಂತೆ ಒಟ್ಟು 434,317 ಮತದಾರರನ್ನು ಕರಡಿನಿಂದ ಹೊರಗಿಡಲಾಗಿದೆ.
ಕರಡು ಮತದಾರರ ಪಟ್ಟಿಯನ್ನು ಜನವರಿ 20 ರಂದು ಪ್ರಕಟಿಸಲಾಗಿತ್ತು. ಕರಡಿನಲ್ಲಿ 2,51,58,230 ಮತದಾರರು ಇದ್ದರು. ಮಾರ್ಚ್ 16 ರವರೆಗೆ ಪಡೆದ ಅರ್ಜಿಗಳು ಮತ್ತು ದೂರುಗಳನ್ನು ಅನುಸರಿಸಿ ಅಂತಿಮ ಮತದಾರರ ಪಟ್ಟಿಯನ್ನು ಚುನಾವಣಾ ನೋಂದಣಿ ಅಧಿಕಾರಿಗಳು ಬುಧವಾರ ಪ್ರಕಟಿಸಿದರು.
ಈ ವರ್ಷ 941 ಗ್ರಾಮ ಪಂಚಾಯಿತಿಗಳು, 152 ಬ್ಲಾಕ್ ಪಂಚಾಯಿತಿಗಳು, 14 ಜಿಲ್ಲಾ ಪಂಚಾಯಿತಿಗಳು, 86 ಪುರಸಭೆಗಳು ಮತ್ತು 6 ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಯಲಿವೆ. ಇದೀಗ ಪ್ರಕಟವಾದ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳದವರಿಗೆ ಚುನಾವಣೆಗೆ ಮೊದಲು ತಮ್ಮ ಹೆಸರನ್ನು ಸೇರಿಸಲು ಇನ್ನೂ ಎರಡು ಅವಕಾಶಗಳನ್ನು ನೀಡಲಾಗುವುದು.
ಏತನ್ಮಧ್ಯೆ, ಕೋವಿಡ್ ಪೆÇ್ರೀಟೋಕಾಲ್ ಕಾರಣದಿಂದಾಗಿ ಮಲಪ್ಪುರಂ ಜಿಲ್ಲೆಯ ಇಡಯೂರ್ ಮತ್ತು ಎಡಪ್ಪಾಲ್ ಗ್ರಾಮ ಪಂಚಾಯಿತಿಗಳನ್ನು ಮುಚ್ಚಲಾಗಿದ್ದರೂ ಮತದಾರರ ಪಟ್ಟಿ ಪರಿಶೀಲನೆಗೆ ಲಭ್ಯವಾಗುಸುವಲ್ಲಿ ಪ್ರತ್ಯೇಕ ಕ್ರಮ ಕೈಗೊಳ್ಳಲಾಗುವುದೆಂದೂ ಚುನಾವಣಾ ಆಯುಕ್ತರು ತಿಳಿಸಿದ್ದಾರೆ.


