HEALTH TIPS

ಸೋಮವಾರದಿಂದ ವಿಕ್ಟರ್ಸ್ ಚಾನೆಲ್ ಕನ್ನಡ ಮಾಧ್ಯಮದೊಂದಿಗೆ ಹೊಸ ತರಗತಿಗಳು-ಸಂಸ್ಕøತ, ಹಿಂದಿ,ಅರಬಿಗಳೂ ಲಭ್ಯ


        ತಿರುವನಂತಪುರ: ಕೋವಿಡ್ ಕಾರಣ ಶಾಲಾರಂಭಗೊಳಿಸಲು ತೊಡಕಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆರಂಭಿಸಿರುವ ಆನ್ ಲೈನ್ ತರಗತಿ ಕೈಟ್ ವಿಕ್ಟರ್ಸ್ ಚಾನೆಲ್ ಯಶಸ್ವಿಯಾಗಿ ಪ್ರಾಯೋಗಿಕ ಎರಡು ವಾರಗಳನ್ನು ಪೂರೈಸಿದ್ದು ನಾಳೆಯಿಂದ (ಸೋಮವಾರ) ಹೊಸ ಆನ್‍ಲೈನ್ ತರಗತಿಗಳನ್ನು ಪ್ರಾರಂಭಿಸಲಿದೆ. ಕಳೆದ ಎರಡು ವಾರಗಳಿಂದ ಒಂದನೇ ತರಗತಿಯಿಂದ ಪ್ಲಸ್ ಟು ವರೆಗಿನ ಪ್ರಾಯೋಗಿಕ ತರಗತಿಗಳು ಪ್ರಸಾರವಾಗಿದ್ದರೆ, ಸೋಮವಾರದಿಂದ ಕೈಟ್ ವಿಕ್ಟರ್ಸ್ ಚಾನೆಲ್‍ನಲ್ಲಿ ಹೊಸ ತರಗತಿಗಳು ಲಭ್ಯವಿರುತ್ತವೆ. ಆನ್‍ಲೈನ್ ಮತ್ತು ಟಿವಿ ಇಲ್ಲದ ಕಾರಣದಿಂದ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಒಂದು ವಾರ ಕಾಲಾವಧಿ ನೀಡುವಂತೆ ಶಿಕ್ಷಣ ಇಲಾಖೆ ಕರೆ ನೀಡಿತ್ತು. ಇದರೊಂದಿಗೆ ಸೋಮವಾರದಿಂದ ತರಗತಿಗಳನ್ನು ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ.
      ರಾಜ್ಯಾದ್ಯಂತ ಟಿವಿ, ಆನ್‍ಲೈನ್ ಇಲ್ಲದಿರುವ 4000 ದಷ್ಟು ಕುಟುಂಬಗಳು ರಾಜ್ಯದಲ್ಲಿವೆ ಎಂದು ಸರ್ಕಾರ ನಡೆಸಿದ ಸಮೀಕ್ಷೆಯಿಂದ ತಿಳಿಯಲಾಗಿದೆ. ಎರಡು ದಿನಗಳಲ್ಲಿ ಈ ವಿದ್ಯಾರ್ಥಿಗಳಿಗೆ ಅಂತಹ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದೆಂದು   ಸರ್ಕಾರ ತಿಳಿಸಿದೆ. ಅರೇಬಿಕ್, ಉರ್ದು ಮತ್ತು ಸಂಸ್ಕೃತ ತರಗತಿಗಳು ಸೋಮವಾರದಿಂದ ಆರಂಭಗೊಳ್ಳಲಿರುವ ಆನ್‍ಲೈನ್ ತರಗತಿಗಳಲ್ಲಿ  ಪ್ರಸಾರಗೊಳ್ಳಲಿದೆ.
         ಹಿಂದಿನ ವೇಳಾಪಟ್ಟಿಯ ಪ್ರಕಾರ ಜೂನ್ 15 ರಿಂದ ತರಗತಿಗಳು ನಡೆಯಲಿವೆ ಎಂದು ಕೈಟ್ ವಿಕ್ಟರ್ಸ್ ಸುದ್ದಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮೊದಲ ಹಂತದ ಪ್ರಾಯೋಗಿಕ ತರಗತಿಗಳಿಗೆ ವಿದ್ಯಾರ್ಥಿಗಳು, ಪೆÇೀಷಕರು ಮತ್ತು ಸಾರ್ವಜನಿಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಕ್ಟರ್ಸ್ ವೆಬ್‍ನಲ್ಲಿ ಒಂದು ದಿನದಲ್ಲಿ 27 ಟಿಬಿ ಡೌನ್‍ಲೋಡ್ ಆಗಿರುವುದು ದಾಖಲಾಗಿದೆ. ಸುಮಾರು 16.5 ಲಕ್ಷ ಜನರು ಪ್ಲೇ ಸ್ಟೋರ್‍ನಿಂದ ವಿಕ್ಟರ್ ಚಾನೆಲ್ ಆಪ್ ನ್ನು ಡೌನ್‍ಲೋಡ್ ಮಾಡಿಕೊಂಡಿರುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ. ಹತ್ತು ಲಕ್ಷ ಮಂದಿ ಫೇಸ್‍ಬುಕ್ ಮೂಲಕ ವೀಕ್ಷಿಸುತ್ತಿರುವರು.  ಕೆಲವು ತರಗತಿಗಳನ್ನು ಸುಮಾರು 40 ಲಕ್ಷ ಜನರು ವೀಕ್ಷಿಸುತ್ತಿರುವುದೂ ವಿಶೇಷತೆಯಾಗಿದೆ. ಕೆಲವು ಕೊಲ್ಲಿ ರಾಷ್ಟ್ರಗಳಲ್ಲಿ, ಅಮೇರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಮತ್ತು ಯುರೋಪ್ ಖಂಡದ ಕೆಲವು ಪ್ರದೇಶಗಳಲ್ಲೂ ಕೈಟ್ ವಿಕ್ಟರ್ಸ್ ವೀಕ್ಷಕರಿರುವರೆಂದು ಸರ್ಕಾರ ತಿಳಿಸಿದೆ.
      ವಿದ್ಯಾರ್ಥಿಗಳಿಂದ ಪಡೆದ ಪ್ರತಿಕ್ರಿಯೆಗಳನ್ನು ಪಡೆದು ನಾಳೆಯಿಂದ ಆರಂಭಗೊಳ್ಳಲಿರುವ ಹೊಸ ತರಗತಿಗಳಲ್ಲಿ ಕೆಲವು ಬದಲಾವಣೆಗಳು ಕಂಡುಬರಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಸಲುವಾಗಿ, ಇಂಗ್ಲಿಷ್ ಪದಗಳನ್ನು ಬರೆಯಲು ಮತ್ತು ಹಿಂದಿ, ಸಂಸ್ಕøತ ಮೊದಲಾದ ಇತರ ಭಾಷೆಗಳಲ್ಲಿನ ತರಗತಿಗಳಿಗೆ ಮಲಯಾಳನಲ್ಲಿ  ವಿವರಣೆಯನ್ನು ನೀಡಲು ನಿರ್ಧರಿಸಲಾಗಿದೆ. ಜೊತೆಗೆ ಇನ್ನಷ್ಟು ವಿಷಯಗಳನ್ನೂ ಅಳವಡಿಸಲು ನಿರ್ಧರಿಸಿರುವುದಾಗಿ ಕೈಟ್ ಸಿಇಒ  ಹೇಳಿರುವರು.
     ವಿಕ್ಟರ್ಸ್ ಚಾನೆಲ್ ಅಲ್ಲದೆ ವಿಕ್ಟರ್ಸ್‍ಎಜುಚಾನೆಲ್ ಫೇಸ್ಬುಕ್ ಪುಟದ ಮೂಲಕವೂ ಅಲ್ಲದೆ ವಿಕ್ಟರ್ಸ್ ಯೂಟ್ಯೂಬ್ ಚಾನೆಲ್ ಮೂಲಕವೂ ತರಗತಿಗಳನ್ನು ಪ್ರವೇಶಿಸಬಹುದು. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಹತ್ತನೇ ತರಗತಿ ಮತ್ತು ಪ್ಲಸ್ ಟು ತರಗತಿಗಳ ಮರುಪ್ರಸಾರವೂ ಇರಲಿದೆ.  ಒಂದನೇ ತರಗತಿಯಿಂದ ಒಂಭತ್ತನೇ ತರಗತಿಯ ವರೆಗೆ ಪ್ರತಿ ಶನಿವಾರ ಮತ್ತು ಭಾನುವಾರ ಮರುಪ್ರಸಾರಗಳೂ ನಡೆಯಲಿದೆ. ತರಗತಿಗಳನ್ನು ಜಾಲತಾಣಗಳಲ್ಲಿ ಆನ್‍ಲೈನ್ ಮತ್ತು ಆಫ್‍ಲೈನ್‍ಗಳಾಗಿ ಡೌನ್ ಲೋಡ್‍ಗೈದು ವೀಕ್ಷಿಸಬಹುದಾಗಿದೆ.
     ಯೂಟ್ಯೂಬ್.ಕಾಂ/ಡಿಆರ್‍ಸಿಪಿಕೆಡಿ ಎಂಬ ಲಿಂಕ್ ಮೂಲಕ  ತಮಿಳು ಮಾಧ್ಯಮ ತರಗತಿಗಳು ಲಭ್ಯವಾಗುವುದು. ವಿಶೇಷವೆಂಬಂತೆ ಕನ್ನಡ ಮಾಧ್ಯಮ ತರಗತಿಗಳು ಆರಂಭಗೊಳ್ಳಲಿದ್ದು ಯೂಟ್ಯೂಬ್ ಡಾಟ್ ಕಾಂ/ಕೈಟ್ ಕಾಸರಗೋಡ್ ಲಿಂಕ್ ಮೂಲಕ ಲಭ್ಯವಾಗಲಿದೆ. ನಾಳೆಯಿಂದ ಶುಕ್ರವಾರದ ವರೆಗೆ ಕನ್ನಡ ಹಾಗೂ ತಮಿಳು ಭಾಷೆಗಳ ತರಗತಿಗಳು ಪ್ರಾಯೋಗಿಕವಾಗಿ ನಡೆಯಲಿದೆ. ಈ ತರಗತಿಗಳು ಸ್ಥಳೀಯ ಕೇಬಲ್ ಚಾನೆಲ್‍ಗಳ ಮೂಲಕ ಪ್ರಸಾರ ಮಾಡುವ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries