HEALTH TIPS

ಹೆಚ್ಚುತ್ತಿರುವ ಡೆಂಗ್ಯೂ: ನಿಯಂತ್ರಣಾ ಕ್ರಮಗಳಲ್ಲಿ ತೊಡಗಿಸಿಕೊಂಡ ಆರೋಗ್ಯ ಇಲಾಖೆ

 
          ಕಾಸರಗೋಡು: ಆರೋಗ್ಯ ಇಲಾಖೆಯು ಜಿಲ್ಲೆಯಲ್ಲಿ 2063 ಶಂಕಿತ ಡೆಂಗ್ಯೂ ಪ್ರಕರಣಗಳನ್ನು ಪತ್ತೆಹಚ್ಚಿದ್ದು, 91 ಪ್ರಕರಣಗಳು ದೃಢಪಟ್ಟಿದೆ. ಈ ಪೈಕಿ ಇಬ್ಬರುಸಾವನ್ನಪ್ಪಿರುವರು. ಈ ಹಿನ್ನೆಲೆಯಲ್ಲಿ ಡೆಂಗ್ಯೂ  ತಡೆಗಟ್ಟುವ ಕಾರ್ಯಚಟುವಟಿಕೆಗಳನ್ನು ತೀವ್ರಗೊಳಿಸಲಾಗಿದೆ. ತಳಮಟ್ಟದಿಂದಲೇ ವಾರ್ಡ್ ಗಳಲ್ಲಿ ನೈರ್ಮಲ್ಯ ಸಮಿತಿಗಳ ಕಾರ್ಯವನ್ನು ಬಲಪಡಿಸುವ ಮೂಲಕ ತಡೆಗಟ್ಟುವ ಕ್ರಮಗಳನ್ನು ತೀವ್ರಗೊಳಿಸಲಾಗಿದೆ.
         ಡೆಂಗ್ಯೂ ಪೀಡಿತ ಪ್ರದೇಶಗಳನ್ನು ಹೆಚ್ಚಿನ ಅಪಾಯ, ಕಡಿಮೆ ಅಪಾಯ ಮತ್ತು ಮಧ್ಯಮ ಅಪಾಯ ಎಂದು ವಿಂಗಡಿಸಲಾಗಿದೆ.  ನಿರ್ಮೂಲನೆ ಉಪಕ್ರಮದ  ಭಾಗವಾಗಿ, 25 ಮನೆಗಳಿಂದ ಆಯ್ಕೆಯಾದ ಆರೋಗ್ಯ ಸ್ವಯಂಸೇವಕರ ತಂಡವು ವಾರಕ್ಕೊಮ್ಮೆ ಮೂಲ ನಿರ್ಮೂಲನೆ ಮತ್ತು ಸೊಳ್ಳೆ ಸಾಂದ್ರತೆಯ ಅಧ್ಯಯನವನ್ನು ನಡೆಸುತ್ತಿದೆ.
        ಪ್ರಕರಣಗಳು ವರದಿಯಾದ ಎಲ್ಲ ಮನೆಗಳಲ್ಲಿ, ಐ ಎಸ್ ಎಸ್ ನಡೆಸುವ ಜೊತೆಗೆ, ಹೆಚ್ಚು ವರದಿಯಾದ ಪ್ರಕರಣಗಳಲ್ಲಿ ಫಾಗಿಂಗ್ ನ್ನು ನಡೆಸಲಾಗುತ್ತಿದೆ.
ಸೊಳ್ಳೆ ನಿರ್ಮೂಲನೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ತೋಟಗಳ ಮಾಲೀಕರೊಂದಿಗೆ ಚರ್ಚಿಸಲು ಮತ್ತು ಪಾಲಿಸದವರಿಗೆ ಸಾರ್ವಜನಿಕ ಆರೋಗ್ಯ ಕಾನೂನು ನೋಟಿಸ್ ನೀಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ.
       ನೀರಿನಿಂದ ಹರಡುವ ರೋಗಗಳ ತಡೆಗಟ್ಟುವಿಕೆ ಮತ್ತು ಕುಡಿಯುವ ನೀರಿನ ಮೂಲಗಳ ಕ್ಲೋರಿನೀಕರಣ ಹಾಗೂ ತ್ಯಾಜ್ಯ ನಿರ್ವಹಣಾ ಚಟುವಟಿಕೆಗಳಿಗಾಗಿ ಜಾಗೃತಿ ಅಭಿಯಾನವನ್ನು ಆಯೋಜಿಸಲಾಗಿದೆ. ಅತಿಸಾರ ಕಾಯಿಲೆಗಳಿಂದ ಉಂಟಾಗುವ ಸಾವುಗಳನ್ನು ತಡೆಗಟ್ಟಲು ಒಆರ್‍ಟಿ ಕಾರ್ನರ್‍ಗಳು ಮತ್ತು ಡಿಪೆÇೀಗಳು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
      ತಡೆಗಟ್ಟುವ ಕ್ರಮಗಳನ್ನು ಪರಿಶೀಲಿಸಲು ಮತ್ತು ಮುಂದೆ ಯೋಜನೆ ರೂಪಿಸಲು ಕಂದಾಯ, ಬ್ಲಾಕ್ ಮತ್ತು ಪುರಸಭೆ ಮಟ್ಟದ ಪ್ರತಿನಿಧಿಗಳು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries