HEALTH TIPS

ಮದ್ಯ ಖರೀದಿಗೆ ಆಪ್ ಬೇಡ-ಸರತಿಯೂ ಬೇಡ: ಕಾಸರಗೋಡಲ್ಲಿ ಯಾರಿಗೂ ಮದ್ಯ ಖರೀದಿಸಬಹುದು ಸುಲಭವಾಗಿ!


            ಬದಿಯಡ್ಕ: ಮದ್ಯ ಮಾರಾಟದ ಮರೆಯಲ್ಲಿ ಸರ್ಕಾರಿ ಬಾರ್ ಗಳಲ್ಲೇ ಅನಧಿಕೃತ ಮಾರಾಟ, ಕೋವಿಡ್ ನಿಯಂತ್ರಣಗಳನ್ನು ಗಾಳಿಗೆ ತೂರಿ ಭಾರೀ ಸಂಖ್ಯೆಯಲ್ಲಿ ನಡೆಯುತ್ತಿದೆ ಎಂಬ ಆರೋಪಗಳು ಇದೀಗ ಕೇಳಿಬರುತ್ತಿದೆ.
          ಕೋವಿಡ್ ಹಿನ್ನೆಲೆಯಲ್ಲಿ ಕುಡುಕರು ನಿತ್ರಾಣರಾಗಬಾರದೆಂಬ ಹಿನ್ನೆಲೆಯಲ್ಲಿ ಬಾರ್ ಗಳನ್ನು ಆರಂಭಿಸಲಾಗಿದೆ. ಜೊತೆಗೆ ಬಾರ್ ಗಳ ಮೂಲಕ ಕುಡುಕರಿಗೆ ಕೋವಿಡ್ ವೈರಸ್ ಬಾಧಿಸದಿರಲಿ ಎಂಬ ಉದ್ದೇಶದೊಂದಿಗೆ ಮದ್ಯ ಮಾರಾಟ ಮಳಿಗೆಗಳಲ್ಲಿ ಶಿಸ್ತು ಪಾಲನೆಗಾಗಿ  ಬೆವ್ಕೊ ಅಪ್ಲಿಕೇಶನ್ ಜಾರಿಗೆ ತರಲಾಗಿತ್ತು. ಆದರೆ ಇದೀಗ ಈ ಅಪ್ಲಿಕೇಶನ್ ಇಲ್ಲದೆ, ಸರತಿ ಸಾಲಲ್ಲಿ ಕೋವಿಡ್ ಮಾನದಂಡಗಳನ್ನು ಒಂದಿಂಚೂ ಪಾಲಿಸದೆ ಈ ಹಿಂದಿನಂತೆ ಮದ್ಯ ಖರೀದಿಸುತ್ತಿರುವುದು ಕಂಡುಬಂದಿದೆ. ಬೆಪ್ಕೋ(ಬಿವರೇಜಸ್ ಕಾರ್ಪೋರೇಶನ್)ದ ವಿಶೇಷ ಆಪ್ಲಿಕೇಶನ್ ಮೂಲಕ ಆನ್ ಲೈನ್ ಬುಕ್ಕಿಂಗ್ ಮೂಲಕ ನಿಗದಿಪಡಿಸಿದ ಸಮಯದಲ್ಲಿ ಮದ್ಯ ಖರೀದಿಸಬೇಕೆಂಬುದು ಸರ್ಕಾರದ ನಿಯಮ. ಆದರೆ ಅಪ್ಲಿಕೇಶನ್ ನಲ್ಲಿ ರಿಜಿಸ್ಟರ್ ಮಾಡದೆಯೂ  ಬಾರ್‍ನಿಂದ ಮೂರು ಲೀಟರ್ ಆಲ್ಕೋಹಾಲ್ ಅನ್ನು ಖರೀದಿಸಲು ಕಾಸರಗೋಡು ಜಿಲ್ಲೆಯ ವಿವಿಧ ಬಾರ್ ಗಳಲ್ಲಿ ಅನುಕೂಲತೆ ಸೃಷ್ಟಿಸಲಾಗಿದೆ ಎಂದು ದೂರುಗಳು ಕೇಳಿಬಂದಿದೆ.  ಜೊತೆಗೆ ಬಾರ್ ಗಳಿಗೆ ಆಗಮಿಸುವವರ ಥರ್ಮಲ್ ಸ್ಕಾನಿಂಗ್ ಮಾಡಬೇಕೆಂಬ ನಿಯಮಗಳಿದ್ದರೂ ಅಂತಹದೊಂದು ವಿಚಾರ ಕೇಳಿಯೇ ಇಲ್ಲ ಎಂಬಂತೆ ಬಾರ್ ಮಾಲಕರ ವ್ಯವಸ್ಥೆ ದಿಗಿಲಿಗೆ ಕಾರಣವಾಗಿದೆ. ಭದ್ರತಾ ಸಿಬ್ಬಂದಿಯ ರಿಜಿಸ್ಟರ್‍ನಲ್ಲಿ ವ್ಯಕ್ತಿಗಳ ಹೆಸರನ್ನು ನೋಂದಾಯಿಸುವುದು ಕಡ್ಡಾಯವೆಂದಿದ್ದರೂ ಅದೂ ಜಾರಿಗೊಂಡಿಲ್ಲ. ಆಪ್ ಮೂಲಕ ಮದ್ಯಕ್ಕೆ ಬೇಡಿಕೆ ಸಲ್ಲಿಸದಿದ್ದರೂ ಬೇಕಾದ ಮದ್ಯ ಧಾರಾಳವಾಗಿ ಬಾರ್ ಮೂಲಕ ಲಭ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಜಾರಿಗೊಳಿಸಿದ ಕೋವಿಡ್ ಹಿನ್ನೆಲೆಯ ಆಪ್ ಯಾಕೆ ಎನ್ನುವುದು ಇದೀಗ ಬಗೆಹರಿಯಲಾರದ ಪ್ರಶ್ನೆಯಾಗಿದೆ.
        ವಿಶೇಷವೆಂದರೆ ಕಾಸರಗೋಡು ಜಿಲ್ಲೆಯ ಸೀತಾಂಗೋಳಿ, ಮುಳ್ಳೇರಿಯ, ನೀಲೇಶ್ವರ ಮೊದಲಾದೆಡೆಗಳ ಬಾರ್ ಗಳಿಗೆ ಆಗಮಿಸುವ ಗ್ರಾಹಕರಲ್ಲಿ ಶೇ.85 ಜನರಿಗೂ ಬೆಪ್ಕೋದ ಮದ್ಯ ಖರೀದಿ ಆಪ್ ಇಲ್ಲ. ಅನೇಕರ ಹೆಸರಿನಲ್ಲಿ ಸ್ಕ್ರೀನ್ ಶಾಟ್ ಕಾಯ್ದಿರಿಸುವ ಮೂಲಕ ಮದ್ಯವನ್ನು ಖರೀದಿಸುತ್ತಾರೆ ಎಂದು ಹಲವರು ದೂರಿದ್ದಾರೆ. ಹತ್ತು ಬಾರಿ ಬುಕ್ ಮಾಡಿದಾಗ ಬಾರ್ ಗಳ ಹೆಸರುಗಳಷ್ಟೇ ಆಪ್ಲಿಕೇಶನ್ ನಲ್ಲಿ ಕಂಡುಬರುತ್ತಿದೆ. ಬುಕ್ ಮಾಡಲು ಆಪ್ ತೆರೆದುಕೊಳ್ಳುತ್ತಿಲ್ಲ ಎಂಬ ದೂರುಗಳೂ ಕೇಳಿಬಂದಿದೆ.
       ಬೆಪ್ಕೋ ಮೂಲಕ ನೋಂದಣಿಗೈದ ಗ್ರಾಹಕರಿಗೆ ಬಾರ್ ಗಳ ಮೂಲಕ ಮದ್ಯ ಲಭ್ಯವಾಗುವುದು ಹೌದಾದರೂ ಅದು ಗ್ರಾಹಕರು ನೇರವಾಗಿ ಬಾರ್ ಗಳಿರುವಲ್ಲಿ ಬರಬೇಕೆಮದಿಲ್ಲ. ಬಾರ್ ಗಳಲ್ಲಿ ಜನನಿಬಿಡತೆ ಇಲ್ಲದಿರುವುದು ಇದನ್ನು ಸೂಚಿಸುತ್ತದೆ. ಇದರಿಂದ ಕೆಲವು ಮದ್ಯವರ್ತಿಗಳು ಹಲವಾರು ಜನರ ಮದ್ಯವನ್ನು ಒಮ್ಮಗೇ ಖರೀದಿಸಿ ಮಾರಾಟ ಮಾಡುತ್ತಿರುವರೇ ಎಂಬ ಗುಹಾನಿಯೂ ಕೇಳಿಬಂದಿದೆ. ರಾಷ್ಟ್ರಾದ್ಯಂತ ಕೊರೊನಾ ವ್ಯಾಪಕಗೊಳ್ಳುತ್ತಿರುವುದರಿಂದ ಕೇರಳಕ್ಕೆ ಆಗಮಿಸುವವರ ಸಂಖ್ಯೆಯೂ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ನಿತ್ಯ ಕುಡುಕರ ಸಂಖ್ಯೆಯಲ್ಲಿ ಇನ್ನಷ್ಟು ಏರಿಕೆಯಾಗಬಹುದು. ಅನ್ಯ ಪ್ರದೇಶಗಳಿಂದ ಊರಿಗೆ ಮರಳಿದವರು ಮದ್ಯ ಮಾರಾಟ ಕೇಂದ್ರಗಳಲ್ಲಿ ಯಾವುದೇ ತಪಾಸಣೆಗಳಿಲ್ಲದೆ ಸರತಿಯಲ್ಲಿ ನಿಂತರೆ ಉಳಿದವರ ಗತಿ ಏನೆಂಬುದನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.
ಚಿತ್ರ ಮಾಹಿತಿ:1)ಕಾಸರಗೋಡು ಜಿಲ್ಲೆಯೊಳಗಿನ ಸರ್ಕಾರಿ ಮದ್ಯ ಮಾರಾಟ ಕೇಂದ್ರವೊಂದರಲ್ಲಿ ಕೋವಿಡ್ ನಿಯಂತ್ರಣಗಳಿಲ್ಲದ ಮದ್ಯ ಮಾರಾಟ,2)ಯಾರದ್ದೋ ಹೆಸರಲ್ಲಿ ಮದ್ಯಕ್ಕಾಗಿ ಬುಕ್ ಮಾಡಿರುವ ರಶೀದಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries