ಕಾಸರಗೋಡು: ಆನ್ ಲೈನ್ ಶಿಕ್ಷಣಕ್ಕೆ ಟಿ.ವಿ. ಇಲ್ಲದ ಎಲ್ಲ ವಿದ್ಯಾರ್ಥಿಗಳಿಗೂ ಈ ಕಲಿಕಾ ಸೌಲಭ್ಯ ಒದಗಿಸಲಾಗುವುದು ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ಭರವನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿನ್ನೆ ನಡೆದ ಆನ್ ಲೈನ್ ಶಿಕ್ಷಣ ಚಟುವಟಿಕೆಯ ಜಿಲ್ಲಾ ಮಟ್ಟದ ಅವಲೋಕನ ಸಭೆಯಲ್ಲಿ ಅವರು ಮಾತನಾಡಿದರು.
ಶಿಕ್ಷಣ ಇಲಾಖೆ ವತಿಯಿಂದ ಪ್ರತಿ ಗ್ರಾಮಪಂಚಾಯತ್ ನಲ್ಲೂ ವಾರ್ಡ್ ಮಟ್ಟದಲ್ಲಿ ಆನ್ ಲೈನ್ ಶಿಕ್ಷಣಕ್ಕೆ ವ್ಯವಸ್ಥೆಯಿಲ್ಲದ ಮಕ್ಕಳ ಗಣನತಿ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ 10ಕ್ಕಿಂತ ಅಧಿಕ ಮಕ್ಕಳಿರುವ ವಾರ್ಡ್ ಗಳ ಸಾರ್ವಜನಿಕ ಕೇದ್ರಗಳಲ್ಲಿ ಶಾಸಕರ ಸಹಕಾರದೊಂದಿಗೆ ಟಿ.ವಿ. ಸೆಟ್ ಖರೀದಿಸಿ ಕಲಿಕೆಗೆ ವ್ಯವಸ್ಥೆ ಮಾಡಲಾಗುವುದು. ಇಂದು(ಜೂ.20) ಸಂಜೆಯೊಳಗೆ ಈ ಪಟ್ಟಿ ಲಭಿಸಬೇಕಿದ್ದು, ಇದರ ಖಚಿತತೆ ನಡೆಸಲಾಗುವುದು ಎಂದರು. ವಿವಿಧ ವಿಚಾರಗಳಲ್ಲಿ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಶಾಸಕ ಕೆ.ಕುಂಞÂ ರಾಮನ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಡಿ.ಡಿ.ಇ. ಕೆ.ವಿ.ಪುಷ್ಪಾ, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಸಿಬ್ಬಂದಿ ಉಪಸ್ಥಿತರಿದ್ದರು.


