ಕಾಸರಗೋಡು: ಹೊಸದುರ್ಗ ತಾಲೂಕು ಮಟ್ಟದ ದೂರು ಪರಿಹಾರ ಅದಾಲತ್ ಆನ್ ಲೈನ್ ರೂಪದಲ್ಲಿ ಶುಕ್ರವಾರ ಜರುಗಿತು. ಕಂದಾಯ ಸಚಿವ ಇ.ಚಂದ್ರಶೇಖರನ್ ಅತಿಥಿಯಾಗಿ ಅದಾಲತ್ ನಲ್ಲಿ ಭಾಗವಹಿಸಿದರು. ದೂರುದಾತರಿಗೆ ಅದಾಲತ್ನಲ್ಲಿ ಕಂದಾಯ ಸಚಿವ ಭಾಗವಹಿಸಿದುದು ಹೊಸ ಅನುಭವ ನೀಡಿತು. ನೆರೆಹಾವಳಿಯಿಂದ ನಡೆದ ನಷ್ಟದ ಪರಿಹಾರ ಲಭಿಸಿಲ್ಲ ಎಂದು ಮಹಿಳೆಯೊಬ್ಬರು ನೀಡಿದ ದೂರಿನ ಬಗ್ಗೆ ಮಾತನಾಡಿದ ಸಚಿವ ಈ ಬಗ್ಗೆ ತುರ್ತು ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು. ಹೊಸದುರ್ಗ ತಾಲೂಕಿನಲ್ಲಿ ಈ ಪ್ರಕರಣಗಳಿಗೆ ಸಂಬಂಧಿಸಿ 33 ಮಂದಿಗೆ ಆಋಥಿಕ ಸಹಾಯ ನಿಡಿಕೆ ಬಾಕಿಯಿದೆ. ತಾಂತ್ರಿಕ ಸಮಸ್ಯೆಗಳಿಂದ ಈ ವಿಳಂಬವಾಗಿದ್ದು, ತಕ್ಷಣ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಅದಾಲತ್ ನಲ್ಲಿ ಒಟ್ಟು 93 ದೂರುಗಳನ್ನು ಪರಿಶೀಲಿಸಲಾಯಿತು. 87 ದೂರುಗಳಿಗೆ ಇಲಾಖಾ ಮಟ್ಟದಲ್ಲಿ ತೀರ್ಪು ಒದಗಿಸಲಾಗಿದೆ. 6 ದೂರುಗಳಿಗೆ ಜಿಲ್ಲಾಧಿಕಾರಿ ನೇರ ಹಸ್ತಕ್ಷೇಪ ನಡೆಸಿ ಪರಿಹಾರ ಒದಗಿಸಿದ್ದಾರೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ನಡೆಸುತ್ತಿರುವ ತಾಲೂಕು ಮಟ್ಟದ ಆನ್ ಲೈನ್ ಅದಾಲತ್ ನಲ್ಲಿ ಮೂರನೇ ಅದಾಲತ್ ಇದಾಗಿತ್ತು.
ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಸಹಾಯಕ ಜಿಲ್ಲಧಿಕಾರಿ ಕೆ.ರವಿಕುಮಾರ್, ಹೊಸದುರ್ಗ ತಹಸೀಲ್ದಾರ್ ಎನ್.ಮಣಿರಾಜ್, ಎಲ್.ಐ.ಸಿ. ಅಧಿಕಾರಿ ಕೆ.ರಾಜನ್, ಅಕ್ಷಯ ಜಿಲ್ಲಾ ಕಾರ್ಯಕ್ರಮ ಪ್ರಬಂಧಕ ಎಂ.ಎಸ್.ಅಜೀಷ್ ಮೊದಲಾದವರು ಉಪಸ್ಥಿತರಿದ್ದರು.

