ಕಾಸರಗೋಡು: ವಾಚನಾ ಪಕ್ಷಾಚರಣೆ ಶುಕ್ರವಾರ ಜಿಲ್ಲೆಯಲ್ಲಿ ಆರಂಭಗೊಂಡಿದೆ. ಜಿಲ್ಲಾ ಗ್ರಂಥಾಲಯ ಮಂಡಳಿ ಆಶ್ರಯದಲ್ಲಿ ಕೋವಿಡ್ ಕಟ್ಟುನಿಟ್ಟುಗಳನ್ನು ಪಾಲಿಸಿಕೊಂಡು ಈ ಪಕ್ಷಾಚರಣೆ ನಡೆಯುತ್ತಿದ್ದು, ಜು.7ರಂದು ಸಮಾರೋಪಗೊಳ್ಳಲಿದೆ.
ಕೊಡಕ್ಕಾಡ್ ನಾರಾಯಣ ಸ್ಮಾರಕ ಗ್ರಂಥಾಲಯದಲ್ಲಿ ಜಿಲ್ಲಾ ಮಟ್ಟದ ವಾಚನಾ ಪಕ್ಷಾಚರಣೆಯ ಉದ್ಘಾಟನೆ ಶುಕ್ರವಾರ ನಡೆಯಿತು. ರಾಜ್ಯ ಗ್ರಂಥಾಲಯ ಮಂಡಳಿ ಕಾರ್ಯದರ್ಶಿ ಪಿ.ಅಪ್ಪುಕುಟ್ಟನ್ ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷ ಕೆ.ವಿ.ಕುಂಞÂ ರಾಮನ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಕೆ.ವಿ.ರಾಘವನ್ ಅವರು ಪಿ.ಎನ್.ಪಣಿಕ್ಕರ್ ಸಂಸ್ಮರಣಾ ಭಾಷಣ ಮಾಡಿದರು. ರಾಜ್ಯ ಗ್ರಂಥಾಲಯ ಮಂಡಳಿ ಸದಸ್ಯ ಪಿ.ವಿ.ಕೆ.ಪನೆಯಾಲ್ ಪಕ್ಷಾಚರಣೆಯ ಸಂದೇಶ ನೀಡಿದರು. "ವಾಚನ ಮತ್ತು ಸಮಾಜ" ಎಂಬ ವಿಷಯದಲ್ಲಿ ಸಾಹಿತಿ ಸಿ.ಎಂ.ವಿನಯಚಂದ್ರನ್ ಉಪನ್ಯಾಸ ಮಾಡಿದರು. ಸ್ಪರ್ಧಾ ವಿಜೇತರಿಗೆ ನೀಲೇಶ್ವರ ಬ್ಲೋಕ್ ಪಂಚಾಯತ್ ಉಪಾಧ್ಯಕ್ಷ ಕೆ.ನಾರಾಯಣನ್ ಬಹುಮಾನ ವಿತರಿಸಿದರು. ಅನೇಕ ಗಣ್ಯರು ಉಪಸ್ಥಿತರಿದ್ದರು. ಜು.7 ವರೆಗೆ ಜಿಲ್ಲೆಯ ವಿವಿಧ ಗ್ರಂಥಾಲಯಗಳ ಆಶ್ರಯದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ.


