ಕಾಸರಗೋಡು : ಕೇರಳದ ಅತ್ಯಂತ ಹಿಂದುಳಿದ ಜಿಲ್ಲೆಯಾಗಿರುವ ಕಾಸರಗೋಡಿನ ಮೊಗ್ರಾಲ್ ಪುತ್ತೂರು ಎನ್.ಎಚ್. ಸಮೀಪದಲ್ಲಿ ಏಮ್ಸ್ ಮೆಡಿಕಲ್ ಕಾಲೇಜನ್ನು ಮಂಜೂರುಗೊಳಿಸಬೇಕೆಂದು ಜಿಲ್ಲಾ ಬಿಜೆಪಿ ನೇತಾರ ರಾಮಪ್ಪ ಮಂಜೇಶ್ವರ ಆಗ್ರಹಿಸಿದರು.
ಕಾಸರಗೋಡು ಹೊಸ ಬಸ್ ನಿಲ್ದಾಣದ ಸಹಿ ಮರದಡಿಯಲ್ಲಿ ನಡೆದ ಸಮನ್ವಯ ಕ್ರಿಯಾ ಸಮಿತಿ ರೂಪೀಕರಣ ಸಭೆಯಲ್ಲಿ ಅವರು ಮಾತನಾಡಿದರು.
ಮೊಗ್ರಾಲ್‍ಪುತ್ತೂರು ಸ್ಟ್ರೆಟೆಜಿಕ್ ಪಾೈಂಟ್‍ನಲ್ಲಿ ಸ್ಥಾಪನೆಗೊಳ್ಳುವ ಏಮ್ಸ್ ಆಸ್ಪತ್ರೆ ತಿರುವನಂತಪುರದಿಂದ ಮುಂಬೈ ವರೆಗಿನ ಬಡ ರೋಗಿಗಳ ಚಿಕಿತ್ಸೆಗೆ ಕೇಂದ್ರ ಸರಕಾರದ ಬಲುದೊಡ್ಡ ಕೊಡುಗೆಯಾದೀತು ಎಂದು ದಾಮೋದರ ಮೊಗ್ರಾಲ್ ಪುತ್ತೂರು ಅವರು ಅಭಿಪ್ರಾಯಪಟ್ಟರು. ಎಂ.ಬಿ.ಬಿ.ಎಸ್, ಬಿಡಿಎಸ್, ನರ್ಸಿಂಗ್, ಬಿಫಾರ್ಮ್ ವ್ಯಾಸಂಗಗಳು ಇನ್ನು ಕಾಸರಗೋಡಿನಿಂದಲೂ ಸಾಧ್ಯ. ಉದ್ಯೋಗ ಹಾಗು ಜಿಲ್ಲೆಯ ವಿವಿಧ ಸ್ತರಗಳಲ್ಲಿನ ಪ್ರಗತಿಗೂ ಏಮ್ಸ್ ಬರುವಿಕೆಯಿಂದ ಸಾಧ್ಯವೆನಿಸುವುದು ಎಂದರು.
ಸಾಮಾಜಿಕ ಅರಿವು ಕಾಳಜಿಯುಳ್ಳ ಜಿಲ್ಲೆಯ ಮಂದಿ ಕ್ರಿಯಾ ಸಮಿತಿ ಚಟುವಟಿಕೆಗಳನ್ನು ಬೆಂಬಲಿಸಬೇಕೆಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ತೋಮಸ್ ಡಿಸೋಜ ಕರೆ ನೀಡಿದರು.
ನಿವೃತ್ತ ಉಪ ಜಿಲ್ಲಾಧಿಕಾರಿ ಎನ್.ಪ್ರಭಾಕರ, ನಿವೃತ್ತ ಕೆನರಾ ಬ್ಯಾಂಕ್ ಮೆನೇಜರ್ ಡಿ.ಲಕ್ಷ್ಮಣ, ನ್ಯಾಯವಾದಿ ಕೆ.ಎಂ.ಹಸೈನಾರ್, ನಿರ್ಮಲ ಮೊದಲಾದವರು ಮಾತನಾಡಿದರು.
ಕೇಂದ್ರ ಸಚಿವ ವಿ.ಮುರಳೀಧರನ್ ಮುಖಾಂತರ ಕ್ರಿಯಾ ಸಮಿತಿ ಏಮ್ಸ್ ಮಂಜೂರು ಮಾಡಬೇಕೆಂದು ಪ್ರಧಾನ ಮಂತ್ರಿಗೆ ಮನವಿಯನ್ನು ಸಲ್ಲಿಸುವುದು. ಜಿಲ್ಲೆಯ ಜನತೆಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ಜಯಕುಮಾರ್ ಡಿಎಎಸ್ ತಿರುವನಂತಪುರ, ಡಿ.ಡಿ.ಕಟ್ಟೆಮಾರ್, ಸದಾಶಿವ ಉಳ್ಳಾಲ, ಬಿ.ಶಂಕರಿ ಬೆಂಗಳೂರು, ಬಿ.ಆರ್.ಪಟೇಲ್, ವಿ.ದೇವ್ ಹೈದರಾಬಾದ್, ವಿ.ಕೆ.ಮುಂಬೈ, ನೀಲಕಾಂತ್ ಎಸ್, ಫರಿದಾ ಎಸ್, ದೀಪಾ ಜೇೀಮ್ಸ್, ರೂಪವಾಣಿ ಭಟ್, ವಸಂತ ಪಡೀಲ್ ಒಳಗೊಂಡ ಉಪದೇಶಕ ಸಮಿತಿ ಇರುವುದು. ಜುಲೈ 11 ರಂದು ಬೆಳಗ್ಗೆ 10.30 ಕ್ಕೆ ಕಾಸರಗೋಡು ಪ್ರಧಾನ ಅಂಚೆ ಕಚೇರಿಯ ವಠಾರದಲ್ಲಿ ಜರಗುವ ಮುಂದಿನ ಸಭೆಯಲ್ಲಿ ಕ್ರಿಯಾ ಸಮಿತಿ ಪದಾ„ಕಾರಿಗಳನ್ನು ಘೋಷಿಸಲಾಗುವುದು. ಮಹಿಳಾ, ವಿದ್ಯಾರ್ಥಿ ಸಮಿತಿಗಳನ್ನು ರಚಿಸಲಾಗುವುದು.

