HEALTH TIPS

ವರ್ಣಭೇದಕ್ಕೆ ಸತತ ಟೀಕೆ: ಬದಲಾಗಲಿದೆ ಫೇರ್ & ಲೌವ್ಲಿ ಹೆಸರು!

   
           ನವದೆಹಲಿ: ವರ್ಣಭೇದದ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಹಿಂದೂಸ್ಥಾನ್ ಯುನಿಲಿವರ್ ಸಂಸ್ಥೆ ಫೇರ್&ಲೌವ್ಲಿ ಕ್ರೀಮ್ ನ ಹೆಸರನ್ನು ಬದಲಾವಣೆ ಮಾಡಲು ನಿರ್ಧರಿಸಿದೆ.
         ಎಲ್ಲಾ ವರ್ಣದ ತ್ವಚೆಗೆ ಸರಿಹೊಂದುವ ಸೌಂದರ್ಯ ವರ್ಧಕವನ್ನಾಗಿ ಈ ಕ್ರೀಮ್ ನ್ನು ಪರಿಚಯಿಸಲು ಸಂಸ್ಥೆ ಚಿಂತನೆ ನಡೆಸಿದೆ.
ಅಮೆರಿಕಾದಲ್ಲಿ ಕಪ್ಪು ವರ್ಣಿಯರ ಮೇಲೆ ನಡೆದ ಜನಾಂಗೀಯ ದಾಳಿಯ ನಂತರ ಸಾಮಾಜಿಕ ಜಾಲತಾಣದಲ್ಲಿ ವರ್ಣಭೇದದ ವಿರುದ್ಧ ಆಕ್ರೋಶ ತೀವ್ರಗೊಂಡಿತ್ತು. ತ್ವಚೆಯವರ್ಣವನ್ನೇ ಮುಖ್ಯವಾಗಿರಿಸಿಕೊಂಡಿರುವ ಫೇರ್&ಲೌವ್ಲಿ ಹೆಸರಿನ ಕ್ರೀಮ್ ಬಗ್ಗೆಯೂ ಸಹಜವಾಗಿಯೇ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗತೊಡಗಿತ್ತು. ಈ ಬೆನ್ನಲ್ಲೇ ಸಂಸ್ಥೆ ವರ್ಣಭೇದವನ್ನು ಸೂಚಿಸುವ ಫೇರ್&ಲೌವ್ಲಿ ಎಂಬ ಹೆಸರನ್ನು ಕೈಬಿಟ್ಟು ಆ ಕ್ರೀಮ್ ಗೆ ಹೊಸ ಹೆಸರನ್ನು ಪರಿಚಯಿಸುವುದಾಗಿ ತಿಳಿಸಿದೆ.
        ಈ ಬಗ್ಗೆ ಮಾತನಾಡಿರುವ ಹಿಂದೂಸ್ಥಾನ್ ಯುನಿಲಿವರ್ ನ ಅಧ್ಯಕ್ಷ ಸಂಜೀವ್ ಮೆಹ್ತಾ, ಎಲ್ಲಾ ವರ್ಣಗಳ ತ್ವಚೆಗೆ ಸೂಕ್ತವಾಗುವ ಸೌಂದರ್ಯವರ್ಧಗಳಿಗೆ ಸಂಸ್ಥೆ ಬದ್ಧವಾಗಿದೆ. ಫೇರ್& ಲೌವ್ಲಿ ಹೆಸರು ಅಪ್ರಸ್ತುತವಾಗಿದೆ. ಸೌಂದರ್ಯವರ್ಧಕ ಎಲ್ಲಾ ವರ್ಣದ ತ್ವಚೆಗಳಿಗೂ ಇರುವಂತಹದ್ದು, ಹೀಗಾಗಿ ಹೆಸರು ಬದಲಾವಣೆ ಮಾಡುತ್ತಿದ್ದೇವೆ ಎಂದು ಸಂಜೀವ್ ಮೆಹ್ತಾ ಹೇಳಿದ್ದಾರೆ.
        2019 ರಲ್ಲಿ ಜಾಹಿತಿನಿಂದ ಕಪ್ಪು-ಬಿಳುಪಿನ ಮುಖಗಳನ್ನು ಕೈಬಿಟ್ಟಿದ್ದ ಸಂಸ್ಥೆ ವರ್ಣಭೇದದ ಸಂದೇಶ ನೀಡುವ ಜಾಹಿರಾತುಗಳನ್ನು ನಿಲ್ಲಿಸಿ ಬದಲಾವಣೆ ಮಾಡಿಕೊಂಡಿತ್ತು.
2,683 people are talking about this

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries