HEALTH TIPS

ಕರೊನಾದ ಮತ್ತೊಂದು ಕರಾಳ ಮುಖ ಬಯಲು: ಬಹುಮುಖ್ಯ ಅಂಗದ ಮೇಲೆ ದಾಳಿ ಮಾಡಲಿದೆ ವೈರಸ್​!

            ಲಂಡನ್​: ಮಹಾಮಾರಿ ಕರೊನಾ ವೈರಸ್​ ಕುರಿತು ಮತ್ತೊಂದು ಆಘಾತಕಾರಿ ಅಧ್ಯಯನವೊಂದು ಬಹಿರಂಗವಾಗಿದ್ದು, ಗಂಭೀರತರವಾದ ಕರೊನಾ ವೈರಸ್ ಬಹುಮುಖ್ಯ ಅಂಗ​ ಮೆದುಳಿಗೂ ಹಾನಿಯನ್ನುಂಟು ಮಾಡಲಿದೆ ಎಂದು ತಿಳಿದುಬಂದಿದೆ.
        ಕರೊನಾದಿಂದ ಆಸ್ಪತ್ರೆಗೆ ದಾಖಲಾದ ರೋಗಿಯನ್ನು ಅಧ್ಯಯನ ನಡೆಸಿದಾಗ ಮೆದುಳಿಗೆ ಹಾನಿಯಾಗಿರುವುದು ಪ್ರಾಥಮಿಕ ಅಧ್ಯಯನದಿಂದ ತಿಳಿದುಬಂದಿದೆ. ಮೆದುಳು ಹಾನಿಯಿಂದ ಪಾರ್ಶ್ವವಾಯು, ಉರಿಯೂತ, ಮನೋವಿಕಾರ ಮತ್ತು ಬುದ್ಧಿಮಾಂದ್ಯತೆಯಂತಹ ತೊಂದರೆಗಳು ಗಂಭೀರಾವಾದ ಪ್ರಕರಣಗಳಲ್ಲಿ ಎದುರಾಗಲಿದೆ ಎಂದು ಅಧ್ಯಯನ ತಿಳಿಸಿದೆ.
     ಕೋವಿಡ್​-19 ನರವೈಜ್ಞಾನಿಕ ತೊಡಕುಗಳ ಬಗ್ಗೆ ವಿವರವಾಗಿ ಅಧ್ಯಯನ ಮಾಡಲಾಗಿದ್ದು, ಕರೊನಾ ಕಾರ್ಯವಿಧಾನ ಪತ್ತೆಹಚ್ಚಲು ಮತ್ತು ಸೂಕ್ತ ಚಿಕಿತ್ಸೆಗಳ ಸಹಾಯಕ್ಕೆ ಇನ್ನು ಹೆಚ್ಚಿನ ಅಧ್ಯಯನಗಳ ಅವಶ್ಯಕತೆ ಇದೆ ಎನ್ನುತ್ತಾರೆ ತಜ್ಞರು.
         ಮೆದುಳು ಸಂಬಂಧಿತ ಕೋವಿಡ್​-19 ಸಂಕೀರ್ಣವು ತುಂಬಾ ಮಹತ್ವದ್ದಾಗಿದ್ದು, ಈ ಬಗ್ಗೆ ನಿರಂತರ ಮಾಹಿತಿ ಕಲೆಹಾಕಿ ವೈರಸ್​ ಬಗ್ಗೆ ಸಂಪೂರ್ಣ ಅಧ್ಯಯನ ಮಾಡುವುದು ತುಂಬಾ ಮುಖ್ಯವೆಂದು ಲಂಡನ್​ನ ಯೂನಿವರ್ಸಿಟಿ ಕಾಲೇಜಿನ ಪ್ರಾಧ್ಯಾಪಕರಾದ ಸಾರಾ ಪೆಟ್ ಹೇಳಿದ್ದಾರೆ.
        ಪ್ರಾಥಮಿಕ ಅಧ್ಯಯನವು ಲ್ಯಾನ್ಸೆಟ್ ಸೈಕಿಯಾಟ್ರಿ ಜರ್ನಲ್​ನಲ್ಲಿ ಗುರುವಾರ ಪ್ರಕಟವಾಗಿದೆ. ಯುನೈಟೆಡ್​ ಕಿಂಗ್​ಡಮ್​ನ ಸುಮಾರು 125 ಕರೊನಾ ಪ್ರಕರಣಗಳನ್ನು ವಿವರವಾಗಿ ಅಧ್ಯಯನ ಮಾಡಲಾಗಿದೆ. ಏಪ್ರಿಲ್​​ 2 ಮತ್ತು ಏಪ್ರಿಲ್​ 26ರ ಡಾಟಾವನ್ನು ಕಲೆಹಾಕಲಾಗಿದೆ. ಈ ಸಮಯದಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿದ್ದರಿಂದ ಡಾಟಾ ಸಂಗ್ರಹಿಸಲಾಗಿದೆ.
           ಒಟ್ಟು 125 ರೋಗಿಗಳಲ್ಲಿ 77 ಮಂದಿಯಲ್ಲಿ ಪಾರ್ಶ್ವವಾಯು ಕಾಣಿಸಿಕೊಂಡಿದೆ. 60 ವರ್ಷ ಮೇಲ್ಪಟ್ಟ ರೋಗಿಗಳಲ್ಲಿ ಮೆದುಳಿನ ರಕ್ತ ಹೆಪ್ಪುಗಟ್ಟುವಿಕೆಗೆ ಕರೊನಾ ಕಾರಣವಾಗಿದೆ. 35 ಮಂದಿಯಲ್ಲಿ ವರ್ತನೆಯಲ್ಲಿ ಬದಲಾವಣೆ ಅಂದರೆ ಮನೋವಿಕಾರಕ್ಕೆ ಕಾರಣವಾಗಿದೆ. ಹೀಗಾಗಿ ಇದಕ್ಕೆ ಸೂಕ್ತ ಚಿಕಿತ್ಸೆ ನೀಡಲು ಕರೊನಾದ ಜೈವಿಕ ಕಾರ್ಯವಿಧಾನಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಸಂಭವನೀಯ ಚಿಕಿತ್ಸೆ ಪತ್ತೆಗಾಗಿ ಮತ್ತಷ್ಟು ಆಳವಾದ ಅಧ್ಯಯನದ ಅವಶ್ಯಕತೆ ಇದೆ ಎನ್ನುತ್ತಾರೆ ತಜ್ಞರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries