HEALTH TIPS

ಚೀನಾ ಅಪಾಯ ಎದುರಿಸಲು ಜಾಗತಿಕವಾಗಿ ಸೇನೆ ರವಾನೆಗೆ ಚಿಂತನೆ: ಅಮೆರಿಕ ಘೋಷಣೆ!

         ವಾಷಿಂಗ್ಟನ್: ಚೀನಾದ ಮಿಲಿಟರಿ ಅಪಾಯ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದನ್ನು ಎದುರಿಸಲು ಜಾಗತಿಕವಾಗಿ ತನ್ನ ಸೇನೆಯನ್ನು ನಿಯೋಜನೆಗೊಳಿಸುವುದಾಗಿ ಅಮೆರಿಕ ಘೋಷಿಸಿದೆ.

    ಈ ಕುರಿತು ಮಾತನಾಡಿರುವ ಅಮೆರಿಕ ಕಾರ್ಯದರ್ಶಿ ಮೈಕ್ ಪಾಂಪಿಯೋ, ಭಾರತ ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‌ಎ)ಯ ಅಪಾಯವನ್ನು ಎದುರಿಸಲು ಅಮೆರಿಕ ನೆರವಾಗಲಿದೆ ಎಂದು ಹೇಳಿದ್ದಾರೆ.

     ಬ್ರಸಲ್ಸ್ ಫೋರಂ ಆಯೋಜಿಸಿದ್ದ ವಿಡಿಯೋ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪಾಂಪಿಯೋ, ಜರ್ಮನಿಯಿಂದ ಅಮೆರಿಕ ಸೇನೆಯನ್ನು ಕಡಿತಗೊಳಿಸಲು ಕಾರಣ ತಿಳಿಸಿದರು.
    

ಭಾರತ ಹಾಗೂ ದಕ್ಷಿಣ ಚೀನಾದ ಸಮುದ್ರದಲ್ಲಿ ಎದುರಾಗಿರುವ ಚೀನಾ ಸೇನೆಯ ಆಕ್ರಮಣಕಾರಿ ಯೋಜನೆಗಳನ್ನು ಎದುರಿಸಲು ಅಮೆರಿಕ ಸೇನೆ ನಿಯೋಜನೆಗೊಳಿಸಲಿದೆ ಎಂದು ಪಾಂಪಿಯೋ ಹೇಳಿದರು.
     ಚೀನಾ ಸೇನೆಯಿಂದ ಭಾರತ, ವಿಯೆಟ್ನಾಂ, ಮಲೇಷ್ಯಾ ಹಾಗೂ ಇಂಡೋನೇಷ್ಯಾ ರಾಷ್ಟ್ರಗಳಿಗೆ ಅಪಾಯ ಎದುರಾಗಿದ್ದು, ಈ ರಾಷ್ಟ್ರಗಳ ನೆರವಿಗೆ ಧಾವಿಸಲು ಅಮೆರಿಕ ಸದಾ ಸಿದ್ಧ ಎಂದು ಪಾಂಪಿಯೋ ಮತ್ತೊಮ್ಮೆ ಸ್ಪಷ್ಟಪಡಿಸಿದರು.

ನ್ಯಾಟೋ ಹಾಗೂ ಹಲವು ಸಾಂಸ್ಥಿಕ ರಚನೆಯ ಮೂಲಕ ವಿಶ್ವ ಮಾಡಿರುವ ಗಮನಾರ್ಹ ಸಾಧನೆಗಳನ್ನು ಹಾಳು ಮಾಡುವುದೇ ಚೀನಾದ ಉದ್ದೇಶ ಎಂದಿರುವ ಪಾಂಪಿಯೋ, ಈ ದುಷ್ಟ ನೀತಿಯನ್ನು ಸೋಲಿಸಲು ನಾವು ಸಜ್ಜಾಗಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದರು.ಒಟ್ಟಿನಲ್ಲಿ ಭಾರತ-ಚೀನಾ ಗಡಿ ಘರ್ಷಣೆಯಲ್ಲಿ ಭಾರತಕ್ಕೆ ಸೇನಾ ನೆರವಿಗೂ ಸಿದ್ಧ ಎಂಬ ಪರೋಕ್ಷ ಸಂದೇಶವನ್ನು ಅಮೆರಿಕ ರವಾನಿಸಿದ್ದು, ಮೈಕ್ ಪಾಂಪಿಯೋ ಅವರ ಈ ಹೇಳಿಕೆ ಚೀನಾಗೆ ತಲೆನೋವು ತಂದಿರುವುದು ಸುಳ್ಳಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries