ಕಾಸರಗೋಡು: ಕಂಟೈ ನ್ಮೆ ಂಟ್ ಝೋನ್ ಗಳ ಕಟ್ಟುಇಟ್ಟುಗಳಲ್ಲಿ ಯಾವುದೇ ರೀತಿಯ ಸಡಿಲಿಕೆ ಇಲ್ಲ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರತಿರೋಧ ಚಟುವಟಿಕೆಗಳನ್ನು ಚುರುಕುಗೊಳಿಸಲಾಗುವುದು. ಕಟ್ಟು ನಿಟ್ಟುಗಳ ಸಡಿಲಿಕೆಯನ್ನು ಯಾವ ರೀತಿಯಲ್ಲೂ ದುರುಪಯೋಗ ಪಡಿಸಕೂಡದು. ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ನುಡಿದರು.
ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅವಲೋಕನ ಸಂಬಂಧ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೋರ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಂಟೈ ನ್ಮೆಂಟ್ ಝೋನ್ ಗಳ ವಾರ್ಡ್ ವ್ಯಾಪ್ತಿ ನಿಗದಿಪಡಿಸುವಲ್ಲಿ ಲೋಪ ಸಂಭವಿಸಿರುವುದು ಗಮನಕ್ಕೆ ಬಂದಿದ್ದು, ಕೋವಿಡ್ ಪಾಸಿಟಿವ್ ಕೇಸ್ ವರದಿಯಾಗಿರುವ ಪ್ರದೇಶಗಳ 100 ಮೀಟರ್ ಸುತ್ತಳತೆಯ ಪ್ರದೇಶಗಳನ್ನು ಕಂಟೈ ನ್ಮೆಂಟ್ ಝೋನ್ ಆಗಿ ಘೋಷಿಸಲಾಗುವುದು. ಜಿಲ್ಲೆಯ 14 ಗ್ರಾಮಪಂಚಾಯತ್ ಗಳಲ್ಲೂ, 2 ನಗರಸಭೆಗಳಲ್ಲೂ ಒಟ್ಟು 38 ಕಂಟೈ ನ್ಮೆಂಟ್ ಝೋನ್ ಗಳಿವೆ. ಈ ಹಿಂದೆ ಕೋರ್ ಸಮಿತಿ ಸಭೆಗಳಲ್ಲಿ ನಿಗದಿಪಡಿಸಿದ್ದ ಪ್ರಕಾರದ ಪ್ರತಿರೋಧ ಚಟುವಟಿಕೆಗಳು ಮುಂದುವರಿಯಬೇಕು ಎಂದವರು ತಿಳಿಸಿದರು.
ಕಂಟೈ ನ್ಮೆಂಟ್ ಝೋನ್ ಗಳಲ್ಲಿ ಅಗತ್ಯದ ಸಾಮಾಗ್ರಿ ಮಾರಾಟ ಅಂಗಡಿಗಳು ದಿನ ಬಿಟ್ಟು ದಿನ ಬೆಳಗ್ಗೆ 11ರಿಂದ ಸಂಜೆ 5 ಗಂಟೆ ವರೆಗೆ ಮಾತ್ರ ತೆರೆದು ಕಾರ್ಯಾಚರಿಸಬೇಕು. ಇತರ ಅಂಗಡಿಗಳು ತೆರೆಯಕೂಡದು. ಪೆÇಲೀಸರು ಅಗತ್ಯದ ಘೋಷಣೆ(ಅನೌ ನ್ಸ್ ಮೆಂಟ್) ನಡೆಸಬೇಕು. ಜನ ಅನಗತ್ಯವಾಗಿ ಮನೆಗಳಿಂದ ಹೊರಗಿಳಿಯುವುದು, ಗುಂಪುಗೂಡುವುದು ಸಲ್ಲದು. ಇನ್ಸ್ ಸ್ಟಿಟ್ಯೂಷನಲ್ ಕ್ವಾರೆಂಟೈ ನ್ ಪೂರ್ಣರೂಪದಲ್ಲಿ ಕೈಬಿಡಲಾಗಿದೆ. ರೂಂ ಕ್ವಾರೆಂಟೈನ್ ಆದೇಶಹೊಂದಿರುವವರಿಗೆ ತಮ್ಮ ಮನೆಯಲ್ಲಿ ಸೌಲಭ್ಯ ಇಲ್ಲದೇ ಇದ್ದಲ್ಲಿ ಮಾತ್ರ ಸರಕಾರಿ ಮಟ್ಟದ ಕ್ವಾರೆಂಟೈನ್ ಮಂಜೂರು ಮಾಡಲಾಗುವುದು. ಜನಜಾಗೃತಿ ಸಿತಿಗಳ ಚಟುವಟಿಕೆ ಚುರುಕುಗೊಳಿಸಲಾಗುವುದು. ರಾತ್ರಿ ಕಾಲದ ನಿಷೇಧಾಜ್ಞೆ ಇನ್ನಷ್ಟು ಬಿಗಿಗೊಳಿಸಲಾಗುವುದು. ಸಾರ್ವಜನಿಕ ಪ್ರದೇಶಗಳಿಗೆ 65 ವರ್ಷಕ್ಕಿಂತ ಅಧಿಕ ವಯೋಮಾನದವರು, 10 ವರ್ಷಕ್ಕಿಂತ ಕೆಳಗಿನ ಮಕ್ಕಳು ತೆರಳಕೂಡದು. ಜಿಮ್ನೇಶಿಯಂ, ಒಳಂಗಣ ಕ್ರೀಡಾಂಗಣ ಇತ್ಯಾದಿ ತೆರೆಯಕೂಡದು ಇತ್ಯಾದಿ ವಿಚಾರಗಳನ್ನು ವಿವರಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್, ಇತರ ಜಿಲ್ಲಾ ಮಟ್ಟದ ಸಿಬ್ಬಂದಿ ಉಪಸ್ಥಿತರಿದ್ದರು.


