ಕಾಸರಗೋಡು: ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರ ಅಭಿವೃದ್ಧಿ ನಿಧಿಯಿಂದ ಆರೋಗ್ಯ ಇಲಾಖೆಗೆ ಕೋವಿಡ್ ಪ್ರತಿರೋಧ ಚಟುವಟಿಕೆಗಳಿಗಾಗಿ ಮಂಜೂರು ಮಾಡಿದ್ದ 54, 25000 ರೂ. ನಲ್ಲಿ 23 ಲಕ್ಷ ರೂ. ಮೂಲಕ ಖರೀದಿ ಮಾಡಿದ ಪಿ.ಪಿ.ಇ.ಕಿಟ್, ಮಾಸ್ಕ್ ಗಳು ಇತ್ಯಾದಿಗಳನ್ನು ಸಂಸದ ಅವರು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ಅವರಿಗೆ ಹಸ್ತಾಂತರಿಸಲಾಯಿತು.
ಉಳಿದ ನಿಧಿಯನ್ನು ಜಿಲ್ಲಾ ಆಸ್ಪತ್ರೆಗಾಗಿ ಪೆÇೀರ್ಟಿ ಬಲ್ ಅಲ್ಟ್ರಾ ಸೌಂಡ್ ಮೆಷಿನ್ ವಿದ್ ಕಲರ್ ಡಾಪ್ಲರ್, ಡೀ ಫೆಬ್ರಿಲೇಟರ್ ವಿದ್ ಕಾರ್ಡಿಯಾಕ್ ಮಾನಿಟರ್, ವೈನ್ ಡಿಟಕ್ಟಿಂಗ್ ಟ್ರಾನ್ಸ್ ಇಲ್ಯುನಿ ನೇಟರ್ ಇತ್ಯಾದಿ ಖರೀದಿಸಲಾಗುವುದು. ಜಿಲ್ಲೆಯ ಆಸ್ಪತ್ರೆಗಳ ಅಭಿವೃದ್ಧಿಗೆ ಮುಮದೆಯೂ ನಿಧಿ ಮಂಜೂರು ಮಾಡಲಾಗುವುದು ಎಂದು ಸಂಸದರು ತಿಳಿಸಿದರು.


