ಉಪ್ಪಳ: ಪೆಟ್ರೋಲ್ ಡೀಸೆಲ್ ಬೆಲೆಯೇರಿಕೆ ವಿರುದ್ದ ಸಿ ಐ ಟಿ ಯು ಮಂಜೇಶ್ವರ ಏರಿಯಾ ಸಮಿತಿ ನೇತೃತ್ವದಲ್ಲಿ ಉಪ್ಪಳ ಅಂಚೆ ಕಚೇರಿ ಮುಂದೆ ಬುಧವಾರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.
ಸಿಐ ಟಿ ಯು ಜಿಲ್ಲಾ ಉಪಾಧ್ಯಕ್ಷೆ ಕಾಂ ಬೇಬಿ ಶೆಟ್ಟಿ ಪ್ರತಿಭಟನೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕೋವಿಡ್ ಸಮಯದಲ್ಲಿ ಸಮಯದಲ್ಲಿ ಕೇಂದ್ರ ಸರ್ಕಾರ ಜನಸಾಮಾನ್ಯರನ್ನು ಕೊಳ್ಳೆ ಹೊಡೆಯುತ್ತಿದೆ. ನಿತ್ಯೋಪಯೋಗಿ ವಸ್ತುಗಳ ಬೆಲೆಯೇರಿಕೆಯಿಂದ ಜನಸಾಮಾನ್ಯರು ತೊಂದರೆಗೊಳಗಾಗುತ್ತಿದ್ದಾರೆ ಎಂದು ಹೇಳಿದ ಅವರು ಕೇಂದ್ರ ಸರ್ಕಾರದ ಜನವಿರೋಧಿ ನೀತಿಯಿಂದ ಹಿಂದೆ ಸರಿಯಬೇಕು ಎಂದು ವಿನಂತಿಸಿಕೊಂಡರು.
ಮುಖಂಡರಾದ ಪ್ರಶಾಂತ್ ಕನಿಲ ಅಧ್ಯಕ್ಷತೆ ವಹಿಸಿದ್ದರು. ರವೀಂದ್ರ ಶೆಟ್ಟಿ, ನೌಷಾದ್ ಉಪ್ಪಳ, ಕಮಲಾಕ್ಷ ಮೊದಲಾದವರು ಮಾತನಾಡಿದರು.


