ಪೆರ್ಲ: ಸ್ವರ್ಗದ ಎಂ.ಕೆ ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯದ ವತಿಯಿಂದ ಗಿಡಗಳ ವಿತರಣೆ ಮತ್ತು ನೆಡುವುದರ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು.
ಎಣ್ಮಕಜೆ ಗ್ರಾಮ ಪಂಚಾಯತಿ ಕ್ಷೇಮ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಚಂದ್ರಾವತಿ ಎಂ ಅವರು ಸ್ವರ್ಗ ಪರಿಸರದಲ್ಲಿ ಸಸಿಗಳನ್ನು ನೆಡುವುದರ ಮೂಲಕ ಉದ್ಘಾಟಿಸಿದರು. ಗ್ರಂಥಾಲಯದ ಅಧ್ಯಕ್ಷ ರವಿರಾಜ್ ಯಸ್ ಅಧ್ಯಕ್ಷತೆ ವಹಿಸಿದ್ದರು. ಗ್ರಂಥಾಲಯದ ಸಲಹೆಗಾರರಾದ ಪಿ.ಯಸ್ ಪಂಬೆತ್ತಡ್ಕ, ಈಶ್ವರ ಪ್ರಸಾದ್ ಪಂಬೆತ್ತಡ್ಕ, ವಾಣೀನಗರ ವನ ಸಂರಕ್ಷಣಾ ಸಮಿತಿ ಅಧ್ಯಕ್ಷ ಯಸ್.ಬಿ ನರಸಿಂಹ ಪೂಜಾರಿ, ಸಿ.ಡಿ.ಯಸ್ ಉಪಾಧ್ಯಕ್ಷೆ ಶಶಿಕಲಾ ಕೆ, ಕೌನ್ಸಿಲರ್ ಕೀರ್ತಿ ಬಿ.ಕೆ, ಗ್ರಂಥಪಾಲಕಿ ಅನಿತಾ ಮೊದಲಾದವರು ಉಪಸ್ಥಿತರಿದ್ದರು. ಗ್ರಂಥಾಲಯದಲ್ಲಿ ನಡೆದ ಗಿಡ ವಿತರಣೆಯನ್ನು ಸಲಹೆಗಾರರಾದ ಈಶ್ವರ ಪ್ರಸಾದ್ ಪಂಬೆತ್ತಡ್ಕ ನೆರವೆರಿಸಿದರು.
ಗ್ರಂಥಾಲಯದ ನೇತೃತ್ವದಲ್ಲಿ ಕೇರಳ ಗ್ರಾಮೀಣ ಬ್ಯಾಂಕ್ ವಾಣೀನಗರ ಶಾಖಾ ಪ್ರಬಂಧಕ ಮತ್ತು ಸಿಬ್ಬಂದಿಗಳಿಗೆ, ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಕಾರ್ಯದರ್ಶಿ ಮತ್ತು ಸಿಬ್ಬಂದಿಗಳಿಗೆ, ಆರ್‍ಟಿಓ ತಪಾಸಣಾ ಕೇಂದ್ರದಲ್ಲಿ ಕಾರ್ಯನಿರತ ಪೆÇೀಲಿಸ್ ಅಧಿಕಾರಿಗಳಿಗೆ, ಸ್ವರ್ಗ ಶಾಲೆ, ಸ್ವರ್ಗ ಪೇಟೆಯ ಆಟೋ ಚಾಲಕರು ಹಾಗೂ ಪರಿಸರ ಪ್ರೇಮಿಗಳಿಗೆ ಗಿಡಗಳನ್ನು ವಿತರಿಸಲಾಯಿತು. ಗ್ರಂಥಾಲಯ ಕಾರ್ಯದರ್ಶಿ, ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಸದಸ್ಯ ರಾಮಚಂದ್ರ ಎಂ ಸ್ವಾಗತಿಸಿ,ಕಾರ್ಯಕಾರಿ ಸಮಿತಿ ಸದಸ್ಯ ರವಿ ವಾಣೀನಗರ ವಂದಿಸಿದರು.



