ಕೋಝಿಕ್ಕೋಡ್: ಕಾರುಣ್ಯಾ ಬೆನೆವೊಲೆಂಟ್ ಫಂಡ್ (ಕೆಬಿಎಫ್) ಚಿಕಿತ್ಸಾ ಯೋಜನೆಯನ್ನು ಸರ್ಕಾರ ಮೂರು ತಿಂಗಳವರೆಗೆ ವಿಸ್ತರಿಸುವ ಮಹತ್ತರ ತೀರ್ಮಾನ ಕೈಗೊಂಡಿದೆ. ಇದರೊಂದಿಗೆ 30,000 ಕ್ಕೂ ಹೆಚ್ಚು ರೋಗಿಗಳಿಗೆ ಪರಿಹಾರ ಲಭಿಸಲಿದೆ.
ಕಳೆದ ವರ್ಷ ಜುಲೈ 3 ರ ಮೊದಲು ಚಿಕಿತಾ ನೆರವಿಗೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಪ್ರಸ್ತುತ ಕಾರುಣ್ಯ ಯೋಜನಾ ನೆರವು ಲಭಿಸಲಿದೆ. ಸೆಪ್ಟೆಂಬರ್ 30 ರವರೆಗೂ ವಿನಾಯ್ತಿ ಲಭ್ಯವಾಗುವುದು. ಅದರೊಳಗೆ ಆರೋಗ್ಯ ಇಲಾಖೆಯ ಅಡಿಯಲ್ಲಿ ಹೊಸದಾಗಿ ಪ್ರಾರಂಭಿಸಲಾದ, ಅರ್ಜಿಗಳನ್ನೂ ಇದೇ ಯೋಜನೆಗೆ ವಿಲೀನಗೊಳಿಸಲಾಗುತ್ತದೆ.
ಕಳೆದ 15 ತಿಂಗಳುಗಳಿಂದ ಮುಂದುವರಿದ ವ್ಯಾಪಕ ಗೊಂದಲಗಳು ಹೊಸ ಆದೇಶದೊಂದಿಗೆ ಪರಿಹಾರಗೊಂಡಿದೆ. ಕಾರುಣ್ಯ ಆರೋಗ್ಯ ರಕ್ಷಣಾ ಯೋಜನೆಯನ್ನು ಮುಂದಿನ ವರ್ಷ ಮಾರ್ಚ್ ವರೆಗೆ ವಿಸ್ತರಿಸುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿತ್ತು, ಆದರೆ ತೆರಿಗೆ ಇಲಾಖೆ ಅದನ್ನು ವಿಸ್ತರಿಸಲಿಲ್ಲ.
ಆದೇಶದ ಮುಖ್ಯ ನಿರ್ದೇಶನಗಳು:
ಕಾರುಣ್ಯ ನೆರವಿನ ನಿಧಿ ಸೆಪ್ಟೆಂಬರ್ 30 ರವರೆಗೆ ಮುಂದುವರಿಯುತ್ತದೆ.
ಮುಂದಿನ 3 ತಿಂಗಳಲ್ಲಿ ಕೆಬಿಎಫ್‍ನ ಫಲಾನುಭವಿಗಳನ್ನು ಕಾಸ್ಪ್‍ನಲ್ಲಿ ವಿಲೀನಗೊಳಿಸಬೇಕು.
ಬದಲಾವಣೆಯು ಕೆಬಿಎಫ್ ಅಡಿಯಲ್ಲಿ ಫಲಾನುಭವಿಗಳ ಮೇಲೆ ಪರಿಣಾಮ ಬೀರದ ರೀತಿಯಲ್ಲಿ ಇರಬೇಕು.
ಕೆಬಿಎಫ್ ಹೊಂದಿರುವ ರೋಗಿಗಳಿಗೆ ಆಗಸ್ಟ್ ಮಧ್ಯದೊಳಗೆ ಕಾಸ್ಪ್‍ನ ಉಸ್ತುವಾರಿ ಹೊಂದಿರುವ ರಾಜ್ಯ ಆರೋಗ್ಯ ಸಂಸ್ಥೆಗೆ ಸಂಪೂರ್ಣ ಮಾಹಿತಿ ನೀಡಬೇಕು. ಕೆಬಿಎಫ್ ಫಲಾನುಭವಿಗಳನ್ನು ಸೆಪ್ಟೆಂಬರ್ 1 ರ ನಂತರ ಎಸ್‍ಎಚ್‍ಎ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ.


